Asianet Suvarna News Asianet Suvarna News

ವಿಜಯ್ ಹಜಾರೆ: ಗೆಲುವಿನ ಸಿಹಿ ಕಂಡ ಕರ್ನಾಟಕ

ವಿಜಯ್ ಹಜಾರೆ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ಗೆಲುವಿನ ಸಿಹಿ ಕಂಡಿದೆ. ಸೋಲಿನ ಸುಳಿಯಲ್ಲಿದ್ದ ಕರ್ನಾಟಕ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಇದೀಗ ಸೋಲಿನಿಂದ ಹೊರಬಂದಿದೆ.

Vijay Hazare Trophy Karnataka register big win against Vidarbha
Author
Bengaluru, First Published Sep 30, 2018, 8:46 PM IST
  • Facebook
  • Twitter
  • Whatsapp

ಆಲೂರು(ಸೆ.30): ವಿಜಯ್ ಹಜಾರೆ ಟೂರ್ನಿಯಲ್ಲಿ ಸತತ ಸೋಲು ಅನುಭವಿಸಿ ಕಂಗಾಲಾಗಿದ್ದ ಕರ್ನಾಟಕ ತಂಡ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ವಿದರ್ಭ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.

ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ತಂಡಕ್ಕೆ ಕೃಷ್ಣಪ್ಪ ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ಆಘಾತ ನೀಡಿದರು. ಇಬ್ಬರೂ ತಲಾ 3 ವಿಕೆಟ್ ಕಬಳಿಸಿದರು. ಹೀಗಾಗಿ ವಿದರ್ಭ 36.2 ಓವರ್‌ಗಳಲ್ಲಿ 125 ರನ್‌ಗೆ ಆಲೌಟ್ ಆಯಿತು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಕರ್ನಾಟಕ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆದರೆ ಕೊನೈನ ಅಬ್ಬಾಸ್ ಅಜೇಯ 35 ಹಾಗೂ ಶ್ರೇಯಸ್ ಗೋಪಾಲ್ ಅಜೇಯ 34 ರನ್ ನೆರವಿನಿಂದ 32.3 ಓವರ್‌ಗಳಲ್ಲಿ ಕರ್ನಾಟಕ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Follow Us:
Download App:
  • android
  • ios