Asianet Suvarna News Asianet Suvarna News

ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ರೇಪ್‌ ಕೇಸ್‌ ಸಿಐಡಿ ತನಿಖೆಗೆ

ಪ್ರಕರಣಗಳ ಕುರಿತು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತು. ಅಂತೆಯೇ ಸಿಐಡಿಗೆ ಪ್ರಕರಣಗಳ ದಾಖಲೆಗಳನ್ನು ಸಂಜಯನಗರ ಠಾಣೆ ಪೊಲೀಸರು ಸಲ್ಲಿಸಿದ್ದಾರೆ.
 

Congress MLA Vinay Kulkarni rape case for CID investigation grg
Author
First Published Oct 11, 2024, 4:37 AM IST | Last Updated Oct 11, 2024, 4:37 AM IST

ಬೆಂಗಳೂರು(ಅ.11):   ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಧಾರವಾಡ ಗ್ರಾಮಾಂತರ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಅತ್ಯಾಚಾರ ಕೇಸ್ ಮತ್ತು ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಹಾಗೂ ಹಾವೇರಿ ಜಿಲ್ಲೆಯ ಮಹಿಳೆ ವಿರುದ್ದ ಶಾಸಕರು ದಾಖಲಿಸಿರುವ ಬ್ಲ್ಯಾಕ್ ಮೇಲ್ ಪ್ರಕರಣಗಳ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ಸರ್ಕಾರವು ವಹಿಸಿದೆ. ತನಗೆ ಜೀವ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸಂಜಯನಗರ ಠಾಣೆಗೆ ಹಾವೇರಿ ಜಿಲ್ಲೆಯ ಮಹಿಳೆಯೊಬ್ಬರು ದೂರು ನೀಡಿದ್ದರು.

ಇದಕ್ಕೆ ಪ್ರತಿಯಾಗಿ ತನಗೆ 2 ಕೋಟಿ ರು.ಗೆ ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಆ ಮಹಿಳೆ ಹಾಗೂ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ರಾಕೇಶ್ ಶೆಟ್ಟಿ ವಿರುದ್ಧ ಶಾಸಕರು ದೂರು ದಾಖಲಿಸಿದ್ದಾರೆ. ಈ ಎರಡು ದೂರುಗಳನ್ನು ಸ್ವೀಕರಿಸಿ ಸಂಜಯನಗರ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಈ ಪ್ರಕರಣಗಳ ಕುರಿತು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತು. ಅಂತೆಯೇ ಸಿಐಡಿಗೆ ಪ್ರಕರಣಗಳ ದಾಖಲೆಗಳನ್ನು ಸಂಜಯನಗರ ಠಾಣೆ ಪೊಲೀಸರು ಗುರುವಾರ ಸಲ್ಲಿಸಿದ್ದಾರೆ.

ರೈತ ಸಂಘದ ನಾಯಕಿ ಮೇಲೆ 3 ಬಾರಿ ಅತ್ಯಾಚಾರಗೈದ ಶಾಸಕ ವಿನಯ್‌ ಕುಲಕರ್ಣಿ: ಧರ್ಮಸ್ಥಳದಲ್ಲೂ ಬಿಡಲಿಲ್ಲ!

ಯಾವ್ಯಾವ ಪ್ರಕರಣ? 

1 ಧಾರವಾಡ ಗ್ರಾಮಾಂತರ ಶಾಸಕ ವಿನಯ್ ಕುಲಕರ್ಣಿ ತನಗೆ ಜೀವ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ್ದಾರೆ ಎಂದು ಹಾವೇರಿ ಜಿಲ್ಲೆಯ ಮಹಿಳೆ ಬೆಂಗೂರಿನ ಸಂಜಯನಗರ ಠಾಣೆಯಲ್ಲಿ ಹೂಡಿರುವ ಪ್ರಕರಣ 

2 ತಮ್ಮ ಮೇಲೆ ಸುಳ್ಳು ಆರೋಪ ಮಾಡಿ 2 ಕೋಟಿ ರು. ನೀಡುವಂತೆ ಬ್ಲಾಕ್‌ಮೇಲ್ ಮಾಡಿದ್ದಾರೆಂದು ಆರೋಪಿಸಿ ಆ ಮಹಿಳೆ ಹಾಗೂ ಖಾಸಗಿ ವಾಹಿನಿ ವಿರುದ ವಿನಯ್ ಕುಲಕರ್ಣಿ ಸಂಜಯ ನಗರ ಠಾಣೆಯಲ್ಲಿ ದಾಖಲಿಸಿರುವ ಕೇಸ್

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ! 

ಶಾಸಕ ವಿನಯ್ ವಿರುದ್ಧ ಸಿಐಡಿ ತನಿಖೆ ಎಂದು ಬುಧವಾರ ಕನ್ನಡಪ್ರಭ ವರದಿ ಮಾಡಿತ್ತು.

Latest Videos
Follow Us:
Download App:
  • android
  • ios