Asianet Suvarna News Asianet Suvarna News

ಪೌರತ್ವ ಕಾಯ್ದೆ ಕಿಚ್ಚು: ಸಿದ್ದರಾಮಯ್ಯಗೆ ಪೊಲೀಸ್ ನೋಟಿಸ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಂಗಳೂರು ಪೊಲೀಸ್ ಆಯುಕ್ತರು ನೋಟಿಸ್ ನೀಡಿದ್ದಾರೆ. ಯಾಕೆ..? ಏನು..?  ಎನ್ನುವ ಮಾಹಿತಿ ಈ ಕೆಳಗಿನಂತಿದೆ..

CAA protest: Police issues notice to Siddaramaiah over his Mangaluru visit
Author
Bengaluru, First Published Dec 21, 2019, 3:31 PM IST

ಮಂಗಳೂರು/ಬೆಂಗಳೂರು,(ಡಿ.21): ಗಲಭೆಪೀಡಿತ ನಗರಕ್ಕೆ ಭೇಟಿ ನೀಡಲು ಮುಂದಾಗಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಂಗಳೂರು ಪೊಲೀಸ್ ಆಯುಕ್ತರು ನೋಟಿಸ್ ನೀಡಿದ್ದಾರೆ.

ರಸ್ತೆ , ರೈಲು, ವಾಯುಯಾನದ ಮುಖಾಂತರ ಮಂಗಳೂರಿಗೆ ಬರುವಂತಿಲ್ಲ ಎಂದು ಉಲ್ಲೇಖಿಸಿ ನಿಷೇಧ ಹೇರಲಾಗಿದೆ.

ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದರ ಪರಿಣಾಮ ಈಗಾಗಲೇ ನಗರದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. 

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಕರ್ಫ್ಯೂ ವಿಸ್ತರಣೆ

ಈ ಹಿನ್ನೆಲೆಯಲ್ಲಿ ಡಿಸೆಂಬರ್ 22ರ ರಾತ್ರಿ 12 ಗಂಟೆವರೆಗೂ ಮಂಗಳೂರಿಗೆ ಬರದಂತೆ ನಿರ್ಬಂಧ ಹೇರಲಾಗಿದೆ . ಮೊನ್ನೆ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಸಾವನ್ನಪ್ಪಿದ್ದಾರೆ.

ಇದೀಗ ಸಾವನ್ನಪ್ಪಿರುವ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಲು ಸಿದ್ದರಾಮಯ್ಯ ಅವರು ಮಂಗಳೂರಿಗೆ ಹೋಗಲು ಮುಂದಾಗಿದ್ದರು. 

ಆದ್ರೆ, ನಿನ್ನೆ (ಶುಕ್ರವಾರ) ಅವರ ವಿಶೇಷ ವಿಮಾನ ಲ್ಯಾಂಡಿಂಗ್‌ಗೆ ಅವಕಾಶ ನೀಡಿಲ್ಲ. ಈಗ ರಸ್ತೆ ಅಥವಾ ರೈಲು ಮೂಲಕ ಮಂಗಳೂರಿಗೆ ಬರಲು ಅನುಮತಿ ಇಲ್ಲ ಎಂದು ನೋಟಿಸ್ ಜಾರಿ ಮಾಡಿದ್ದಾರೆ.

ಹಿಂದೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸರು ಮತ್ತೆ ಮಂಗಳೂರಿಗೆ
 
ಶುಕ್ರವಾರ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಸವರಾಜ ರಾಯರೆಡ್ಡಿ, ಉಗ್ರಪ್ಪ, ಎಂ.ಬಿ,ಪಾಟೀಲ್, ಮಾಜಿ ಸಚಿವ ಸೀತಾರಾಮ್ ಮಂಗಳೂರಿಗೆ ತೆರಳಿದ್ದು, ಅವರನ್ನು ಏರ್ ಪೋರ್ಟಿನಲ್ಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಹೈಡ್ರಾಮಾವೇ ನಡೆದಿತ್ತು.

ಈ  ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿ, ಒಂದು ವಾರದ ಬಳಿಕ ಸಿದ್ದರಾಮಯ್ಯನವರಿಗೆ ಮಂಗಳೂರಿಗೆ ಬರಲು ಅವಕಾಶವನ್ನು ನಾನೇ ಮಾಡಿಕೊಡುತ್ತೇನೆ ಎಂದು ಹೇಳಿದರು.

ಡಿ.21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios