ಚೆಲ್ಮ್ಸ್‌ಫೋರ್ಡ್(ಜು.26): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2017-18ರ ಸಾಲಿನ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಗ್ಲೆಂಡ್‌ ಕ್ರಿಕೆಟ್ ತಂಡದ ಭಾರ್ಮಿ ಆರ್ಮಿ ಅಭಿಮಾನಿ ಬಳಗ ನೀಡೋ  ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನ ಕೊಹ್ಲಿ ಪಡೆದಿದ್ದಾರೆ.

ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಮಾದರಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ಸೇರಿದಂತೆ ವಿದೇಶಿ ಪಿಚ್‌ಗಳಲ್ಲೂ ಯಶಸ್ಸು ಸಾಧಿಸಿರುವ ಕೊಹ್ಲಿಗೆ ಭಾರ್ಮಿ ಆರ್ಮಿ ಅಭಿಮಾನಿಗಳ ಬಳಗ ಪ್ರಶಸ್ತಿ ನೀಡಿ ಗೌರವಿಸಿದೆ.

 

 

ಎಸೆಕ್ಸ್ ವಿರುದ್ಧದ ಅಭ್ಯಾಸದ ಪಂದ್ಯದ ಮೊದಲ ದಿನ ಕೊಹ್ಲಿಗೆ ಭಾರ್ಮಿ ಆರ್ಮಿ ಅಭಿಮಾನಿ ಬಳಗ ಪ್ರಶಸ್ತಿ ನೀಡಿ ಗೌರವಿಸಿದೆ. ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ 68 ರನ್ ಸಿಡಿಸಿ ಮಿಂಚಿದ್ದರು. ಈ ಮೂಲಕ  ಟೀಂ ಇಂಡಿಯಾಗೆ ಚೇತರಿಕೆ ನೀಡಿದ್ದರು.