Asianet Suvarna News Asianet Suvarna News

ಮೊಹಮ್ಮದ್ ಸಿರಾಜ್ ಕೆರಿಯರ್ ಚೇಂಜ್ ಮಾಡಿದ್ದು ಯಾರು..?

Oct 2, 2018, 3:52 PM IST

ಬೆಂಗಳೂರು[ಅ.02]: ಆಂಧ್ರಪ್ರದೇಶದ ಯುವ ವೇಗಿ ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇಷ್ಟು ದಿನ ದೇಶಿ ಟೂರ್ನಿಗಳಲ್ಲಿ ಮಿಂಚಿದ್ದ ಸಿರಾಜ್ ಟೆಸ್ಟ್ ತಂಡದಲ್ಲಿ ಭದ್ರವಾಗಿ ನೆಲೆಯೂರಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಬಲಗೈ ವೇಗದ ಬೌಲರ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಮಹೇಂದ್ರ ಸಿಂಗ್ ಧೋನಿಯೇ ಕಾರಣ ಎಂದು ಸ್ವತಃ ಸಿರಾಜ್ ತಂಡದ ಆಯ್ಕೆಯ ಸೀಕ್ರೇಟ್ಸ್ ಬಿಚ್ಚಿಟ್ಟಿದ್ದಾರೆ. ವೆಸ್ಟ್’ಇಂಡಿಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಲಿ ಎಂಬುದಷ್ಟೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.