Asianet Suvarna News Asianet Suvarna News

ಗುರುವಾರ ರಾಜ್ಯಕ್ಕೆ ಮೋದಿ, ಬೆಂಗಳೂರಿನ ಕೆಲವು ಕಡೆ ಸಂಚಾರ ನಿಷೇಧ

ಪ್ರಧಾನಿ ನರೇಂದ್ರ ಮೋದಿ ನಾಳೆ ತುಮಕೂರಿಗೆ ಆಗಮಿಸಲಿದ್ದಾರೆ.  2ನೇ ಬಾರಿ ಪ್ರಧಾನಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ವಿಶೇಷ ವಿಮಾನದ ಮೂಲಕ ಮೊದಲು ಬೆಂಗಳೂರಿಗೆ ಆಗಮಿಸಲಿದ್ದಾರೆ. ಇದ್ರಿಂದ ವಾಹನ ಸವಾರರು  ಬದಲಿ ಮಾರ್ಗ ಬಳಸುವುದು ಒಳಿತು.  ಇನ್ನು ಮೋದಿಯವರ ರಾಜ್ಯ ಪ್ರವಾಸದ ದಿನಚರಿ ಇಲ್ಲಿದೆ.

Full details of PM Modi to visit Karnataka on Jan 2 3
Author
Bengaluru, First Published Jan 1, 2020, 7:37 PM IST

ಬೆಂಗಳೂರು/ತುಮಕೂರು, [ಜ.01]: ಪ್ರಧಾನಿ ನರೇಂದ್ರ ಮೋದಿ ನಾಳೆ [ಗುರುವಾರ] ತುಮಕೂರಿಗೆ ಆಗಮಿಸಲಿದ್ದು, ರೈತರ ಸಮಾವೇಶದಲ್ಲಿ  ಅಭಿವೃದ್ಧಿ ಯೋಜನೆಗಳ ಬಗ್ಗೆ  ಭಾಷಣ ಮಾಡಲಿದ್ದಾರೆ. 

ಅದಕ್ಕೂ ಮೊದಲು ಅವರು ಬೆಂಗಳೂರಿನ ಯಲಹಂಕ ಏರ್ಪೋರ್ಸ್ ಗೆ ಬಂದಿಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಮಾರ್ಗಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗಲಿದ್ದು, ಅದಕ್ಕೆ ವಾಹನ ಸವಾರರು ಬೇರೆ ಮಾರ್ಗ ನೋಡಿಕೊಳ್ಳುವುದು ಸೂಕ್ತ.

ತುಮಕೂರಿಗೆ ಮೋದಿ: ಸಿದ್ಧಗಂಗಾ ಮಠಕ್ಕೆ ಭೇಟಿ, ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ!

ಹಾಗಾದ್ರೆ, ಮೋದಿ ಅವರ ಗುರುವಾರದ ದಿನಚರಿ ಹೇಗಿದೆ..? ಯಾವೆಲ್ಲ ಮಾರ್ಗಗಳಲ್ಲಿ ಸಂಚರಿಸಲಿದ್ದಾರೆ. ಎನ್ನುವ  ಸಂಪೂರ್ಣ ಟೈಮ್ ಲೈನ್ ಈ ಕೆಳಗಿನಂತಿದೆ. 

ಮೋದಿ time line
* ನಾಳೆ [ಗುರುವಾರ] ಮಧ್ಯಾಹ್ನ 1:20ಕ್ಕೆ ನವದೆಹಲಿಯಿಂದ ಬೆಂಗಳೂರಿನ ಯಲಹಂಕ ಏರ್ಪೋರ್ಸ್ ಗೆ ಆಗಮನ.
* ಮಧ್ಯಾಹ್ನ1:25 ಕ್ಕೆ ಯಲಹಂಕ ಏರ್ಫೊರ್ಸ್  ನಿಂದ ಮಿಗ್-17 ಮೂಲಕ ತುಮಕೂರು ಕಡೆ ಪ್ರಯಾಣ.
* ಮಧ್ಯಾಹ್ನ 2:00 ಗಂಟೆಗೆ ತುಮಕೂರು ವಿವಿ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ಲ್ಯಾಡಿಂಗ್.
* ಮಧ್ಯಾಹ್ನ 2:05 ನಿಮಿಷಕ್ಕೆ ತುಮಕೂರು ವಿವಿ ಹೆಲಿಪ್ಯಾಡ್ ನಿಂದ ಸಿದ್ದಗಂಗಾ ಮಠಕ್ಕೆ ಪ್ರಯಾಣ (ಸುಮಾರು 15 ನಿಮಿಷಗಳ ಕಾಲ ರಸ್ತೆ ನಿರ್ಬಂಧ).
* ಮಧ್ಯಾಹ್ನ 2:15 ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ, ಶ್ರೀ ಗಳ ಗದ್ದುಗೆಗೆ ಗೌರವ ಸಲ್ಲಿಕೆ ನಂತರ ಸಿದ್ದಲಿಂಗ ಸ್ವಾಮೀಜಿಗಳ ಜತೆ ಮಾತುಕತೆ (3:20 ಕ್ಕೆ ಸಿದ್ದಗಂಗಾ ಮಠದಿಂದ ನಿರ್ಗಮನ).
* ಮಧ್ಯಾಹ್ನ 3:30 ನಿಮಿಷಕ್ಕೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 6 ಕೋಟಿ ರೈತ ಕುಟುಂಬಗಳಿಗೆ ನೇರ ವರ್ಗಾವಣೆ ಹಾಗೂ ಕೃಷಿ ಕರ್ಮಣ್ ಪ್ರಶಸ್ತಿ ವಿತರಣೆ ಹಾಗೂ ಮೀನು ಸಾಗಣಿಕೆದಾರರ ಸೌಲಭ್ಯಗಳ ವಿತರಣೆ ಸಮಾರಂಭಕ್ಕೆ ಚಾಲನೆ.
* ಸಂಜೆ 5:05.ಕ್ಕೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ನಿರ್ಗಮನ
* ಸಂಜೆ 5:10 ತುಮಕೂರು ವಿವಿ ಹೆಲಿಪ್ಯಾಡ್ ಗೆ ಆಗಮಿಸಿ ಬೆಂಗಳೂರಿಗೆ ಪ್ರಯಾಣ.
* ಸಂಜೆ 5:50 ಕ್ಕೆ ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ ಗೆ ಆಗಮನ. 
* ಸಂಜೆ 5:50 ಕ್ಕೆ ಹೆಚ್ ಎಎಲ್ ನಿಂದ ಸುರಂಜನ ದಾಸ್ ರಸ್ತೆಯ ಡಿಆರ್ ಡಿಓ ಯುವ ವಿಜ್ಙಾನಗಳ ಕಾರ್ಯಕ್ರಮದಲ್ಲಿ ಭಾಗಿ.
* ಸಂಜೆ 7:05 ನಿಮಿಷಕ್ಕೆ DRDOದಿಂದ ರಸ್ತೆ ಮೂಲಕ ನಿರ್ಗಮನ.
* ಸಂಜೆ 7:20 ಕ್ಕೆ ರಾಜಭವನಕ್ಕೆ ಆಗಮನ. (ಸುರಂಜನ ದಾಸ್ ರಸ್ತೆ,ಹೆಚ್ ಎಎಲ್ ರಸ್ತೆ, ಎಂ.ಜಿ ರಸ್ತೆ, ರಾಜಭವನ, ಸಂಚಾರ ನಿಷೇಧ)

* ಮರುದಿನ (ಶುಕ್ರವಾರ) (3/1/2020) 
* ಬೆಳಗ್ಗೆ 9:40 ಕ್ಕೆ ರಾಜಭವನದಿಂದ ರಸ್ತೆ‌ಮೂಲಕ ಜಿಕೆವಿಕೆಗೆ ಆಗಮನ
* ಬೆಳಗ್ಗೆ 10:00 ರಿಂದ 11:05 ನಿಮಿಷದವರೆಗೆ 107 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ.
* ಬೆಳಗ್ಗೆ 11:10 ಕ್ಕೆ ರಸ್ತೆ ಮೂಲಕ HALಗೆ 
ವ ಬೆಳಗ್ಗೆ 11:30 ಕ್ಕೆ  HALನಿಂದ ದೆಹಲಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ.

ಬಳ್ಳಾರಿ ರಸ್ತೆ, ಹೆಬ್ಬಾಳ ಫ್ಲೈ ಓವರ್, ಮೇಕ್ರಿ ಸರ್ಕಲ್, ಟ್ರಿನಿಟಿ ಸರ್ಕಲ್ ಮಾರ್ಗವಾಗಿ HALಗೆ ತೆರಳಲಿದ್ದಾರೆ.  ಈ ಹಿನ್ನಲೆ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಬದಲಿ ಮಾರ್ಗ ಬಳಸುವುದು ಒಳಿತು.

Follow Us:
Download App:
  • android
  • ios