Asianet Suvarna News Asianet Suvarna News

ಈ 5 ತಪ್ಪುಗಳನ್ನು ತಿದ್ದಿಕೊಂಡ್ರೆ ಏಷ್ಯಾಕಪ್ ನಮ್ದೇ..!

Sep 27, 2018, 4:07 PM IST

ದುಬೈ[ಸೆ.27]: ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ನಿರೀಕ್ಷೆಯಂತೆಯೇ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಆರಂಭದಲ್ಲಿ ಹಾಂಕಾಂಗ್ ಹಾಗೂ ಸೂಪರ್ 4 ಹಂತದ ಕೊನೆಯ ಪಂದ್ಯ ಆಫ್ಘನ್ ಎದುರು ಟೀಂ ಇಂಡಿಯಾ ಕೊಂಚ ಕೊಸರಾಡಿದ್ದು ಬಿಟ್ಟರೆ, ಉಳಿದೆಲ್ಲಾ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ರೀತಿಯಲ್ಲಿಯೇ ಘರ್ಜಿಸಿದೆ.

ಈ ಬಾರಿಯ ಏಷ್ಯಾಕಪ್’ನಲ್ಲಿ ಒಮ್ಮೆಯೂ ಸೋಲಿನ ರುಚಿ ನೋಡದೇ ಫೈನಲ್ ಪ್ರವೇಶಿಸಿರುವ ಭಾರತ ಕೆಲವೊಂದು ತಪ್ಪುಗಳನ್ನು ಮಾಡುತ್ತಲೇ ಬಂದಿದೆ. ಆದರೆ ಈ ಪ್ರಮುಖ 5 ತಪ್ಪುಗಳು ಮತ್ತೆ ಮಾಡಿದರೇ ಟೀಂ ಇಂಡಿಯಾ ಕಪ್ ಎತ್ತಿಹಿಡಿಯುವುದು ಕಷ್ಟವಾಗಬಹುದು. ಆದ್ದರಿಂದ ಈ 5 ತಪ್ಪುಗಳನ್ನು ಟೀಂ ಇಂಡಿಯಾ ತಿದ್ದಿಕೊಂಡರೆ ಟೀಂ ಇಂಡಿಯಾ 7ನೇ ಬಾರಿಗೆ ಏಷ್ಯಾಕಪ್ ಜಯಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟಕ್ಕೂ ಯಾವುದವು ಆ 5 ತಪ್ಪುಗಳು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ...

Video Top Stories