Asianet Suvarna News Asianet Suvarna News

85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಗಮ

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೊಗರಿ ಕಣಜ ಕಲಬುರಗಿ ಸಿದ್ಧವಾಗುತ್ತಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಗಮ ಒಳಗೊಂಡಿದೆ. ಹಾಗಾದ್ರೆ ವಿಶೇಷತೆ ಏನೇನಿದೆ..? ಈ ಕೆಳಗಿನಂತಿದೆ ಸಂಪೂರ್ಣ ಮಾಹಿತಿ.

kalaburagi 85th akhila bharata kannada sahitya sammelana logo released
Author
Bengaluru, First Published Jan 5, 2020, 4:24 PM IST

ಕಲಬುರಗಿ, (ಜ.05): ಕಲಬುಗಿಯಲ್ಲಿ ಇದೇ ಫೆಬ್ರುವರಿ 5,6 ಹಾಗೂ 7 ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛ ಬಿಡುಗಡೆಯಾಗಿದೆ.

ಕಲಬುರಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ ಮೂರ್ತಿ ಆಯ್ಕೆ

ಇಂದು (ಭಾನುವಾರ) ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು. ಜಿಲ್ಲಾಧಿಕಾರಿ ಬಿ. ಶರತ್ ಲಾಂಛನವನ್ನು ಬಿಡುಗಡೆ ಮಾಡಿದರು. ಹಾಗೂ ಇದೇ ವೇಳೆ ಸಮ್ಮೇಳನದ ಸಿದ್ಧತೆಗೆ ಮಾಹಿತಿ ನೀಡಿದರು.

ಈ ವೇಳೆ ಸಮ್ಮೇಳನ ಹಿನ್ನೆಲೆ ರಚಿಸಲಾಗಿರುವ 16 ಸಮಿತಿಗಳ ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು , ಶಾಸಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕರಿಗಳು ಉಪಸ್ಥಿತರಿದ್ದರು.

ಸಾಹಿತ್ಯ ಸಮ್ಮೇಳನದ ತೂಗುಮಂಚದಲ್ಲಿ ಕೃಷ್ಣಕವಿ

ಲಾಂಛನದಲ್ಲಿ ವಿಶೇಷತೆ ಏನಿದೆ..?

kalaburagi 85th akhila bharata kannada sahitya sammelana logo released
 ಕಲಬುರಗಿಯ ಐತಿಹಾಸಿಕ ತಾಣ ಹಾಗೂ ಕವಿರಾಜ ಮಾರ್ಗ ಕೃತಿಯ ಚಿತ್ರಣವನ್ನು ಲಾಂಛನ ಒಳಗೊಂಡಿದೆ. ಕಲ್ಯಾಣ ಕರ್ನಾಟಕದ ಸೊಗಡು, ಸಂಸ್ಕೃತಿ ಸಾರುವ ಚಿತ್ರಗಳು ಒಳಗೊಂಡಿದ್ದು, ಈ ಲಾಂಛನವನ್ನು ಸ್ಥಳೀಯ ಕಲಾವಿದ ಡಾ.ಪಿ. ಪರಶುರಾಮ ವಿನ್ಯಾಸಗೊಳಿಸಿರುವವುದು ವಿಶೇಷ.

ಕನ್ನಡ ಆದರ್ಶ, ಇಂಗ್ಲಿಷ್‌ ವಾಸ್ತವ: ಎಚ್ಚೆಸ್ವಿ

ಕನ್ನಡಾಂಬೆಯ ಭಾವಚಿತ್ರದೊಂದಿಗೆ ಸ್ಥಳೀಯ ಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದೇನವಾಜ್ ದರ್ಗಾ, ಶರಣಬಸವೇಶ್ವರ ದೇವಸ್ಥಾನ, ಕಲಬುರಗಿಯ ಕೋಟೆ, ಚರ್ಚ್, ಬೌದ್ಧ ವಿಹಾರ ಹಾಗೂ ತೊಗರಿ ಬೆಳೆ ಚಿತ್ರಗಳನ್ನು ಲಾಂಛನದಲ್ಲಿ ಬಳಸಲಾಗಿದೆ.
 

Follow Us:
Download App:
  • android
  • ios