ಹುನಗುಂದ: ಕೂಡಲಸಂಗಮದ ವಿಶ್ವಗುರು ಬಸವಣ್ಣನವರ ಐಕ್ಯ ಮಂಟಪದಲ್ಲಿರುವ ಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಭಕ್ತರು ಎಸೆಯುವ ನಾಣ್ಯದಿಂದ ಈ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. 

ಕೃಷ್ಣಾ-ಮಲಪ್ರಭಾ ನದಿಗಳ ಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪದ ದರ್ಶನಕ್ಕೆ ದೇಶ, ವಿದೇಶದಿಂದ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಬರುವ ಭಕ್ತರೆಲ್ಲರೂ ಐಕ್ಯ ಮಂಟಪದಲ್ಲಿನ ಲಿಂಗಕ್ಕೆ ನಾಣ್ಯ ಎಸೆಯುತ್ತಾರೆ. 

ಇದರಿಂದ ಅದಕ್ಕೆ ಧಕ್ಕೆಯಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಭಕ್ತರು ನಾಣ್ಯ ಎಸೆಯುವುದನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ತಡೆಯಬೇಕೆಂದು ಆಗ್ರ​ಹಿ​ಸ​ಲಾ​ಗಿದೆ. ಕಾಣಿಕೆಯನ್ನು ಹುಂಡಿಯಲ್ಲಿ ಹಾಕಿ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಫಲಕ ಹಾಕಿದೆ. 

ಆದರೆ, ಇದನ್ನು ಗಮನಿಸಿದ ಎಲ್ಲ ಭಕ್ತರು ಲಿಂಗದ ಮೇಲೆಯೇ ನಾಣ್ಯ ಎಸೆ​ಯು​ತ್ತಿ​ರು​ವುದ ಸಾಮಾನ್ಯವಾಗಿ ಬಿಟ್ಟಿದೆ.