Asianet Suvarna News Asianet Suvarna News

ಭಾರತ ವಿರುದ್ಧದ ODI, ಟಿ20 ಸರಣಿಗೆ ವಿಂಡೀಸ್ ತಂಡ ಪ್ರಕಟ!

ಭಾರತ ವಿರುದ್ದದ 5 ಏಕದಿನ ಹಾಗೂ 3 ಟಿ30 ಪಂದ್ಯಕ್ಕೆ ವೆಸ್ಟ್ಇಂಡೀಸ್ ತಂಡ ಪ್ರಕಟಗೊಂಡಿದೆ. ಆಂಡ್ರೆ ರಸೆಲ್, ದಿನೇಶ್ ರಾಮ್ದಿನ್ ಸೇರದಂತೆ ಹಲವು ಪ್ರಮುಖ ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಹಾಗಾದರೆ ಈ ಬಾರಿ ಕ್ರಿಸ್ ಗೇಲ್ ಹಾಗೂ ಡ್ವೇನ್ ಬ್ರಾವೋ ಕಣಕ್ಕಿಳಿಯುತ್ತಾರ? ಇಲ್ಲಿದೆ.

West Indies ODI and T20 squads for India tour announced
Author
Bengaluru, First Published Oct 8, 2018, 11:50 AM IST
  • Facebook
  • Twitter
  • Whatsapp

ವೆಸ್ಟ್ಇಂಡೀಸ್(ಅ.08): ಭಾರತ ಹಾಗೂ ವೆಸ್ಟ್ಇಂಡೀಸ್ ವಿರುದ್ದದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಅಕ್ಟೋಬರ್ 12 ರಿಂದ ಆರಂಭಗೊಳ್ಳಲಿದೆ. ಇದರ ಬೆನ್ನಲ್ಲೇ ವೆಸ್ಟ್ಇಂಡೀಸ್ ಏಕದಿನ ಹಾಗೂ ಟಿ20 ಸರಣಿಗೆ ತಂಡ ಪ್ರಕಟಿಸಿದೆ.

ಭಾರತ ವಿರುದ್ಧದ 5 ಏಕದಿನ ಹಾಗೂ 3 ಟಿ30 ಪಂದ್ಯಕ್ಕಾಗಿ ವಿಂಡೀಸ್ ತಂಡ ಶೀಘ್ರದಲ್ಲೇ ಭಾರತಕ್ಕೆ ಆಗಮಿಸಲಿದೆ. ಆದರೆ ಈ ಬಾರಿ ಕ್ರಿಸ್ ಗೇಲ್ ಹಾಗೂ ಡ್ವೇನ್ ಬ್ರಾವೋ ಅನುಪಸ್ಥಿತಿಯಲ್ಲಿ ವೆಸ್ಟ್ಇಂಡೀಸ್ ತಂಡ, ಭಾರತ ಪ್ರವಾಸ ಕೈಗೊಳ್ಳಲಿದೆ.

ಏಕದಿನ ಹಾಗೂ ಟಿ20 ತಂಡದಲ್ಲಿ ಗೇಲ್ ಹಾಗೂ ಬ್ರಾವೋಗೆ ಸ್ಥಾನ ನೀಡಿಲ್ಲ. ಇದು ವೆಸ್ಟ್ಇಂಡೀಸ್ ಮಾತ್ರವಲ್ಲ ಭಾರತೀಯ ಅಭಿಮಾನಿಗಳಿಗೂ ನಿರಾಸೆಯಾಗಿದೆ. ಆದರೆ ಹಿರಿಯ ಕ್ರಿಕೆಟಿಗ ಕೀರನ್ ಪೊಲಾರ್ಡ್ ಹಾಗೂ ಮರ್ಲನ್ ಸ್ಯಾಮ್ಯುಯೆಲ್ಸ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವೆಸ್ಟ್ಇಂಡೀಸ್ ಏಕದಿನ ತಂಡ:
ಜಾಸನ್ ಹೋಲ್ಡರ್(ನಾಯಕ), ಫಾಬಿಯನ್ ಅಲೆನ್, ಸುನಿಲ್ ಅಂಬ್ರಿಸ್, ದೇವೇಂದ್ರ ಬಿಶು, ಚಂದ್ರಪಾಲ್ ಹೆಮ್ರಾಜ್, ಶಿಮ್ರೊನ್ ಹೆಟ್ಮೆಯರ್, ಶೈ ಹೋಪ್, ಅಲ್ಜಾರಿ ಜೊಸೆಫ್, ಇವಿನ್ ಲಿವಿಸ್, ಅಶ್ಲೆ ನರ್ಸ್, ಕೀಮೋ ಪೌಲ್, ರೊವ್ಮಾನ್ ಪೊವೆಲ್, ಕೆಮರ್ ರೋಚ್, ಮರ್ಲನ್ ಸಾಮ್ಯುಯೆಲ್ಸ್, ಒಶಾನೆ ಥೋಮಸ್

ವೆಸ್ಟ್ಇಂಡೀಸ್ ಟಿ20 ತಂಡ:
ಕಾರ್ಲೋಸ್ ಬ್ರಾಥ್ವೈಟ್(ನಾಯಕ), ಫಾಬಿಯನ್ ಅಲೆನ್, ಡರೆನ್ ಬ್ರಾವೋ, ಶಿಮ್ರೊನ್ ಹೆಟ್ಮೆಯರ್, ಇವಿನ್ ಲಿವಿಸ್, ಒಹೆಡ್ ಮೆಕ್‌ಕೊಯ್, ಆಶ್ಲೇ ನರ್ಸ್, ಕೀಮೋ ಪೌಲ್, ಖಾರಿ ಪಿರ್ರೆ, ಕೀರನ್ ಪೊಲಾರ್ಡ್, ರೊಮ್ಮಾನ್ ಪೊವೆಲ್, ದಿನೇಶ್ ರಾಮ್ದಿನ್, ಆಂಡ್ರೆ ರಸೆಲ್, ಶೆಫಾನೆ ರುಥ್‌ಫೋರ್ಡ್, ಒಶಾನೆ ಥೋಮಸ್

Follow Us:
Download App:
  • android
  • ios