ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, ಅಭಿಮಾನಿಗಳಿಗೆ ಸಂತ ಕ್ಲಾಸ್‌ ವೇಷ ಧರಿಸಿ ಕ್ರಿಸ್ಮಸ್‌ ಹಬ್ಬದ ಶುಭಾಶಯ ಹೇಳಿದ್ದಾರೆ. 

‘ಮೇರಿ ಕ್ರಿಸ್ಮಸ್‌ ಎಲ್ಲರಿಗೂ’ ಎಂಬ ಶುಭಾಶಯದ ಸಂದೇಶವನ್ನು ವಿಡಿಯೋ ಮಾಡಿ ಸಚಿನ್‌ ಸಾಮಾಜಿಕ ತಾಣವಾದ ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕ್ರಿಸ್ಮಸ್‌ ಹಬ್ಬ ಎಲ್ಲಾರಿಗೂ ವಿಶೇಷವಾಗಿದೆ ಎಂದು ಬರೆದಿದ್ದಾರೆ. 

ಕೆಲ ವರ್ಷಗಳ ಹಿಂದೆ ತೆಂಡುಲ್ಕರ್‌, ಆಶ್ರಯ ಮಕ್ಕಳ ಕೇಂದ್ರದಲ್ಲಿ ಕ್ರಿಸ್ಮಸ್‌ ಹಬ್ಬವನ್ನು ಆಚರಿಸಿದ್ದರು. ಆ ವೇಳೆ ಅಲ್ಲಿನ ಮಕ್ಕಳಿಗೆ ಕ್ರಿಕೆಟ್‌ ಬ್ಯಾಟ್‌ಗಳು, ಬ್ಯಾಡ್ಮಿಂಟನ್‌ ರಾಕೆಟ್ಸ್‌, ಫುಟ್ಬಾಲ್‌ಗಳು, ಕೇರಮ್‌ ಬೋರ್ಡ್‌ ಮತ್ತು ಚೆಸ್‌ ಬೋರ್ಡ್‌ಗಳನ್ನು ಉಡುಗೊರೆಯಾಗಿ ನೀಡಿ, ಅಚ್ಚರಿ ಮೂಡಿಸಿದ್ದರು.

ಗೌತಮ್ ಗಂಭೀರ್ ಕ್ಯಾಂಟೀನ್ ಆರಂಭ; ಬಡವರಿಗೆ 1 ರೂಪಾಯಿಗೆ ಊಟ!

ಸಚಿನ್ ತೆಂಡುಲ್ಕರ್‌ ಮಾತ್ರವಲ್ಲದೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್‌, ವಿರೇಂದ್ರ ಸೆಹ್ವಾಗ್, ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೋ ಸೇರಿದಂತೆ ಹಲವು ಕ್ರೀಡಾತಾರೆಯರು ಕ್ರಿಸ್‌ಮಸ್‌ ಹಬ್ಬಕ್ಕೆ ಶುಭಕೋರಿದ್ದಾರೆ.