ಸಾಕಲು ದನಗಳನ್ನ ಕೊಂಡೊಯ್ಯುತ್ತಿದ್ದ ರೈತನ ಹತ್ಯೆ: 25 ಲಕ್ಷ ರೂ. ಪರಿಹಾರಕ್ಕೆ ಡಿಕೆಶಿ ಆಗ್ರಹ

ಹಸುಗಳನ್ನು ಸಾಕುವುದಕ್ಕೆಂದು ರಶೀದಿ ಸಮೇತವಾಗಿ ಲಾರಿಗಳಲ್ಲಿ ಹಸುಗಳನ್ನು ತುಂಬಿಕೊಂಡು ಹೋಗುವ ರೈತನನ್ನು ಕನಕಪುರದಲ್ಲಿ ಹತ್ಯೆ ಮಾಡಲಾಗಿದೆ. ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಕೊಡಿ.

Cattle taking farmer Killed at Kanakapura DK Shivakumar demands 25 lakh compensation sat

ಶಿವಮೊಗ್ಗ (ಏ.03): ಹಸುಗಳನ್ನು ಸಾಕುವುದಕ್ಕೆಂದು ರಶೀದಿ ಸಮೇತವಾಗಿ ಲಾರಿಗಳಲ್ಲಿ ಹಸುಗಳನ್ನು ತುಂಬಿಕೊಂಡು ಹೋಗುವ ರೈತನನ್ನು ಕನಕಪುರದಲ್ಲಿ ಹತ್ಯೆ ಮಾಡಲಾಗಿದೆ. ಸರ್ಕಾರದಿಂದ ಕೂಡಲೇ 25 ಲಕ್ಷ ರೂ. ಪರಿಹಾರ ಕೊಟ್ಟು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೂಡ್ಲಿಗಿ ಮಾಜಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಕನಕಪುರದಲ್ಲಿ ಹತ್ಯೆಯಾಗಿದೆ. ಪೊಲೀಸರ ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ನಾನು ಈ ಬಗ್ಗೆ ಯಾವುದೇ ಹೇಳಿಕೆ ಕೊಟ್ಟಿರಲಿಲ್ಲ. ಆದರೆ, ಕೆಲವರು ರಾಜ್ಯದಲ್ಲಿ ಮಾರಲ್ ಪೊಲೀಸಿಂಗ್‌ಗೆ ಪ್ರೋತ್ಸಾಹ ಮಾಡುತ್ತಿದ್ದಾರೆ. ಇದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿದರು. 

ತೊಡೆ ತಟ್ಟಿ ಹೇಳ್ತೇನೆ ಅಪ್ಪ-ಮಗ ಚುನಾವಣಾ ಅಖಾಡಕ್ಕೆ ಬರಲಿ: ಆಯನೂರು ಮಂಜನಾಥ್ ಸವಾಲು

ರಶೀದಿ ಇದ್ದರೂ ಕೊಲೆ ಮಾಡಿದ ದುರುಳರು: ಸಂಬಂಧಪಟ್ಟ ರಸೀದಿ ಇಟ್ಟುಕೊಂಡೇ ರೈತನು ಲಾರಿಯಲ್ಲಿ ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದನು. ಎಲ್ಲ ಹಸುಗಳನ್ನು ಕೂಡ ಸಾಕಣೆ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಅಮಾಯಕ ರೈತನನ್ನು ಹತ್ಯೆ ಮಾಡಲಾಗಿದೆ. ಕೂಡಲೇ ಸಾವನ್ನಪ್ಪಿದ ಅಮಾಯಕ ರೈತನ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ. ಪರಿಹಾರವನ್ನು ಕೊಡಬೇಕು ಎಂದು ನಾನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಒತ್ತಾಯ ಮಾಡುತ್ತೇನೆ. ಇನ್ನು ಈ ಪ್ರಕರಣದಲ್ಲಿ ಯಾರೆಲ್ಲಾ ಬಂಧನವಾಗಿದೆ ಎಂಬ ದಾಖಲೆಯಿದೆ. ಜೊತೆಗೆ, ಯಾರೆಲ್ಲಾ ಈ ಕಾರ್ಯದಲ್ಲಿ ಬಾಗಿಯಾಗಿದ್ದಾರೋ ಅವರನ್ನೆಲ್ಲ ಬಂಧಿಸಬೇಕು. ರೈತನ ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದರು.

ಏ.9ಕ್ಕೆ ಶಿವಲಿಂಗೇಗೌಡ ಕಾಂಗ್ರೆಸ್‌ ಸೇರ್ಪಡೆ:  ರಾಜ್ಯದ ಜನರ ಧ್ವನಿ ಕಾಂಗ್ರೆಸ್ ಕಡೆ ವಾಲುತ್ತಿದೆ. ನಮ್ಮ‌ನಡೆ ಅಧಿಕಾರದ ಕಡೆ ಸಾಗುತ್ತಿದೆ. ಇನ್ನು ಹಲವು ಶಾಸಕರು ಕೂಡ ಬಿಜೆಪಿ ತೊರೆದು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ನಿನ್ನೆ ಬಿಜೆಪಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಜಡೆಇಎಸ್‌ ತೊರೆದಿರುವ ಶಿವಲಿಂಗೇಗೌಡ ಕೂಡ ಕರೆ ಮಾಡಿದ್ದರು. ಏ.9ಕ್ಕೆ ನೀವು ಕ್ಷೇತ್ರಕ್ಕೆ ಬನ್ನಿ ಕಾಂಗ್ರೆಸ್ ಸೇರುತ್ತೇನೆ ಅಂದಿದ್ದಾರೆ. ಈ ವಿಚಾರವಾಗಿ ಮೊದಲು ಅರ್ಜಿ ಸಲ್ಲಿಸಿ ಎಂದು ನಾನು ಅವರಿಗೆ ಹೇಳಿದ್ದೇನೆ ಎಂದರು.

ಎಲ್ಲ ನಾಯಕರು ಕಾಂಗ್ರೆಸ್‌ ಸಮುದ್ರ ಸೇರುತ್ತಿದ್ದಾರೆ: ಹೋರಾಟ ಮಾಡಲು ಎಲ್ಲಾ ನದಿಗಳು ಸೇರಿ ಸಮುದ್ರ ಸೇರುತ್ತಿವೆ. ಈಗ ಎಲ್ಲ ಪಕ್ಷಗಳ ನಾಯಕರು ಕಾಂಗ್ರೆಸ್ ಎಂಬ ಸಮುದ್ರ ಸೇರುತ್ತಿದ್ದಾರೆ. ಮೂರ್ನಾಲ್ಕು ಬಾರಿ ಶಾಸಕರು ಆಗಿದ್ದವರು ಕಾಂಗ್ರೆಸ್ ಸೇರುತ್ತಿದ್ದಾರೆ. ಪುಟ್ಟಣ್ಣ, ಚಿಂಚನಸೂರ್ ಅಧಿಕಾರ‌ ಇದ್ದರೂ ಬಿಟ್ಟು ಬಂದಿದ್ದಾರೆ. ಬದಲಾವಣೆಗೆ ಜನರು ತೀರ್ಮಾನ ಮಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಕೆಲಸ ಆಗಿಲ್ಲ. ನಾವೆಲ್ಲಾ ಚರ್ಚೆ ಮಾಡಿದ್ದೇವೆ. ಇನ್ನೂ ಬಹಳ ಜನರು ಬಾಗಿಲು ತಟ್ಟುತ್ತಿದ್ದಾರೆ. ಆದರೆ, ಮುಂದೆ ಅದರ ಬಗ್ಗೆ ತೀರ್ಮಾನ ಮಾಡುತ್ತೇವೆ. ಈಗ ಗೋಪಾಲಕೃಷ್ಣ ಕಾಂಗ್ರೆಸ್ ಸೇರಿದ್ದಾರೆ. ಯೋಗೇಶ್ ಬಾಬು ಕೂಡ ಕಾಂಗ್ರೆಸ್ಸಿಗೆ ದುಡಿದಿದ್ದಾರೆ. ಅವರನ್ನು ‌ಮನಸಲ್ಲಿ ಇಟ್ಟುಕೊಂಡಿದ್ದೇವೆ. ನಿಮಗೆ ಕ್ಷೇತ್ರ ಇದೆ, ಯಾಕೆ ಬರ್ತಾ ಇದ್ದೀರಾ ಅಂತ ಕೇಳಿದಾಗ ಅವರು, ಸಾಯುವುದಕ್ಕೆ ಮುಂಚೆ ನಾನು ಕಾಂಗ್ರೆಸ್ಸಿಗ ಆಗಿ ಸಾಯಬೇಕು ಎಂದು ಹೇಳಿದ್ದಾರೆ. ಹೀಗಾಗಿ, ನಾವು ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಗರ್‌ಹುಕುಂ ರೈತರ ರಕ್ಷ​ಣೆ: ಮಧು ಬಂಗಾರಪ್ಪ

ಕೂಡ್ಲಿಗಿ, ಮೊಳಕಾಲ್ಮೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮ: ಮಾಧ್ಯಮಗಳೊಂದಿಗೆ ಗೋಪಾಲಕೃಷ್ಣ ಮಾತನಾಡಿ, ನನ್ನ ಅಭಿಮಾನ ಕಾಂಗ್ರೆಸ್ ಪಕ್ಷದ ಮೇಲೆ ಇದೆ. ಮುಂದೆ ಯಾವುದೇ ವ್ಯತ್ಯಾಸ ಆಗದೆ ಕೆಲಸ ಮಾಡುತ್ತೇನೆ. ಈ‌ ಹಿಂದೆ ಪರಿಸ್ಥಿತಿಗೆ ಅನುಗುಣವಾಗಿ ಕಾಂಗ್ರೆಸ್ ಪಕ್ಷ ತೊರೆದು ಅಪರಾಧ ಮಾಡಿಕೊಂಡಿದ್ದೇನೆ. ಇನ್ನು ಮುಂದೆ ಮತ್ತೆ ಅಂತಹ ಘಟನೆಗಳು ಪುನರಾವರ್ತನೆ ಆಗಲ್ಲ. ಕೂಡ್ಲಿಗಿಯಲ್ಲಿ ಹಾಗೂ ಮೊಳಕಾಲ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಗೆಲ್ಲಿಸುವುದಷ್ಟೇ ಗುರಿಯಾಗಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios