Asianet Suvarna News Asianet Suvarna News

ರಾಮ ಮಂದಿರ ಉದ್ಘಾಟನೆ ಹೊತ್ತಲ್ಲೇ‌ ಮತ್ತೆ ಹುಸಿ ಬಾಂಬ್ ಬೆದರಿಕೆ! ದೇಶದ ಹಲವು ಮ್ಯೂಜಿಯಂ, ಸೈನ್ಸ ಸೆಂಟರ್‌ಗೆ ಇಮೇಲ್ ಸಂದೇಶ!

ಖಾಸಗಿ ಶಾಲೆಗಳ ಹುಸಿ ಬಾಂಬ್ ಬೆದರಿಕೆ ಮಾಸುವ ಮುನ್ನವೇ ಇದೀಗ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹೊತ್ತಲ್ಲೇ  ಪ್ರತಿಷ್ಠಿತ ವಸ್ತು ಸಂಗ್ರಹಾಲಯ, ನೆಹರು ತಾರಾಲಯಗಳಿಗೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದು ಆತಂಕ ಸೃಷ್ಟಿಸಿದೆ

A fake bomb threat again during the inauguration of Ayodhya Ram Mandir at Bengaluru rav
Author
First Published Jan 6, 2024, 10:50 AM IST

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜ. 06) : ರಾಮ ಮಂದಿರ‌ ಉದ್ಘಾಟನೆ ಸಮೀಪಿಸಿದಂತೆ ರಾಜ್ಯದಲ್ಲಿ ಹುಸಿ ಬಾಂಬ್ ಕರೆಗಳ ಸದ್ದು ಜೋರಾಗಿದೆ. ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಹುಸಿ ಸಂದೇಶಗಳು ಸರಣಿ ರೂಪದಲ್ಲಿ ಬಂದು ಪೊಲೀಸ್ ಇಲಾಖೆ, ಜನರಲ್ಲಿ ಭಯ ಮೂಡಿಸಿದ್ದವು. ಬೆನ್ನಲ್ಲೆ ಈಗ ವಿಶ್ವ ವಿಖ್ಯಾತ ಸ್ಮಾರಕಗಳಿಗು ಹುಸಿ ಬಾಂಬ್ ಸಂದೇಶ ಬಂದಿವೆ.‌ ಹಲವು ರಾಜ್ಯಗಳ ಸೈನ್ಸ್ ಸೆಂಟರ್, ತಾರಾಲಯಗಳು, ಸರ್ಕಾರಿ ಸ್ವಾಮ್ಯದ ಮ್ಯೂಜಿಯಂಗಳಿಗೆ ಬಾಂಬ್ ಬೆದರಿಕೆ ಇ ಮೇಲ್‌ ಸಂದೇಶ ರವಾನೆಯಾಗಿವೆ. ಇದು ಸಹಜವಾಗಿಯೇ ಮತ್ತೆ ಸಾರ್ವಜನಿಕರ ಭಯಕ್ಕೆ ಕಾರಣವಾಗಿದೆ.

ವಿಶ್ವವಿಖ್ಯಾತ ಗೋಳಗುಮ್ಮಟಕ್ಕು ಬಾಂಬ್ ಸಂದೇಶ!

ವಿಜಯಪುರದ ವಿಶ್ವ ವಿಖ್ಯಾತ ಗೋಳಗುಮ್ಮಟಕ್ಕು ಬಾಂಬ್ ಸಂದೇಶ ಬಂದಿದೆ.‌ ಗೋಳಗುಮ್ಮಟ ಎದುರು ಇರುವ ಮ್ಯೂಜಿಯಂ ‌ನ ಹಲವು ಕಡೆಗಳಲ್ಲಿ ಬಾಂಬ್ ಇಟ್ಟಿದ್ದೇವೆ. ನಾಳೆ ಬೆಳಿಗ್ಗೆ ಬಾಂಬ್ ಬ್ಲಾಸ್ಟ್ ಆಗಲಿದೆ. ಎಲ್ಲರೂ ಸಾಯ್ತಾರೆ ಎಂದು ಬಾಂಬ್ ಸಂದೇಶದಲ್ಲಿ ಬರೆಯಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಗೋಳಗುಮ್ಮಟ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳವು ಪರಿಶೀಲನೆ‌ ನಡೆಸಿದೆ. ತಡ ರಾತ್ರಿ ಎಎಸ್ಪಿ ಮಾರಿಹಾಳ್ ಹಾಗೂ ವಿಜಯಪುರ ನಗರ ಡಿವೈಎಸ್ಪಿ ಬಸವರಾಜ್ ಯಲಿಗಾರ್ ಸಹ ಗೋಳಗುಮ್ಮಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ..

ಶಾಲೆ ಆಯ್ತು, ಈಗ ಮ್ಯುಸಿಯಂಗೂ ಹುಸಿ ಬಾಂಬ್‌ ಬೆದರಿಕೆ ಇ-ಮೇಲ್‌!

ನಿನ್ನೆಯೆ ನಸುಕಿನ ಜಾವ ಬಂದಿರುವ ಹುಸಿ ಬಾಂಬ್ ಸಂದೇಶ!

ನಿನ್ನೆ ದಿನಾಂಕ 5 ರಂದು ನಸುಕಿನ ಜಾವ 4 ಗಂಟೆ 40 ನಿಮಿಷಕ್ಕೆ ಗೋಳಗುಮ್ಮಟ ಕಚೇರಿ ಇ ಮೇಲ್ ಗೆ ಬಾಂಬ್ ಸಂದೇಶ ಬಂದಿದೆ.‌ ಆದ್ರೆ ನಿನ್ನೆ ಶುಕ್ರವಾರ ಗೋಳಗುಮ್ಮಟ ಕಚೇರಿ ಬಂದ್ ಇದ್ದ ಕಾರಣ ಇ ಮೇಲ್ ಗಮನಕ್ಕೆ ಬಂದಿಲ್ಲ. ಆದ್ರೆ ಸಂಜೆ ಇ-ಮೇಲ್ ಚೆಕ್ ಮಾಡುವಾಗ ಹುಸಿ ಬಾಂಬ್ ಸಂದೇಶ ಗಮನಕ್ಕೆ ಬಂದಿದೆ. ತಕ್ಷಣವೇ ಗೋಳಗುಮ್ಮಟ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ‌. ಬಳಿಕ ಬಾಂಬ್ ನಿಷ್ಕ್ರಿಯ ದಳ ಗೋಳಗುಮ್ಮಟ ಮ್ಯೂಜಿಯಂ ಹಾಗೂ ಆವರಣದಲ್ಲಿ ತಡಕಾಡಿದೆ. ಬಳಿಕ ಇದೊಂದು ಹುಸಿ ಬಾಂಬ್ ಸಂದೇಶ ಅನ್ನೋದು ಬಯಲಾಗಿದೆ. ಬಳಿಕ ಗೋಳಗುಮ್ಮಟ ಅಧಿಕಾರಿ, ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ರಾಜ್ಯದ ಬಹುತೇಕ ಮ್ಯೂಜಿಯಂಗಳಿಗೆ ಸಂದೇಶ ರವಾನೆ!

ಇನ್ನೂ ಹುಸಿ ಬಾಂಬ್ ಬೆದರಿಕೆ ಸಂದೇಶ ಕೇವಲ ಗೋಳಗುಮ್ಮಟ‌ ಮ್ಯೂಜಿಯಂ ಗೆ ಮಾತ್ರವಲ್ಲ. ರಾಜ್ಯದ ಬಹುತೇಕ ಸರ್ಕಾರಿ‌ ಮ್ಯೂಜಿಯಂಗಳಿಗೆ ಸಂದೇಶ ಬಂದಿದೆ. ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಜಿಯಂ, ನ್ಯಾಶನಲ್ ಗಾಂಧಿ ಮ್ಯೂಜಿಯಂ, ಸೂರತ್ ಮುನ್ಸಿಪಲ್‌ನ  ಸೈನ್ಸ್‌ ಸೆಂಟರ್, ಗೋವಾ ಸೈನ್ಸ ಸೆಂಟರ್ ಸೇರಿದಂತೆ ಗೋವಾ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳ ರಾತಾಲಯಗಳು, ಸರ್ಕಾರಿ ಸ್ವಾಮ್ಯದ ಮ್ಯೂಜಿಯಂ, ಪ್ರವಾಸಿ ತಾಣಗಳಲ್ಲಿರುವ ಮ್ಯೂಜಿಯಂಗಳಿಗೆ ಇ-ಮೇಲ್ ಸಂದೇಶ ರವಾನೆಯಾಗಿವೆ..

ಬಾಂಬ್‌ ಸಂದೇಶ ಕಳಿಸಿದ್ಯಾರು?!

ಅಷ್ಟಕ್ಕು ಈ ಹುಸಿ ಬಾಂಬ್ ಸಂದೇಶ ಕಳಿಸಿದ್ಯಾರು? ಇ-ಮೇಲ್  ಸಂದೇಶದಲ್ಲಿ ಇರೋದೇನು ಅನ್ನೋದು ಕುತೂಹಲದ ವಿಚಾರವಾಗಿದೆ. 'explosives In Side Of The museum' ಎನ್ನುವ  ಇ ಮೇಲ್ ಸಬ್ಜೆಕ್ಟ್ ಜೊತೆಗೆ ಸಂದೇಶ ರವಾನೆ ಮಾಡಲಾಗಿದೆ. ಸಂದೇಶದ ಕೆಳಗೆ ನಮ್ಮ ಗ್ರುಪ್‌ ಹೆಸರು "ಟೆರರೈಸರ್ಸ್ 111" ಎಂದು ಹೇಳಿಕೊಂಡಿದ್ದಾರೆ.‌ morguelol545@gmail.com ನಿಂದ‌‌‌ ಮೇಲ್‌ ಸಂದೇಶ ರವಾನೆಯಾಗಿದೆ.

ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಗೆ ಬಾಂಬ್ ಬೆದರಿಕೆ, ಸ್ಥಳಕ್ಕೆ ದೌಡಾಯಿಸಿದ ಪೊಲೀಸ್!

ಹಾಗಿದ್ರೆ ಮೇಲ್ ಸಂದೇಶದಲ್ಲೇನಿದೆ..!?

ಮೇಲ್ ಸಂದೇಶದಲ್ಲಿ ನಾನು  ಮ್ಯೂಜಿಯಂ ನ ಹಲವು ಸ್ಥಳಗಳಲ್ಲಿ ಸ್ಪೋಟಕ ಇಟ್ಟಿದ್ದೇನೆ. ಅವು ತುಂಬಾನೇ ಗುಪ್ತವಾದ ಸ್ಥಳದಲ್ಲಿ‌ ಇಟ್ಟಿದ್ದೇನೆ. ನಾಳೆ ಬೆಳಿಗ್ಗೆ (ದಿನಾಂಕ 06 ರಂದು) ಸ್ಪೋಟಕ ಸಿಡಿಯಲಿವೆ. ಎಲ್ಲರೂ ಸಾಯುತ್ತಾರೆ ಎಂದು ಮೇಲ್ ಸಂದೇಶದಲ್ಲಿ ಬೆದರಿಕೆ‌ ಹಾಕಲಾಗಿದೆ. ನಮ್ಮದು ಗುಂಪು ಇದೆ. ನಮ್ಮ ಗ್ರುಪ್‌ ಟೆರರೈಸರ್ಸ್ 111 ಇದೆ. ಬಾಂಬ್ ಇಟ್ಟಿರುವ ವಿಚಾರ ಮೀಡಿಯಾಗಳಿಗೆ ತಿಳಿಸಿ, ನಮ್ಮ ಗ್ರುಪ್ ಹೆಸರನ್ನು ಮೀಡಿಯಾದವರಿಗೆ ತಿಳಿಸಿ ಎಂದು ಸಂದೇಶದಲ್ಲಿ ಬರೆಯಲಾಗಿದೆ..

Follow Us:
Download App:
  • android
  • ios