ನವದೆಹಲಿ(ನ.01): ಭಾರತೀಯ ಕುಸ್ತಿ ಫೆಡರೇಷನ್‌ ಮಹತ್ವದ ಬೆಳವಣಿಗೆಯಲ್ಲಿ, ದೇಶದ 150 ಕುಸ್ತಿಪಟುಗಳಿಗೆ ಕ್ರಿಕೆಟಿಗರಂತೆ ಕೇಂದ್ರ ಗುತ್ತಿಗೆ ನೀಡಲು ನಿರ್ಧರಿಸಿದೆ. 

ಸದ್ಯದಲ್ಲೇ ರಾಷ್ಟ್ರೀಯ ರಾರ‍ಯಂಕಿಂಗ್‌ ಪದ್ಧತಿ ಜಾರಿ ತರುವುದಾಗಿ ಹೇಳಿರುವ ಕುಸ್ತಿ ಫೆಡರೇಷನ್‌, ಹೆಚ್ಚೆಚ್ಚು ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸಿ 24 ಒಲಿಂಪಿಕ್‌ ಪದಕ ಭರವಸೆಗಳನ್ನು ಗುರುತಿಸುವ ಯೋಜನೆ ಹಾಕಿಕೊಂಡಿದೆ. ಕೇಂದ್ರ ಗುತ್ತಿಗೆ ನೀಡಿದಲ್ಲಿ, ಬಿಸಿಸಿಐ ನಂತರ ದೇಶದಲ್ಲಿ ತನ್ನ ಕ್ರೀಡಾಪಟುಗಳಿಗೆ ಗುತ್ತಿಗೆ ನೀಡಿದ 2ನೇ ಕ್ರೀಡಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಕುಸ್ತಿ ಫೆಡರೇಷನ್‌ ಪಾತ್ರವಾಗಲಿದೆ. 

‘ಎ’ಯಿಂದ ‘ಐ’ ವರೆಗೂ 9 ದರ್ಜೆಗಳಲ್ಲಿ ಗುತ್ತಿಗೆ ನೀಡಲು ತೀರ್ಮಾನಿಸಲಾಗಿದ್ದು, ವಾರ್ಷಿಕ ಗರಿಷ್ಠ 30 ಲಕ್ಷ ರುಪಾಯಿ, ಕನಿಷ್ಠ 30,000 ರುಪಾಯಿ ವೇತನ ನೀಡಲಾಗುದು ಎನ್ನಲಾಗಿದೆ. ಅಂಡರ್‌-15ನಿಂದ ಹಿಡಿದು ವಿವಿಧ ವಯೋಮಿತಿಗಳ ಕುಸ್ತಿಪಟುಗಳಿಗೆ ಗುತ್ತಿಗೆ ನೀಡಲು ಸಿದ್ಧತೆ ನಡೆಸಲಾಗಿದೆ.