ಬೆಂಗಳೂರು, [ಫೆ.16]: ಸಿಎಂ ಯಡಿಯೂರಪ್ಪ ಹೈದ್ರಾಬಾದ್‌ ಕರ್ನಾಟಕವನ್ನು 'ಕಲ್ಯಾಣ ಕರ್ನಾಟಕ'ಕ್ಕೆ 500 ಕೋಟಿ ರೂ. ಮೀಸಲಿಡುವುದಾಗಿ ಘೋಷಿಸಿದ್ದಾರೆ.

ಇಂದು [ಭಾನುವಾರ] ಬೆಳಗ್ಗೆ ವಾರಣಾಸಿ ಕಾರ್ಯಕ್ರಮ ಮುಗಿಸಿಕೊಂಡು ಸಂಜೆ ಬೆಂಗಳೂರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಕಲ್ಯಾಣ ಕರ್ನಾಟಕಕ್ಕೆ‌ ಬಜೆಟ್ ನಲ್ಲಿ500 ಕೋಟಿ ರೂ. ತಗೆದಿಡುತ್ತಿದ್ದೇನೆ. ಅಷ್ಟೇ ಅಲ್ಲದೇ ಈ ವರ್ಷ 100 ಕೋಟಿ‌ ರೂ ಅನುದಾನ ಕೊಟ್ಟು ಕೆಲಸ ಆರಂಭ ಮಾಡುತ್ತೇವೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಅನುದಾನ ಬಳಕೆ: ಕೊಪ್ಪಳ ಫಸ್ಟ್‌, ಬೀದರ್ ಲಾಸ್ಟ್

ಮಠ ಮಾನ್ಯಗಳಿಗೂ ಹೆಚ್ಚಿನ ನೆರವು ನೀಡುತ್ತೇನೆ. ಮಾರ್ಚ್ 5ನೇ ತಾರೀಖಿನ‌ ಬಜೆಟ್ ನಲ್ಲಿ ರೈತ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.

ನೀರಾವರಿ ಯೋಜನೆಗೆ ಒತ್ತು ಕೊಟ್ಟು,ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತೇನೆ. ರೈತ ಬೆಳೆಗಳಿಗೆ ವೈಜ್ಞಾನಿಕ ಬೆಲೆ‌ಕೊಟ್ಟು ರೈತರಿಗೆ ನೆರವಾಗಬೇಕಿದೆ‌ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಯಡಿಯೂರಪ್ಪ

2020  ಅವಧಿಯ ಮೊದಲ ಬಜೆಟ್ ಇದೇ ಮಾರ್ಚ್ 5ರಂದು ಸಿಎಂ ಯಡಿಯೂರಪ್ಪ ಮಂಡಿಸಲಿದ್ದು, ಈ ಬಾರಿ ಕೃಷಿ, ರೈತಪರ ಬಜೆಟ್ ಮಂಡಿಸುವುದಾಗಿ ಈಗಾಗಲೇ ಅವರೇ ಹೇಳಿದ್ದನ್ನು ಇಲ್ಲಿ ಸ್ಮರಿಸಹುದು.