Asianet Suvarna News Asianet Suvarna News

ದೇಶದ ಅತ್ಯುತ್ತಮ ಟಾಪ್‌ 20 ಸ್ಮಾರ್ಟ್‌ಸಿಟಿಗಳಲ್ಲಿ ದಾವಣಗೆರೆ!

ದೇಶದ ಅತ್ಯುತ್ತಮ ಟಾಪ್‌ 20 ಸ್ಮಾರ್ಟ್‌ಸಿಟಿಗಳಲ್ಲಿ ದಾವಣಗೆರೆ| ಟಾಪ್‌ 20 ನಗರಗಳಿಗೆ ‘100 ದಿವಸದ ಚಾಲೆಂಜ್‌’ ಸ್ಪರ್ಧೆ| ಬಾಟಮ್‌-20ಯಲ್ಲಿರುವ ನಗರಗಳನ್ನು 100 ದಿನದಲ್ಲಿ ಮೇಲೆತ್ತಬೇಕು

Davanagere Gains 15th place Out Of 20 top Smart Cities of india
Author
Bangalore, First Published Feb 10, 2020, 8:04 AM IST

ನವದೆಹಲಿ[ಫೆ.10]: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ‘ಸ್ಮಾರ್ಟ್‌ ಸಿಟಿ’ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ದೇಶದ ಟಾಪ್‌ 20 ನಗರಗಳ ಪೈಕಿ ದಾವಣಗೆರೆ (15ನೇ ಸ್ಥಾನ) ಕೂಡಾ ಸ್ಥಾನ ಪಡೆದುಕೊಂಡಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಕಳಪೆ ಸಾಧನೆ ಮಾಡಿದ ಮತ್ತೊಂದು ನಗರವನ್ನು ಮೇಲಕ್ಕೆತ್ತುವ ಹೊಣೆಯನ್ನೂ ಇದೀಗ ದಾವಣಗೆರೆಗೆ ವಹಿಸಲಾಗುತ್ತಿದೆ.

ಸ್ಮಾರ್ಟ್‌ಸಿಟಿ ಯೋಜನೆಯನ್ನು ಮತ್ತಷ್ಟುಚುರುಕುಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಟಾಪ್‌ 20 ನಗರಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಯೋಜನೆಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ಟಾಪ್‌-20 ನಗರಗಳನ್ನು, ಹಿಂದೆ ಬಿದ್ದಿರುವ ಬಾಟಮ್‌-20 ನಗರಗಳನ್ನು ಮೇಲೆತ್ತಲು ‘ಸೋದರ ನಗರ’ಗÜಳೆಂದು ಸಂಯೋಜಿಸಲಾಗಿದೆ.

ಟಾಪ​ರ್ಸ್

ಪ್ರಧಾನಿ ಮೋದಿ ಅವರ ತವರು ರಾಜ್ಯ ಅಹಮದಾಬಾದ್‌ ಯೋಜನೆ ಅನುಷ್ಠಾನದಲ್ಲಿ ನಂ.1 ಸ್ಥಾನ ಪಡೆದಿದೆ. ನಂತರದ ಟಾಪ್‌-20 ಸ್ಥಾನಗಳಲ್ಲಿ ಕ್ರಮವಾಗಿ ನಾಗಪುರ, ತಿರುಪ್ಪುರ, ರಾಂಚಿ, ಭೋಪಾಲ್‌, ಸೂರತ್‌, ಕಾನ್ಪುರ, ಇಂದೋರ್‌, ವಿಶಾಖಪಟ್ಟಣ, ವೆಲ್ಲೂರು, ವಡೋದರಾ, ನಾಸಿಕ್‌, ಆಗ್ರಾ, ವಾರಾಣಸಿ, ದಾವಣಗೆರೆ, ಕೋಟಾ, ಪುಣೆ, ಉದಯಪುರ, ಡೆಹ್ರಾಡೂನ್‌ ಹಾಗೂ ಅಮರಾವತಿ ಇವೆ.

ಸೋದರ ನಗರಗಳು:

ಈ ನಗರಗಳನ್ನು ಯೋಜನೆ ಅನುಷ್ಠಾನದಲ್ಲಿ ಹಿಂದೆ ಬಿದ್ದಿರುವ ಬಾಟಮ್‌-20 ನಗರಗಳ ಜತೆ ಸಂಯೋಜಿಸಿ ಮಾರ್ಗದರ್ಶನ ಮಾಡುವಂತೆ ಸೂಚಿಸಲಾಗಿದೆ. ಈ ಪ್ರಕಾರ, ಅಹಮದಾಬಾದ್‌ ನಗರವು ಬಾಟಮ್‌-20ಯಲ್ಲಿರುವ ಚಂಡೀಗಢಕ್ಕೆ, ವಾರಾಣಸಿಯು ಅಮೃತಸರಕ್ಕೆ ಸಹಾಯ ಮಾಡಲಿವೆ. ಶಾಖಪಟ್ಟಣ ಹಾಗೂ ಸೂರತ್‌ಗಳು ಕ್ರಮವಾಗಿ ದಿಯು ಹಾಗೂ ಸಹಾರನ್‌ಪುರಗಳಿಗೆ, ಭೋಪಾಲ್‌ ನಗರವು ಮಿಜೋರಂನ ಐಜ್ವಾಲ್‌ಗೆ ಸಹಾಯಹಸ್ತ ಚಾಚಲಿವೆ.

100 ದಿನಗಳ ಚಾಲೆಂಜ್‌:

ಈ ರೀತಿಯಾಗಿ ‘ಸೋದರ ನಗರ’ಗಳಾಗಿ ಜೋಡಿಯಾಗಲಿರುವ ನಗರಗಳು ಫೆಬ್ರವರಿ 20ರಂದು ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. ಸಹಿ ಹಾಕಿದ 100 ದಿನಗಳಲ್ಲಿ ಹಿಂದೆ ಬಿದ್ದಿರುವ ನಗರಗಳನ್ನು ರಾರ‍ಯಂಕ್‌ನಲ್ಲಿ ಮೇಲೆತ್ತಲು ‘100 ದಿವಸಗಳ ಚಾಲೆಂಜ್‌’ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

Follow Us:
Download App:
  • android
  • ios