Asianet Suvarna News Asianet Suvarna News

ಕಲಬುರಗಿಯಲ್ಲಿ ಮತ್ತೊಂದು ಕೊರೋನಾ: ಜನತೆಗೆ ಶ್ರೀರಾಮುಲು ವಿಶೇಷ ಮನವಿ

ಕಲಬುರಗಿಯಲ್ಲಿ ಮೃತಪಟ್ಟಿದ್ದ ವೃದ್ಧನ ಮಗಳಿಗೆ ಕೊರೋನಾ ವೈರಸ್ ಇರುವುದು ವರದಿಯಿಂದ ತಿಳಿದುಬಂದಿದ್ದು, ಜಿಲ್ಲೆಯ ಜನರು ಮತ್ತಷ್ಟು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜನತೆಗೆ ಶ್ರೀರಾಮುಲು ಅಭಯ

Health Minister B Sriramulu Reacts On One More Coronavirus positive case in kalaburagi
Author
Bengaluru, First Published Mar 15, 2020, 9:03 PM IST

ಕಲಬುರಗಿ, [ಮಾ.15]: ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ವೈರಸ್​ ಸೋಂಕು ಪತ್ತೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಕೊರೋನಾದಿಂದ ಬಳಲುತ್ತಿದ್ದ 76 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಇಂದು (ಭಾನುವಾರ) ಮೃತ ವೃದ್ಧನ ಮಗಳಿಗೆ ಕೊರೋನಾ ಪಾಸಿಟೀವ್ ಬಂದಿದೆ.

ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್​ ಮೂಲಕ ಖಚಿತಪಡಿಸಿದ್ದಾರೆ. ಇದರಿಂದ ಕಲಬುರಗಿ ಜನತೆ ಮತ್ತಷ್ಟು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಜನತೆಗೆ ಯಾವುದೇ ಕಾರಣಕ್ಕೂ ಭಯಭೀತರಾಗಬೇಡಿ ಎಂದು ಧೈರ್ಯದ ಮಾತುಗಳನ್ನ ಹೇಳಿದ್ದಾರೆ.

ಕಲಬುರಗಿಯಲ್ಲಿ ಮತ್ತೊಂದು ಕೊರೋನಾ ಕೇಸ್ ಪತ್ತೆ, ಮೃತ ವೃದ್ಧನ ಪುತ್ರಿಗೆ ಸೋಂಕು

ಕಲಬುರಗಿ ಜನತೆಗೆ ಶ್ರೀರಾಮುಲು ಅಭಯ
ಮೃತ ವ್ಯಕ್ತಿಯ ನಾಲ್ವರು ಹತ್ತಿರದ ಸಂಬಂಧಿಕರಿಗೆ ಶಂಕೆ ಇತ್ತು. ನಾಲ್ವರ ಕಫ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ನಿನ್ನೆಯೇ [ಶನಿವಾರ] ಮೂವರ ವರದಿ ನೆಗೆಟಿವ್ ಬಂದಿತ್ತು. 

ಇಂದು [ಭಾನುವಾರ] ಮೃತನ ಹತ್ತಿರದ ಸಂಬಂಧಿಯೊಬ್ಬರ ವರದಿ ಕೊರೋನಾ ಪಾಸಿಟಿವ್ ಬಂದಿದೆ. ಇದರಿಂದ ಜನ ಭಯಭೀತರಾಗಬೇಕಾಗಿಲ್ಲ.  ಸರಕಾರ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜನರೂ ಜಾಗೃತೆಯಿಂದಿರಿ. ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಕರೆ ನೀಡಿದ್ದಾರೆ.

Follow Us:
Download App:
  • android
  • ios