ಮಹಿಳಾ ವಿಶ್ವ ಬಾಕ್ಸಿಂಗ್: ಪ್ರಶಸ್ತಿ ಮೇಲೆ ಕಣ್ಣಿಟ್ಟ ಮೇರಿ ಕೋಮ್
2006ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸುತ್ತಿದ್ದು, 72 ದೇಶಗಳ 300ಕ್ಕೂ ಹೆಚ್ಚು ಬಾಕ್ಸರ್‌ಗಳು ಸ್ಪರ್ಧಿಸಲಿದ್ದಾರೆ. 12 ವರ್ಷಗಳ ಹಿಂದೆ ಮೊದಲ ಬಾರಿಗೆ ಆತಿಥ್ಯ ವಹಿಸಿದ್ದಾಗ, ಭಾರತ 4 ಚಿನ್ನ ಸೇರಿ 8 ಪದಕಗಳನ್ನು ಗೆದ್ದಿತ್ತು.
ನವದೆಹಲಿ(ನ.15): ಮೇರಿ ಕೋಮ್ ಐತಿಹಾಸಿಕ 6ನೇ ವಿಶ್ವ ಪಟ್ಟದ ಮೇಲೆ ಕಣ್ಣಿಟ್ಟಿದ್ದು, ಇಂದಿನಿಂದ ಇಲ್ಲಿ ಆರಂಭಗೊಳ್ಳಲಿರುವ 10ನೇ ಎಐಬಿಎ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
2006ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸುತ್ತಿದ್ದು, 72 ದೇಶಗಳ 300ಕ್ಕೂ ಹೆಚ್ಚು ಬಾಕ್ಸರ್‌ಗಳು ಸ್ಪರ್ಧಿಸಲಿದ್ದಾರೆ. 12 ವರ್ಷಗಳ ಹಿಂದೆ ಮೊದಲ ಬಾರಿಗೆ ಆತಿಥ್ಯ ವಹಿಸಿದ್ದಾಗ, ಭಾರತ 4 ಚಿನ್ನ ಸೇರಿ 8 ಪದಕಗಳನ್ನು ಗೆದ್ದಿತ್ತು.
ಕೂಟದಲ್ಲಿ ಇದುವರೆಗೂ ಭಾರತದ ಶ್ರೇಷ್ಠ ಸಾಧನೆಯಾಗಿ ಉಳಿದಿದೆ. ಮೇರಿ ಸೇರಿ 10 ಬಾಕ್ಸರ್‌ಗಳ ತಂಡ ಭಾರತವನ್ನು ಈ ಬಾರಿ ಪ್ರತಿನಿಧಿಸುತ್ತಿದ್ದು, ಕನಿಷ್ಠ 3 ಪದಕಗಳನ್ನು ನಿರೀಕ್ಷೆ ಮಾಡುತ್ತಿದೆ.