ಚೆನ್ನೈ(ಆ.07): ತಮಿಳುನಾಡು ಮಾಜಿ ಮುಖ್ಯಮಂತ್ರಿ ಮುತ್ತವೇಲು ಕರುಣಾನಿಧಿ ನಿಧನಕ್ಕೆ ಟೀಂ ಇಂಡಿಯಾ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.  ಉಸಿರಾಟ ಸಮಸ್ಯೆಯಿಂದ ಚೆನ್ನೈನ ಕಾವೇರಿ ಆಸ್ಪತ್ರೆ ದಾಖಲಾಗಿದ್ದ ದ್ರಾವಿಡ ಚಳವಳಿಯ ಹೋರಾಟಗಾರ ಕರುಣಾನಿಧಿ 11 ದಿನಗಳ ಚಿಕಿತ್ಸೆ ಬಳಿಕ ಇಂದು ನಿಧನರಾಗಿದ್ದಾರೆ.  

ಕಾವೇರಿ ಆಸ್ಪತ್ರೆ ವೈದ್ಯರು ಕರುಣಾನಿಧಿ ನಿಧನವನ್ನ ಖಚಿತಪಡಿಸುತ್ತಿದ್ದಂತೆ, ಪ್ರಧಾನಿ ಮೋದಿ ಸೇರಿದಂತೆ ಟೀಂ ಇಂಡಿಯಾ ಕ್ರಿಕಿಟಗರೂ ಸಂತಾಪ ಸೂಚಿಸಿದ್ದಾರೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಹಾಲಿ ಕ್ರಿಕೆಟಿಗ ಆರ್ ಅಶ್ವಿನ್ ಸೇರಿದಂತೆ ಹಲವು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ. ಕ್ರಿಕೆಟಿಗರ ಸಂತಾಪದ ಟ್ವೀಟ್ ಇಲ್ಲಿದೆ.