ವಿಜಯಪುರ, (ಫೆ.25): ಪಾಕಿಸ್ತಾನ್ ಜಿಂದಾಬಾದ್ ಎನ್ನುವರನ್ನು ಇನ್ಮಂದೆ ಜೈಲಿಗೆ ಕಳಿಸುವುದಿಲ್ಲ. ಗುಂಡೇಟು ನೀಡಿ ಕೊಲ್ಲಲಾಗುವುದು. ಇಂತಹ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ದೊರೆಸ್ವಾಮಿ ಅಂತಹ ಮುದುಕ ಪಾಕಿಸ್ತಾನ್ ಏಜೆಂಟ್ ಇದ್ದಂತೆ ಎಂದು ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

"

ಇಂದು (ಮಂಗಳವಾರ) ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಜನ ಹೋರಾಟ ಮಾಡಿದ್ದಾರೆ. ದೊರೆಸ್ವಾಮಿ ಒಬ್ಬರೇ ಮಾಡಿಲ್ಲ. ಪಾಕಿಸ್ತಾನ್ ಪರ ಘೋಷಣೆ ಕೂಗುವರನ್ನು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ ಅವರು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಕಿಡಿಕಾರಿದರು.

CAA, NPR ಕಾಯ್ದೆ ಜಾರಿ: 'ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲೇಬೇಕು'

ಯತ್ನಾಳ್ ಹೇಳಿಕೆಗೆ ಕಾಂಗ್ರೆಸ್ ಖಂಡನೆ 
ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿಯ ವಿರುದ್ಧದ ಯತ್ನಾಳ್ ಹೇಳಿಕೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. " ಈ ನಾಡಿನ ಸಾಕ್ಷಿಪ್ರಜ್ಞೆ, ಅಪಾರ ಸಾಮಾಜಿಕ ಕಳಕಳಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿಯವರ ಬಗ್ಗೆ, ಶಾಸಕ ಯತ್ನಾಳ್ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿರುವುದು ಖಂಡನೀಯ ಹಾಗೂ ಅಕ್ಷಮ್ಯ. ಬಿಜೆಪಿ ತಕ್ಷಣ  ಕೋಮುವಾದದ ವಿಷ ತಲೆಗೇರಿರುವ ಯತ್ನಾಳ್ ಅವರ ರಾಜೀನಾಮೆ ಪಡೆದು, ದೊರೆಸ್ವಾಮಿಯವರ ಕ್ಷಮೆ ಯಾಚಿಸಲಿ ಎಂದು ಟ್ವೀಟ್‌ನಲ್ಲಿ ಆಗ್ರಹಿಸಿದೆ.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿ ಅವರು ಹಲವಾರು ಜನಪರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದು, ಇದೀಗ ಸಿಎಎ ವಿರೋಧಿ ಹೋರಾಟದಲ್ಲಿಯೂ ಕಾಣಿಸಿಕೊಂಡಿದ್ದಾರೆ. 

 #NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"