ಬೆಂಗಳೂರು [ಜ.05]:  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ರಾಜ್ಯ ಬಿಜೆಪಿಯು ಮನೆ-ಮನೆ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದೆ.

ದೇಶಾದ್ಯಂತ ನಡೆಯಲಿರುವ ಈ ಅಭಿಯಾನಕ್ಕೆ ರಾಜ್ಯದ 12 ಕಡೆ ಜ.5ರ ಭಾನುವಾರ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಬೆಂಗಳೂರಿನ ವಸಂತನಗರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ತಿಳಿಸಿದ್ದಾರೆ.

ಪೌರತ್ವ ಕಾಯ್ದೆಗೆ ವಿದೇಶಗಳಲ್ಲೂ ಬೆಂಬಲ ಕ್ರೋಡೀಕರಣ...

ಈ ಕೆಳಗಿನ ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಎಲ್ಲಿ, ಯಾರಿಂದ ಚಾಲನೆ:

ಬೆಂಗಳೂರು ಕೇಂದ್ರ- ಬಿ.ಎಸ್‌.ಯಡಿಯೂರಪ್ಪ (ವಸಂತನಗರ), ಹುಬ್ಬಳ್ಳಿ-ಧಾರವಾಡ- ಪ್ರಹ್ಲಾದ್‌ ಜೋಶಿ (ಧಾರವಾಡ ಪಶ್ಚಿಮ), ಬೆಂಗಳೂರು ಉತ್ತರ- ಡಿ.ವಿ.ಸದಾನಂದಗೌಡ (ದಾಸರಹಳ್ಳಿ), ಬೆಂಗಳೂರು ದಕ್ಷಿಣ-ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ (ಬಸವನಗುಡಿ), ಬಳ್ಳಾರಿ- ಲಕ್ಷ್ಮಣ ಸವದಿ (ಹೊಸಪೇಟೆ), ಗದಗ- ಗೋವಿಂದ ಕಾರಜೋಳ, ಧಾರವಾಡ-ಜಗದೀಶ್‌ ಶೆಟ್ಟರ್‌ (ಹುಬ್ಬಳ್ಳಿ ಪೂರ್ವ), ಶಿವಮೊಗ್ಗ- ಕೆ.ಎಸ್‌.ಈಶ್ವರಪ್ಪ (ಶಿವಮೊಗ್ಗ ನಗರ), ತುಮಕೂರು- ಆರ್‌.ಅಶೋಕ (ತುಮಕೂರು ನಗರ), ಮೈಸೂರು- ಅರವಿಂದ ಲಿಂಬಾವಳಿ (ಮೈಸೂರು ನಗರ), ಚಿಕ್ಕಮಗಳೂರು- ಸಿ.ಟಿ.ರವಿ (ಚಿಕ್ಕಮಗಳೂರು ನಗರ), ಬೆಂಗಳೂರು ಕೇಂದ್ರ- ವಿ.ಸೋಮಣ್ಣ (ಗೋವಿಂದರಾಜನಗರ), ಚಿತ್ರದುರ್ಗ- ಶಶಿಕಲಾ ಜೊಲ್ಲೆ (ಚಿತ್ರದುರ್ಗ ನಗರ), ಕೊಪ್ಪಳ- ಸಿ.ಸಿ.ಪಾಟೀಲ್‌ (ಕೊಪ್ಪಳ ನಗರ), ದಕ್ಷಿಣ ಕನ್ನಡ - ಕೋಟ ಶ್ರೀನಿವಾಸ ಪೂಜಾರಿ (ಮಂಗಳೂರು), ಚಿಕ್ಕಬಳ್ಳಾಪುರ- ಶೋಭಾ ಕರಂದ್ಲಾಜೆ, ಹಾವೇರಿ- ಶಿವಕುಮಾರ್‌ ಉದಾಸಿ (ಹಾವೇರಿ ನಗರ), ಬಾಗಲಕೋಟೆ- ಪಿ.ಸಿ.ಗದ್ದಿಗೌಡರ (ಬಾಗಲಕೋಟೆ ನಗರ), ವಿಜಯಪುರ- ರಮೇಶ್‌ ಜಿಗಜಿಣಗಿ (ವಿಜಯಪುರ ನಗರ), ಬೀದರ್‌- ಭಗವಂತ ಖೂಬಾ (ಬೀದರ್‌ ನಗರ), ಚಿಕ್ಕೋಡಿ-ಮಹಾಂತೇಶ್‌ ಕವಟಗಿ (ಚಿಕ್ಕೋಡಿ ನಗರ) ಚಾಲನೆ ನೀಡಲಿದ್ದಾರೆ.

ರಾಜ್ಯಗಳಿಗೆ ಸಡ್ಡು ಹೊಡೆಯಲು ಸಿಎಎ ಅಡಿ ಆನ್‌ಲೈನ್‌ ಪೌರತ್ವ?...

"