Asianet Suvarna News Asianet Suvarna News

Government Jobs: ಗಡಿನಾಡ ಕನ್ನಡಿಗರ ಉದ್ಯೋಗಕ್ಕೆ ಕೇರಳ ಸರ್ಕಾರ ಗುದ್ದು?

*  ಕೇರಳದಲ್ಲಿ ಉದ್ಯೋಗಕ್ಕೆ ಮಲಯಾಳಂ ಕಡ್ಡಾಯ ಮಾಡುವ ಕೇರಳ ಸಿಎಂ ಹೇಳಿಕೆ
*  ಕನ್ನಡಿಗರಿಗೆ ಉದ್ಯೋಗ ಆತಂಕ 
*  ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಕನ್ನಡಿಗರ ಸಂಖ್ಯೆ ಅಧಿಕ 

Frontier Kannadigas Widespread resentment About Government of Kerala New Decision grg
Author
Bengaluru, First Published Feb 24, 2022, 9:27 AM IST

ಆತ್ಮಭೂಷಣ್‌

ಮಂಗಳೂರು(ಫೆ.24):  ಆಡಳಿತದಲ್ಲಿ ಮಲಯಾಳಂ(Malayalam) ಭಾಷೆ ಹೇರಿಕೆ, ಕನ್ನಡ ಮಾಧ್ಯಮ ಶಾಲೆಗಳಿಗೆ(Kannada Medium Schools) ಮಲಯಾಳಂ ಶಿಕ್ಷಕರ ನೇಮಕ ಬಳಿಕ ಈಗ ಸರ್ಕಾರಿ ಉದ್ಯೋಗ ಸಿಗಬೇಕಾದರೆ ಮಲಯಾಳಂ ಭಾಷೆ ಕಡ್ಡಾಯವಾಗಿ ಕಲಿತಿರಲೇ ಬೇಕು ಎಂಬ ಕಟ್ಟುನಿಟ್ಟು ನಿಯಮ ಜಾರಿಗೆ ಕೇರಳ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಮೂಲಕ ಗಡಿನಾಡು ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರ ಮೇಲೆ ಕೇರಳ ಸರ್ಕಾರ ಉದ್ಯೋಗ ಪ್ರಹಾರ ನಡೆಸಲು ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ.

ಕೇರಳ(Kerala) ರಾಜಧಾನಿ ತಿರುವನಂತಪುರಂನಲ್ಲಿ ಸೋಮವಾರ ನಡೆದ ಮಲಯಾಳಂ ಮಿಷನ್‌ನ ಮಾತೃ ಭಾಷಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌(Pinarayi Vijayan) ಅವರು ಮಲಯಾಳಂ ಭಾಷೆ ಗೊತ್ತಿದ್ದರೆ ಮಾತ್ರ ಇನ್ಮುಂದೆ ಸರ್ಕಾರಿ ಉದ್ಯೋಗ(Government Job) ಎಂದಿದ್ದಾರೆ. ಇದು ಗಡಿನಾಡು ಕಾಸರಗೋಡಿನಲ್ಲಿ ಕನ್ನಡಿಗರ(Kannadigas), ಕನ್ನಡ ಸಂಘಟನೆಗಳನ್ನು ಬೆಚ್ಚಿಬೀಳಿಸಿದ್ದು, ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

Bellary Anganawadi Recruitment 2022: ಬಳ್ಳಾರಿಯ ವಿವಿಧ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈಗಿನ ನಿಯಮ ಏನು?:

ಇದುವರೆಗೆ ಕೇರಳದಲ್ಲಿ 10ನೇ ತರಗತಿವರೆಗೆ ಕನ್ನಡ(Kannada) ಕಲಿಯದೇ ಇರುವವರು ಪ್ರೊಬೆಷನರಿ ಅವಧಿ ಪೂರ್ತಿಗೊಳಿಸುವ ಮೊದಲು ಭಾಷಾ ಸಾಮರ್ಥ್ಯ ಪರೀಕ್ಷೆ ಉತ್ತೀರ್ಣರಾಗಬೇಕು. ಅಂದರೆ ಉದ್ಯೋಗಕ್ಕೆ ಸೇರಿ 10 ವರ್ಷದ ಒಳಗೆ ಭಾಷಾ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಸ್‌ ಆಗಬೇಕು ಎಂದಿದೆ. ಈಗ ಇದನ್ನೇ ತಿದ್ದುಪಡಿ ಮಾಡುವುದಾಗಿ ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಇದುವೇ ಗಡಿನಾಡು ಕನ್ನಡಿಗರನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ.
ಹಾಲಿ ನಿಯಮಕ್ಕೆ ತಿದ್ದುಪಡಿಸಿ ಮಾಡಿದರೆ, ಉದ್ಯೋಗಕ್ಕೆ ಸೇರ್ಪಡೆಯಾದ ಬಳಿಕ ಪ್ರೊಬೆಷನರಿ ಅವಧಿಯಲ್ಲೇ ಮಲಯಾಳಂ ಭಾಷೆಯನ್ನು ಕಡ್ಡಾಯ ಕಲಿಯಬೇಕಾಗುತ್ತದೆ. ಈಗಿರುವ 10 ವರ್ಷದ ಒಳಗೆ ಎಂಬ ನಿಯಮವನ್ನು ತೆಗೆದು ಹಾಕಲಾಗುತ್ತದೆ. ಇದರಿಂದಾಗಿ ಕನ್ನಡ ಭಾಷೆಯಲ್ಲೇ ಕಲಿಯುತ್ತಿರುವ, ಕಲಿತಿರುವವರಿಗೆ ಬಹಳ ತೊಂದರೆಯಾಗಲಿದೆ ಎನ್ನುತ್ತವೆ ಕನ್ನಡ ಸಂಘಟನೆಗಳು.

ಕಾಸರಗೋಡು(Kasaragod) ಜಿಲ್ಲೆಯಲ್ಲಿ ಸುಮಾರು 175 ಕನ್ನಡ ಮಾಧ್ಯಮ ಶಾಲೆಗಳಿದ್ದು, 44 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಆರು ಲಕ್ಷಕ್ಕೂ ಅಧಿಕ ಕನ್ನಡಿಗರು ಇದ್ದಾರೆ. ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಕನ್ನಡಿಗರ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಇದೆ.

ವಿನಾಯ್ತಿ ಸಿಗಬಹುದೇ?:

ಇದುವರೆಗೆ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಪ್ರದೇಶದಲ್ಲಿ(ಕಾಸರಗೋಡು) ಮಲಯಾಳಂ ಭಾಷೆ ಕಡ್ಡಾಯದಿಂದ ವಿನಾಯ್ತಿ ಇದೆ. ಕಳೆದ ಅವಧಿಯಲ್ಲಿ ಸಿಎಂ ಪಿಣರಾಯಿ ವಿಜಯನ್‌ ಅವರು ಇದೇ ರೀತಿ ಉದ್ಯೋಗಕ್ಕೆ ಮಲಯಾಳಂ ಕಡ್ಡಾಯ ಜಾರಿಗೆ ತರಲು ಮುಂದಾಗಿದ್ದರು. ಆಗ ಕಾಸರಗೋಡಿನ ಕನ್ನಡಿಗರ ಹೋರಾಟ ಸಮಿತಿ, ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಮಲಯಾಳಂ ಕಡ್ಡಾಯ ತೆರೆಗೆ ಸರಿದಿತ್ತು. ಈಗ ಸರ್ಕಾರಿ ಉದ್ಯೋಗದಲ್ಲಿ ಮಲಯಾಳಂ ಕಡ್ಡಾಯಗೊಳಿಸುವ ಮಾತು ಮತ್ತೆ ಮುನ್ನಲೆಗೆ ಬರುತ್ತಿದೆ.

ಕಳೆದ ಐದು ವರ್ಷಗಳಿಂದ ಗಡಿನಾಡು ಕನ್ನಡಿಗ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಕೇರಳ ಸರ್ಕಾರದಿಂದ ದೌರ್ಜನ್ಯ ನಡೆಯುತ್ತಲೇ ಇದೆ. ಇದೀಗ ಉದ್ಯೋಗದಲ್ಲಿ ಮಲಯಾಳಂ ಕಡ್ಡಾಯ ಹಂತಕ್ಕೆ ತಲುಪಿದ್ದು, ಭಾಷಾ ಅಲ್ಪಸಂಖ್ಯಾತರಿಗೆ ಇರುವ ಸಂವಿಧಾನಾತ್ಮಕ ಅವಕಾಶವನ್ನು ಕಿತ್ತುಕೊಳ್ಳುತ್ತಾರೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಈಗಾಗಲೇ ಸದ್ದಿಲ್ಲದೆ ಕಾಸರಗೋಡು ಜಿಲ್ಲೆಯಲ್ಲಿ ಆಡಳಿತದಲ್ಲಿ ಮಲಯಾಳಂ ಭಾಷೆ ಕಡ್ಡಾಯ ಅನುಷ್ಠಾನಕ್ಕೆ ಪ್ರಯತ್ನಗಳು ನಡೆಯುತ್ತಲೇ ಇದೆ.

KSAT Recruitment 2022: ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಗ್ರೂಪ್​ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ನಿರಾಕರಿಸುವಂತಿಲ್ಲ. ಒಂದು ವೇಳೆ ಇದಕ್ಕೆ ಚ್ಯುತಿ ಬಂದರೆ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು. ಇಲ್ಲವೇ ನ್ಯಾಯಾಲಯದ ಮೆಟ್ಟಿಲೇರಲು ಹಿಂದೇಟು ಹಾಕುವುದಿಲ್ಲ ಅಂತ ಕಾಸರಗೋಡು ಕರ್ನಾಟಕ ಸಮಿತಿ ಅಧ್ಯಕ್ಷ, ನ್ಯಾಯವಾದಿ ಕೆ.ಎಂ.ಬಳ್ಳಕುರಾಯ ತಿಳಿಸಿದ್ದಾರೆ. 

ಕನ್ನಡಿಗರ ಆತಂಕ ಏನು?

ಇದುವರೆಗೆ ಕೇರಳದಲ್ಲಿ 10ನೇ ತರಗತಿವರೆಗೆ ಕನ್ನಡ ಕಲಿಯದೇ ಇರುವವರು ಪ್ರೊಬೆಷನರಿ ಅವಧಿ ಪೂರ್ತಿಗೊಳಿಸುವ ಮೊದಲು ಭಾಷಾ ಸಾಮರ್ಥ್ಯ ಪರೀಕ್ಷೆ ಉತ್ತೀರ್ಣರಾಗಬೇಕು. ಅಂದರೆ ಉದ್ಯೋಗಕ್ಕೆ ಸೇರಿ 10 ವರ್ಷದ ಒಳಗೆ ಭಾಷಾ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಸ್‌ ಆಗಬೇಕು ಎಂದಿದೆ. ಆದರೆ ಈ ನಿಯಮಕ್ಕೆ ತಿದ್ದುಪಡಿ ತರುವ ಮಾತನ್ನು ಕೇರಳ ಸಿಎಂ ಹೇಳಿದ್ದಾರೆ. ಹಾಲಿ ನಿಯಮಕ್ಕೆ ತಿದ್ದುಪಡಿಸಿ ಮಾಡಿದರೆ, ಉದ್ಯೋಗಕ್ಕೆ ಸೇರ್ಪಡೆಯಾದ ಬಳಿಕ ಪ್ರೊಬೆಷನರಿ ಅವಧಿಯಲ್ಲೇ ಮಲಯಾಳಂ ಭಾಷೆಯನ್ನು ಕಡ್ಡಾಯ ಕಲಿಯಬೇಕಾಗುತ್ತದೆ. ಈಗಿರುವ 10 ವರ್ಷದ ಒಳಗೆ ಎಂಬ ನಿಯಮವನ್ನು ತೆಗೆದು ಹಾಕಲಾಗುತ್ತದೆ. ಇದರಿಂದಾಗಿ ಕನ್ನಡ ಭಾಷೆಯಲ್ಲೇ ಕಲಿಯುತ್ತಿರುವ, ಕಲಿತಿರುವವರಿಗೆ ಬಹಳ ತೊಂದರೆಯಾಗಲಿದೆ.
 

Follow Us:
Download App:
  • android
  • ios