ನಾಡಾ ನನ್ನನ್ನು ಟಾರ್ಗೆಟ್‌ ಮಾಡುತ್ತಿದೆ: ಕುಸ್ತಿಪಟು ಬಜರಂಗ್‌ ಪೂನಿಯಾ ಗಂಭೀರ ಆರೋಪ

ಬಜರಂಗ್‌ರನ್ನು ಏಪ್ರಿಲ್‌ನಲ್ಲಿ ಮೊದಲ ಬಾರಿ ಅಮಾನತುಗೊಂಡಿದ್ದರು. ಬಳಿಕ ಅಮಾನತು ಹಿಂಪಡೆಯಲಾಗಿದ್ದರೂ ಇತ್ತೀಚೆಗಷ್ಟೇ 2ನೇ ಬಾರಿ ಸಸ್ಪೆಂಡ್‌ ಆಗಿದ್ದರು. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

Wrestler Bajrang Punia Calls NADA Arrogant Says He Is Being Targeted kvn

ನವದೆಹಲಿ: ಡೋಪ್‌ ಪರೀಕ್ಷೆಗೆ ಮೂತ್ರದ ಮಾದರಿ ನೀಡದ ಕಾರಣಕ್ಕೆ ಅಮಾನತುಗೊಂಡಿರುವ ಒಲಿಂಪಿಕ್ಸ್‌ ಪದಕ ವಿಜೇತ ಭಾರತದ ತಾರಾ ಕುಸ್ತಿಪಟು ಬಜರಂಗ್‌ ಪೂನಿಯಾ, ತಮ್ಮನ್ನು ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) ಗುರಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. 

ಬಜರಂಗ್‌ರನ್ನು ಏಪ್ರಿಲ್‌ನಲ್ಲಿ ಮೊದಲ ಬಾರಿ ಅಮಾನತುಗೊಂಡಿದ್ದರು. ಬಳಿಕ ಅಮಾನತು ಹಿಂಪಡೆಯಲಾಗಿದ್ದರೂ ಇತ್ತೀಚೆಗಷ್ಟೇ 2ನೇ ಬಾರಿ ಸಸ್ಪೆಂಡ್‌ ಆಗಿದ್ದರು. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಜರಂಗ್‌, ‘ನಾನು ಕುಸ್ತಿಯಲ್ಲಿ ಮುಂದುವರಿಯದಂತೆ ನಾಡಾ ಟಾರ್ಗೆಟ್‌ ಮಾಡುತ್ತಿದೆ. ಅವಧಿ ಮುಗಿದ ಪರೀಕ್ಷಾ ಕಿಟ್‌ ಬಗ್ಗೆ ನಾನು ಕೇಳಿದ್ದ ಪ್ರಶ್ನೆಗಳಿಗೆ ನಾಡಾ ಬಳಿ ಉತ್ತರವಿಲ್ಲ. ಯಾರಾದರು ಪ್ರಶ್ನಿಸಿದರೆ ಅವರ ಮೇಲೆ ದೌರ್ಜನ್ಯ ನಡೆಸುತ್ತದೆ’ ಎಂದು ದೂರಿದ್ದಾರೆ.

ಚೆಸ್ ವಿಶ್ವ ಚಾಂಪಿಯನ್‌ಶಿಪ್ ಆತಿಥ್ಯ ಹಕ್ಕು ಭಾರತಕ್ಕೆ ಮಿಸ್!

ನವದೆಹಲಿ: ವರ್ಷಾಂತ್ಯದಲ್ಲಿ ನಡೆಯಬೇಕಿರುವ ಭಾರತದ ಗ್ಯಾಂಡ್‌ಮಾಸ್ಟರ್ ಡಿ. ಗುಕೇಶ್ ಹಾಗೂ ಹಾಲಿ ವಿಶ್ವಚಾಂಪಿಯನ್, ಚೀನಾದ ಡಿಂಗ್ ಲಿರೆನ್ ನಡುವಿನ ಚೆಸ್ ವಿಶ್ವ ಚಾಂಪಿಯನ್‌ಶಿಪ್ ಆತಿಥ್ಯ ಭಾರತದ ಕೈ ತಪ್ಪಿದೆ. ಸೋಮವಾರ ಚೆಸ್ ಜಾಗತಿಕ ಆಡಳಿತ ಮಂಡಳಿ ಫಿಡೆ ಸಿಂಗಾಪುರಕ್ಕೆ ಆತಿಥ್ಯ ಹಕ್ಕು ನೀಡಿದ್ದಾಗಿ ಘೋಷಿಸಿದೆ.

ಚೆಸ್ ಕೂಟದ ಆತಿಥ್ಯ ಹಕ್ಕು ಪಡೆಯಲು ಸಿಂಗಾಪುರದ ಜೊತೆಗೆ ತಮಿಳುನಾಡು ಸರ್ಕಾರ ಹಾಗೂ ಭಾರತೀಯ ಚೆಸ್ ಫೆಡರೇಷನ್ (ಎಐಸಿಎಫ್) ಪ್ರತ್ಯೇಕ ಬಿಡ್ ಸಲ್ಲಿಸಿತ್ತು. ಒಂದು ವೇಳೆ ಭಾರತಕ್ಕೆ ಆತಿಥ್ಯ ಹಕ್ಕು ಲಭಿಸಿದ್ದರೆ ಚೆನ್ನೈ ಅಥವಾ ನವದೆಹಲಿಯಲ್ಲಿ ಚೆಸ್‌ ವಿಶ್ವ ಚಾಂಪಿಯನ್ ಶಿಪ್ ನಡೆಯುತ್ತಿತ್ತು.

ಆದರೆ ಆತಿಥ್ಯ ರೇಸ್‌ನಲ್ಲಿ ಭಾರತದ 2 ನಗರಗಳನ್ನು ಹಿಂದಿಕ್ಕಿ ಸಿಂಗಾಪುರ ಗೆದ್ದಿದ್ದು, ಇದೇ ಮೊದಲ ಬಾರಿ ವಿಶ್ವ ಚಾಂಪಿಯನ್ ಶಿಪ್‌ಗೆ ಆತಿಥ್ಯ ವಹಿಸಲಿದೆ. ಚಾಂಪಿಯನ್‌ಶಿಪ್ ನವೆಂಬರ್ 20ರಿಂದ ಡಿಸೆಂಬರ್ 15ರ ವರೆಗೆ ನಡೆಯಲಿದೆ. ಹಾಲಿ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ 17ರ ಡಿ.ಗುಕೇಶ್ ಹಾಗೂ ಡಿಂಗ್ ಲಿರೆನ್ ಪರಸ್ಪರ ಸೆಣಸಾಡಲಿದ್ದಾರೆ.

ವಿಂಬಲ್ಡನ್‌: ಆಲ್ಕರಜ್‌, ಮೆಡ್ವೆಡೆವ್‌, ಒಸಾಕ ಶುಭಾರಂಭ

ಲಂಡನ್‌: ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ ಶುಭಾರಂಭ ಮಾಡಿದ್ದಾರೆ. ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಡ್ಯಾನಿಲ್‌ ಮೆಡ್ವೆಡೆವ್‌, ಸ್ಟಾನ್‌ ವಾಂವ್ರಿಕಾ ಕೂಡಾ ಗೆಲುವಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದಾರೆ.

ಸೋಮವಾರ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ವಿಶ್ವ ನಂ.3, ಸ್ಪೇನ್‌ನ ಆಲ್ಕರಜ್‌ ಎಸ್ಟೋನಿಯಾದ ಮಾರ್ಕ್‌ ಲಜಲ್‌ ವಿರುದ್ಧ 7-6(7/3), 7-5, 6-2 ಸೆಟ್‌ಗಳಲ್ಲಿ ಜಯಗಳಿಸಿದರು. 3 ಬಾರಿ ಗ್ರ್ಯಾನ್‌ಸ್ಲಾಂ ವಿಜೇತ, ಸ್ವಿಜರ್‌ಲೆಂಡ್‌ನ ವಾಂವ್ರಿಕಾ ಅವರು ಬ್ರಿಟನ್‌ನ ಚಾರ್ಲ್ಸ್‌ ಬ್ರೂಮ್‌ ವಿರುದ್ಧ 6-3, 7-4, 6-4 ಅಂತರದಲ್ಲಿ ಗೆದ್ದರೆ, 2021ರ ಯುಎಸ್‌ ಓಪನ್‌ ಚಾಂಪಿಯನ್‌, ರಷ್ಯಾದ ಮೆಡ್ವೆಡೆವ್‌ ಅಮೆರಿಕದ ಅಲೆಕ್ಸಾಂಡರ್‌ ಕೊವಕೆವಿಚ್‌ರನ್ನು 6-3, 6-4, 6-2ರಲ್ಲಿ ಮಣಿಸಿದರು.

ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1, 2 ಬಾರಿ ಗ್ರ್ಯಾನ್‌ಸ್ಲಾಂ ವಿಜೇತ ಜಪಾನ್‌ನ ನವೊಮಿ ಒಸಾಕ ಅವರು ಫ್ರಾನ್ಸ್‌ನ ಡಿಯಾನ ಪರ್ರಿ ವಿರುದ್ಧ 6-1, 1-6, 6-4ರಲ್ಲಿ ಜಯಗಳಿಸಿದರು.

ಸಬಲೆಂಕಾ ಹೊರಕ್ಕೆ

ಭುಜದ ಗಾಯಕ್ಕೆ ತುತ್ತಾಗಿರುವ 3ನೇ ಶ್ರೇಯಾಂಕಿತ, ಬೆಲಾರಸ್‌ನ ಅರೈನಾ ಸಬಲೆಂಕಾ ಮೊದಲ ಸುತ್ತಿನ ಪಂದ್ಯಕ್ಕೂ ಮುನ್ನವೇ ಟೂರ್ನಿಯಿಂದ ಹೊರನಡೆದರು.
 

Latest Videos
Follow Us:
Download App:
  • android
  • ios