ಮೈಸೂರು, [ಮಾ.21]: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಇಂದು [ಶನಿವಾರ] ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಓರ್ವ ವ್ಯಕ್ತಿ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ.

 ಈ ವ್ಯಕ್ತಿ ದುಬೈನಿಂದ ಬೆಂಗಳೂರು ಬಳಿಕ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾನೆ. ರಾಜ್ಯದಲ್ಲಿ ಇಂದು ಒಂದೇ ದಿನ 5 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಂತಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. 

ಶನಿವಾರ ಒಂದೇ ದಿನ 4 ಕೊರೋನಾ ಪತ್ತೆ: ಕರುನಾಡಲ್ಲಿ 19ಕ್ಕೆ ಏರಿಕೆ

ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಸಚಿವ ಶ್ರೀ ರಾಮುಲು ದೃಢಪಡಿಸಿದ್ದಾರೆ. ಸೋಂಕಿತ ವ್ಯಕ್ತಿಗೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಪತ್ತೆಯಾದ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ತುರ್ತು ಸುದ್ದಿಗೋಷ್ಠಿ ಕರೆದಿದ್ದು, ಜಿಲ್ಲೆಯಲ್ಲಿ ಹೈ ಅಲರ್ಟ್​ ಘೋಷಣೆಯಾಗುವ ಸಾಧ್ಯತೆಗಳಿವೆ.

ಮೈಸೂರು ಸೋಂಕಿತನ ಟ್ರಾವೆಲ್ ಹಿಸ್ಟರಿ

* ಮಾರ್ಚ್ 19- ಏರ್ ಇಂಡಿಯಾ ಫ್ಲೈಟ್ ನಲ್ಲಿ ದುಬೈನಿಂದ ಬೆಂಗಳೂರು

* ಮಾರ್ಚ್ 20-ಬೆಂಗಳೂರಿಂದ ಮೈಸೂರು

* ಮಾರ್ಚ್ 20- ಟ್ಯಾಕ್ಸಿಯಲ್ಲಿ ಮೈಸೂರಿಗೆ

* ಮಾರ್ಚ್ 20- ಮಂಡ್ಯದ ಟೀ ಕುಡಿದ

* ಮಾರ್ಚ್ 20 ಸಂಜೆ ಜ್ವರ, ಕೆಮ್ಮು ಆರಂಭ

* ಮಾ. 20 ಸಂಜೆ KR ಆಸ್ಪತ್ರೆಗೆ ದಾಖಲು