ಕೊಪ್ಪಳ[ಜ.05]: ಒಂದೇ ಕುಟುಂಬದ ಆರು ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಕೊಪ್ಪಳದ ಮೆತಗಲ್ ಗ್ರಾಮದಲ್ಲಿ ನಡೆದಿದೆ.

ಶೇಖರಯ್ಯ ಬೀಡನಾಳ(42) ಪತ್ನಿ ಜಯಮ್ಮ(39), ಮಕ್ಕಳಾದ  ಬಸಮ್ಮ(23), ಗೌರಮ್ಮ(20), ಸಾವಿತ್ರಿ(18) ಹಾಗೂ ಪಾರ್ವತಿ(16) ಎಂಬವರು ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಮೊದಲು ಪತ್ನಿ ಮತ್ತು ನಾಲ್ವರು ಮಕ್ಕಳಿಗೆ ವಿಷ ಕುಡಿಸಿರುವ ಶೇಖರಯ್ಯ ಬಳಿಕ ತಾನೂ ನೇಣು ಬಿಗಿದುಕೊಂಡಿದ್ದಾರೆ.

ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಾಮೂಹಿಕ ಆತ್ಮಹತ್ಯೆ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.