ಬೆಂಗಳೂರು,(ಮಾ.22): ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗೊಳ್ಳುತ್ತಿದ್ದು, ಈ ಬಗ್ಗೆ ಸಿಎಂ ಯಡಿಯೂರಪ್ಪ ಸರಣಿ ಸಭೆಗಳನ್ನ ನಡೆಸಿದ್ದಾರೆ.

 ಇಂದು (ಭಾನುವಾರ) ಜನತಾ ಕರ್ಫ್ಯೂ ಪಾಲಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಧವಣಗಿರಿ ನಿವಾಸದಲ್ಲಿ ಕುಳಿತುಕೊಂಡೇ ಸಭೆಗಳನ್ನ ನಡೆಸುತ್ತಿದ್ದಾರೆ.

ಜನತಾ ಕರ್ಫ್ಯೂ: ಮನೆಯಲ್ಲೇ ಉಳಿದ ಸಿಎಂ ಯಡಿಯೂರಪ್ಪ

ಸಿಎಂ ಕರೆಗೆ ಕಾರು ಚಲಾಯಿಸಿಕೊಂಡು ಹೋದ ಸಚಿವ
ಹೌದು...ಮಹಾಮಾರಿ ವೈರಸ್ ತಡೆಗೆ ಕೆಲ ಮುಂಜಾಗ್ರತಾ ಕ್ರಮಕೈಗೊಳ್ಳಲು ಯಡಿಯೂರಪ್ಪ ಕರೆದ ತುರ್ತು ಸಭೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಸಿಎಂ ಮನೆ ದೌಡಾಯಿಸುರುವುದು ವಿಶೇಷ.

ಗೃಹ ಸಚಿವರು ಅಂದ್ಮೇಲೆ ಅವರಿಗೆ ಎಸ್ಕಾರ್ಟ್, ಗನ್ ಮ್ಯಾನ್, ಪಿಎಗಳು ಮತ್ತು ಕಾರು ಡ್ರೈವರ್ ಇದ್ದೇ ಇರುತ್ತಾರೆ. ಆದ್ರೆ, ಸಿಎಂ ಪೋನ್ ಮಾಡಿದ ಕೂಡಲೇ ಅಂಗರಕ್ಷಕನ್ನ ಬಿಟ್ಟು ಸ್ವಯಂ ಕಾರು ಚಲಾಯಿಸಿಕೊಂಡು ಸಿಎಂ ನಿವಾಸಕ್ಕೆ ತೆರಳಿ ಸಭೆಯಲ್ಲಿ ಪಾಲ್ಗೊಂಡರು.

ಇನ್ನು ಈ ಸಭೆಯಲ್ಲಿ ಸಚಿವ ಸುಧಾಕರ, ಸಿಎಸ್ ವಿಜಯ ಭಾಸ್ಕರ್ ಮತ್ತು ಪೋಲಿಸ್ ಮಹಾನಿರ್ದೇಶಕ ಪ್ರವಿಣ್ ಸೂದ್ ಭಾಗಿಯಾಗಿದ್ದರು.