ಏತ ನೀರಾವರಿಗಳ ತನಿಖೆಗೆ ರಾಜ್ಯ ಸರ್ಕಾರ ಸಜ್ಜು..!
ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಹಾಗೂ ಕಾಮಗಾರಿ ಚಾಲ್ತಿಯಲ್ಲಿರುವ ಏತ ನೀರಾವರಿ ಯೋಜನೆಗಳ ಕಾರ್ಯವೈಖರಿ ಕುರಿತು ಆಡಿಟ್ ಮಾಡಲು ನಿರ್ಧರಿಸಿ, ಎಸ್.ರವಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತಿದೆ.
ಗಿರೀಶ್ ಗರಗ
ಬೆಂಗಳೂರು(ಆ.11): ರಾಜ್ಯದ ಏತ ನೀರಾವರಿ ಯೋಜನೆಗಳಿಂದಾಗುತ್ತಿರುವ ಪ್ರಯೋಜನ ಹಾಗೂ ಅವುಗಳ ಕಾರ್ಯನಿರ್ವಹಣೆಯನ್ನು ಆಡಿಟ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕಾಗಿ ವಿಧಾನಪರಿಷತ್ ಸದಸ್ಯ ಎಸ್.ರವಿ ನೇತೃತ್ವದಲ್ಲಿ ಸಮಿತಿರಚಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿ ಆದೇಶ ಹೊರಡಿಸಲಿದೆ.
ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ ಬಜೆಟ್‌ನಲ್ಲಿ ಸರಾಸರಿ 10ರಿಂದ 20 ಸಾವಿರ ಕೋಟಿ ರು.ವರೆಗೆ ಅನುದಾನ ಘೋಷಿಸಲಾಗುತ್ತಿದೆ. ಅದರಲ್ಲಿ ಶೇ.20ಕ್ಕಿಂತ ಹೆಚ್ಚಿನ ಮೊತ್ತವನ್ನು ಏತ ನೀರಾವರಿ ಯೋಜನೆಗಳಿಗಾಗಿ ಮೀಸಲಿಡಲಾಗುತ್ತಿದೆ. ಆದರೆ, ಈ ಏತ ನೀರಾವರಿ ಯೋಜನೆಗಳ ಅನುಷ್ಠಾನ ವಿಳಂಬ ವಾಗುತ್ತಿರುವುದಲ್ಲದೆ, ಅವುಗಳ ಕಾರ್ಯನಿರ್ವಹಣೆ ಬಗ್ಗೆಯೂ ಹಲವು ಅನುಮಾನಗಳಿವೆ. ಈ ಬಗ್ಗೆ ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವ ಕುಮಾರ್ ಅವರಿಗೆ ಶಾಸಕರು ಸಾಕಷ್ಟು ದೂರುಗಳನ್ನು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಹಾಗೂ ಕಾಮಗಾರಿ ಚಾಲ್ತಿಯಲ್ಲಿರುವ ಏತ ನೀರಾವರಿ ಯೋಜನೆಗಳ ಕಾರ್ಯವೈಖರಿ ಕುರಿತು ಆಡಿಟ್ ಮಾಡಲು ನಿರ್ಧರಿಸಿ, ಎಸ್.ರವಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತಿದೆ.
ವಿಜಯಪುರ ಜಿಲ್ಲೆಯ 99 ಕೆರೆಗಳ ಭರ್ತಿಗೆ ಹರಿದ ನೀರು
ನೂರಾರು ಏತ ನೀರಾವರಿ ಯೋಜನೆಗಳು: ರಾಜ್ಯ ದಲ್ಲಿ 1970ರಿಂದಲೂಏತನೀರಾವರಿಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಏತ ನೀರಾವರಿ ಯೋಜನೆಗಳ ಮೂಲಕ ಕೃಷ್ಣಾ, ಕಾವೇರಿ, ತುಂಗ- ಭದ್ರಾ, ಹೇಮಾವತಿ, ಗೋದಾವರಿ, ಭದ್ರಾ ಹೀಗೆ ಹಲವು ನದಿಗಳಿಂದ ನೀರನ್ನು ಪಡೆದು, ಆ ನೀರನ್ನು ಕೆರೆಗಳ ಭರ್ತಿ ಮತ್ತು ನಾಲೆಗಳಿಗೆ ಹರಿಸುವ ಮೂಲಕ ಕೃಷಿ ಚಟುವಟಿಕೆ ಹಾಗೂ ಕುಡಿಯುವ ಉದ್ದೇಶಕ್ಕೆ ಬಳಸುವಂತೆ ಮಾಡಲಾಗುತ್ತಿದೆ. ಜಲಸಂಪನ್ಮೂಲ ಇಲಾಖೆ ಮಾಹಿತಿಯಂತೆ ಕೃಷ್ಣಾ ಕಣಿವೆ ವ್ಯಾಪ್ತಿಯ ಲ್ಲಿಯೇ 100 ಕ್ಕೂ ಹೆಚ್ಚಿನ ಏತ ನೀರಾವರಿ ಯೋಜನೆ ಗಳಿದ್ದು, ರಾಜ್ಯದಲ್ಲಿ 150ಕ್ಕೂಹೆಚ್ಚಿನಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಹಾಗೂ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಏತ ನೀರಾವರಿ ಕುರಿತು ದೂರು:
ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಡಿಸಿಎಂ ಸರಣಿ ಸಭೆ ನಡೆಸಿದ್ದರು. ಈ ವೇಳೆ ಏತ ನೀರಾವರಿ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕಾಗುತ್ತಿರುವ ನಷ್ಟ, ಯೋಜನೆಗಳಿಂದ ಯಾವುದೇ ಪ್ರಯೋಜನವಾ ಗುತ್ತಿಲ್ಲ ಎಂಬಂತಹ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಯೋಜನೆ ಗಳ ಕುರಿತು ವರಿಶೀಲಿಸಿ, ವರದಿ ನೀಡಲು ರವಿ ನೇತೃತ್ವದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಯಾವ ಅಂಶಗಳ ಕುರಿತು ಪರಿಶೀಲನೆ?: ಸರ್ಕಾರದಿಂದ ರಚಿಸಲಾಗುವ ಸಮಿತಿಯು, ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಂಡನಂತರ ಎಷ್ಟು ಕೆರೆಗಳನ್ನು ಭರ್ತಿ ಮಾಡಿ ಎಷ್ಟು ಪ್ರಮಾಣದ ಭೂ ಪ್ರದೇಶಕ್ಕೆ ನೀರುಣಿಸಲಾಗಿದೆ? ಕೆಲ ಏತ ನೀರಾವರಿ ಯೋಜನೆಗಳು ನೀರಿನ ಮೂಲಗಳಿಲ್ಲದೆಯೇ ಅನುಷ್ಠಾನಗೊಂಡಿದ್ದು, ಅವುಗಳನ್ನು ಪತ್ತೆ ಮಾಡು ವುದು. ನೀರನ್ನು ಕೆರೆಗಳಿಗೆ ಹರಿಸಲು ಜಲಮೂಲವಿ ದ್ದರೂ ಪಂಪ್, ಮೋಟಾರು ಹಾಳಾಗಿ ದುರಸ್ತಿಯಾಗ ದಿರುವುದು, ತಾಂತ್ರಿಕವಾಗಿ ವಿಫಲವಾಗಿರುವ ಯೋಜನೆಗಳು ಹೀಗೆ ವಿವಿಧ ಕಾರಣಗಳಿಂದ ಸಗಿತ ಗೊಂಡಿರುವ ಯೋಜನೆಗಳನ್ನು ಪತ್ತೆ ಮಾಡಿ ವರದಿ ಸಿದ್ದಪಡಿಸುವ ಹೊಣೆಯನ್ನು ಹೊರಿಸಲಾಗುತ್ತಿದೆ. ಸಮಿತಿಗೆ
ರಾಜ್ಯದ ಎಲ್ಲ ಏತ ನೀರಾವರಿ ಯೋಜನೆಗಳ ಅಧ್ಯಯನ ನಡೆಸುವ ಸಮಿತಿಯು, ಅವುಗಳನ್ನು ಯಶಸ್ಸುಗೊಳಿಸಲು ಕೈಗೊಳ್ಳಬೇಕಾದ ಅಂಶಗಳ ಬಗ್ಗೆಯೂ ತಿಳಿಸಬೇಕಿದೆ. ಪ್ರಮುಖವಾಗಿ ಜಲಮೂಲ ವಿಲ್ಲದ, ವಂಪ್ -ಮೋಟಾರು ಹಾಳಾಗಿ ಸ್ಥಗಿತಗೊಂಡಿ ರುವ ಯೋಜನೆಗಳಿಂದ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ಮಾಡುವ ವಿಧಾನವನ್ನೂ ಸಮಿತಿ ತನ್ನ ವರದಿಯಲ್ಲಿ ತಿಳಿಸಬೇಕಿದೆ.
ಏತ ನೀರಾವರಿ ಯೋಜನೆಗಳ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ನನ್ನ ನೇತೃತ್ವದಲ್ಲಿ ಸಮಿತಿ ರಚನೆಗೆ ಡಿ.ಕೆ. ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಧಿಕೃತವಾಗಿ ಆದೇಶ ಬಂದ ಕೂಡಲೇ, ಏತ ನೀರಾವರಿ ಯೋಜನೆಗಳಿಂದ ಸರ್ಕಾರಕ್ಕಾಗುತ್ತಿರುವ ನಷ್ಟ, ಜನರಿಗೆ ಯಾವುದೇ ಪ್ರಯೋಜನ ಆಗದಿರುವುದು ಹಾಗೂ ಯೋಜನೆ ಯನ್ನು ಯಾವ ರೀತಿ ಯಶಸ್ವಿಯಾಗಿಸಬಹುದು ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಎಸ್.ರವಿ ತಿಳಿಸಿದ್ದಾರೆ.