ಪುರುಷರ ಸಿಂಗಲ್ 2ನೇ ಸುತ್ತಿನ ಪಂದ್ಯದಲ್ಲಿ 3ನೇ ಶ್ರೇಯಾಂಕಿತ, ಸ್ಪೇನ್ ಆಲ್ಕರಜ್ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಚ್ ವಿರುದ್ಧ 7-6(7/5), 6-2, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಈ ಕುರಿತಾದ ರಿಪೋರ್ಟ್ ಇಲ್ಲಿದೆ.

ಲಂಡನ್: ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ ವಿಂಬಲ್ಡನ್ ಗ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಕೊಕೊ ಗಾಫ್ ಕೂಡಾ 3ನೇ ಸುತ್ತಿಗೆ ಮುನ್ನಡೆ ಪಡೆದಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ 2ನೇ ಸುತ್ತಿನ ಪಂದ್ಯದಲ್ಲಿ 3ನೇ ಶ್ರೇಯಾಂಕಿತ, ಸ್ಪೇನ್ ಆಲ್ಕರಜ್ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಚ್ ವಿರುದ್ಧ 7-6(7/5), 6-2, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. 2021ರ ಯುಎಸ್ ಓಪನ್ ಚಾಂಪಿಯನ್ ಡ್ಯಾನಿಲ್ ಮೆಡೈಡೆವ್ ಅವರು ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ 3-7, 7-4, 6-4, 7-5 ಸೆಟ್‌ಗಳಲ್ಲಿ ಗೆದ್ದು 3ನೇ ಸುತ್ತಿಗೇರಿದರು. 8ನೇ ಶ್ರೇಯಾಂಕಿತ ಕ್ಯಾಸ್ಟೆರ್ ರುಡ್ ಸೋತು ಹೊರಬಿದ್ದರು. ಇದೇವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ ಗಾಫ್‌ರೊಮಾನಿಯಾದ ಅಂಕಾಟೊಡೊನಿಯನ್ನು 6-2, 6-1 ಸೆಟ್‌ಗಳಲ್ಲಿ ಸೆ ಸೋಲಿಸಿದರು. 

Scroll to load tweet…

ಸಿಂಗಲ್ಸ್ ಬಳಿಕ ಡಬಲ್ಸಲ್ಲೂ ನಗಾಲ್ ಸವಾಲು ಅಂತ್ಯ

ಭಾರತದ ಸುಮಿತ್ ನಗಾಲ್ ಸಿಂಗಲ್ ಬಳಿಕ ಪುರುಷರ ಡಬಲ್ಸ್‌ನಲ್ಲೂ ಮೊದಲ ಸುತ್ತಿನಲ್ಲೇ ಸೋತು ಟೂರ್ನಿ ಯಿಂದ ಹೊರಬಿದ್ದರು.ಸರ್ಬಿಯಾದ ಡುಸಾನ್ ಲಜೊವಿಚ್ ಜೊತೆಗೂಡಿ ಕಣಕ್ಕಿಳಿದಿದ್ದ ನಗಾಲ್, ಸ್ಪೇನ್‌ನ ಮುನಾ‌ - ಪೆಡೊ ಮಾಟಿನೆಜ್ ವಿರುದ್ಧ 2-6, 2-6ರಲ್ಲಿ ಸೋಲನುಭವಿಸಿದರು.

ಏಷ್ಯಾ ಡಬಲ್ಸ್‌ ಸ್ಕ್ವಾಶ್‌ ಕೂಟ ಇಂದಿನಿಂದ ಶುರು

ಜೊಹೊರ್‌(ಮಲೇಷ್ಯಾ): ಏಷ್ಯನ್‌ ಡಬಲ್ಸ್‌ ಸ್ಕ್ವಾಶ್‌ ಚಾಂಪಿಯನ್‌ಶಿಪ್‌ ಗುರುವಾರದಿಂದ ಇಲ್ಲಿ ಆರಂಭಗೊಳ್ಳಲಿದೆ. ಅಭಯ್‌ ಸಿಂಗ್ ಹಾಗೂ ವೆಲವನ್‌ ಸೆಂಥಿಲ್‌ಕುಮಾರ್‌ ಪುರುಷರ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅಭಯ್‌ ಮಿಶ್ರ ಡಬಲ್ಸ್‌ನಲ್ಲೂ ಕಣಕ್ಕಿಳಿಯಲಿದ್ದು, ಅವರಿಗೆ ಅನುಭವಿ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಜೊತೆಯಾಗಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ರಿತಿಕಾ ಸೀಲನ್ ಹಾಗೂ ಪೂಜಾ ಆರತಿ ಸ್ಪರ್ಧಿಸಲಿದ್ದಾರೆ. ಕೂಟ ಭಾನುವಾರ ಕೊನೆಗೊಳ್ಳಲಿದೆ.

ಜು.27ರಿಂದ ಡುರಾಂಡ್ ಕಪ್‌ ಫುಟ್ಬಾಲ್‌ ಟೂರ್ನಿ

ಕೋಲ್ಕತಾ: ಪ್ರತಿಷ್ಠಿತ ಡುರಾಂಡ್ ಕಪ್‌ ಫುಟ್ಬಾಲ್‌ ಟೂರ್ನಿಯ 133ನೇ ಆವೃತ್ತಿ ಜುಲೈ 27ರಂದು ಆರಂಭಗೊಳ್ಳಲಿದ್ದು, ಕೋಲ್ಕತಾ, ಜಮ್ಶೇಡ್‌ಪುರ ಸೇರಿದಂತೆ ದೇಶದ ನಾಲ್ಕು ನಗರಗಳು ಆತಿಥ್ಯ ವಹಿಸಲಿವೆ. ಈ ಬಾರಿ ಇಂಡಿಯನ್‌ ಸೂಪರ್‌ ಲೀಗ್‌, ಐ-ಲೀಗ್‌ನ ತಂಡಗಳು ಸೇರಿ ಒಟ್ಟು 24 ತಂಡಗಳು ಪಾಲ್ಗೊಳ್ಳಲಿವೆ. ರೌಂಡ್‌ ರಾಬಿನ್‌ ಹಾಗೂ ನಾಕೌಟ್‌ ಮಾದರಿಯ ಟೂರ್ನಿಯಲ್ಲಿ ಒಟ್ಟು 43 ಪಂದ್ಯಗಳು ನಡೆಯಲಿದ್ದು, ಆ.31ರಂದು ಟೂರ್ನಿ ಮುಕ್ತಾಯಗೊಳ್ಳಲಿದೆ. ಹಾಲಿ ಚಾಂಪಿಯನ್‌ ಮೋಹನ್‌ ಬಗಾನ್‌, ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಕೂಡಾ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಫುಟ್ಬಾಲ್‌: ವಿಯೆಟ್ನಾಂ, ಲೆಬನಾನ್‌ ವಿರುದ್ಧ ಸರಣಿ ಆಡಿಲಿರುವ ಭಾರತ ತಂಡ

ನವದೆಹಲಿ: ಭಾರತದ ಪುರುಷರ ಫುಟ್ಬಾಲ್‌ ತಂಡ ಅಕ್ಟೋಬರ್‌ನಲ್ಲಿ ವಿಯೆಟ್ನಾಂ ಹಾಗೂ ಲೆಬನಾನ್‌ ವಿರುದ್ಧ ತ್ರಿಕೋನ ಸರಣಿಯಲ್ಲಿ ಆಡಲಿದೆ ಎಂದು ಭಾರತೀಯ ಫುಟ್ಬಾಲ್‌ ಸಂಸ್ಥೆ(ಎಐಎಫ್‌ಎಫ್‌) ತಿಳಿಸಿದೆ. ಫಿಫಾ ರ್‍ಯಾಂಕಿಂಗ್‌ನಲ್ಲಿ ಸದ್ಯ 124ನೇ ಸ್ಥಾನದಲ್ಲಿರುವ ಭಾರತ ಅ.9ರಂದು ವಿಯೆಟ್ನಾಂ ವಿರುದ್ಧ ಸೆಣಸಲಿದ್ದು, ಬಳಿಕ ಅ.12ರಂದು ಲೆಬನಾನ್‌ ವಿರುದ್ಧ ಆಡಲಿದೆ. ವಿಯೆಟ್ನಾಂ 116, ಲೆಬನಾನ್‌ 117ನೇ ಸ್ಥಾನಗಳಲ್ಲಿವೆ. ಇತ್ತೀಚೆಗಷ್ಟೇ ಕೋಚ್‌ ಇಗೊರ್‌ ಸ್ಟಿಮಾಕ್‌ರನ್ನು ಎಐಎಫ್‌ಎಫ್‌ ವಜಾಗೊಳಿಸಿದ್ದು, ಹೊಸ ಕೋಚ್‌ ಇನ್ನಷ್ಟೇ ನೇಮಕಗೊಳ್ಳಬೇಕಿದೆ.