ಯಾನಿಕ್ ಸಿನ್ನರ್, ಇಗಾ ಸ್ವಿಯಾಟೆಕ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ಯುಎಸ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಯಾನಿಕ್ ಸಿನ್ನರ್ ಹಾಗೂ ಇಗಾ ಸ್ವಿಯಾಟೆಕ್ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

US Open 2024 Jannik Sinner Iga Swiatek as top seeds ease into quarterfinals kvn

ನ್ಯೂಯಾರ್ಕ್: ವಿಶ್ವ ನಂ.1 ಟೆನಿಸಿಗರಾದ ಇಟಲಿಯ ಯಾನಿಕ್ ಸಿನ್ನರ್ ಹಾಗೂ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಯುಎಸ್ ಓಪನ್ ಗ್ಯಾನ್‌ಸ್ಲಾಂ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ಸಿಂಗಲ್‌ ವಿಭಾಗಗಳಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಚೊಚ್ಚಲ ಯುಎಸ್ ಓಪನ್ ಗೆಲ್ಲುವ ನಿರೀಕ್ಷೆಯಲ್ಲಿರುವ 23 ವರ್ಷದ ಸಿನ್ನರ್, ಮಂಗಳವಾರ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಟಾಮಿ ಪೌಲ್ ವಿರುದ್ಧ 7-6(3), 7-6(5), 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2021ರ ಚಾಂಪಿಯನ್, ರಷ್ಯಾದ ಡ್ಯಾನಿಲ್ ಮೆಡೈಡೆವ್ ಅವರು ಪೋರ್ಚುಗಲ್‌ ನ್ಯುನೊ ಬೊರ್ಗೆಸ್ ವಿರುದ್ಧ 6-0, 6-1, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದೀಗ ಕ್ವಾರ್ಟರ್ ಫೈನಲ್‌ನಲ್ಲಿ ಸಿನ್ನರ್ ಹಾಗೂ ಮೆಡೈಡೆವ್ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಈ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಮೆಡೈಡೆವ್ ರನ್ನು ಸೋಲಿಸಿ ಸಿನ್ನರ್ ಚಾಂಪಿಯನ್ ಆಗಿದ್ದರು.

ಸ್ವಿಯಾಟೆಕ್ ಓಟಕ್ಕಿಲ್ಲ ಬ್ರೇಕ್

2022ರ ಚಾಂಪಿಯನ್ ಇಗಾ ಪ್ರಿ ಕ್ವಾರ್ಟ‌್ರನಲ್ಲಿ ರಷ್ಯಾದ ಸಮ್ಮೊನೊವಾ ವಿರುದ್ಧ 6-4, 6-1 ಸೆಟ್ ಗಳಲ್ಲಿ ಗೆಲುವು ಸಾಧಿಸಿದರು. 6ನೇ ಗ್ರಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಇಗಾ ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕದ 5ನೇ ಶ್ರೇಯಾಂಕಿತ ಜೆಸ್ಸಿಕಾ ಪೆಗುಲಾ ವಿರುದ್ಧ ಸೆಣಸಲಿದ್ದಾರೆ. ಪೆಗುಲಾ ಪ್ರಿ ಕ್ವಾರ್ಟರ್‌ನಲ್ಲಿ ರಷ್ಯಾದ ಡಯಾನಾ ವಿರುದ್ಧ ಗೆದ್ದಿದರು. ಬ್ರೆಜಿಲ್‌ನ ಹದ್ದಾದ್ ಮಿಯಾ, ಚೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ಕೂಡಾ ಕ್ವಾರ್ಟರ್‌ಗೇರಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಸೆಮೀಸ್‌ಗೆ 

ಭಾರತದ ಹಿರಿಯ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ಇಂಡೋನೇಷ್ಯಾದ ಆಲ್ಲಿಲಾ ಸುಟ್ಟಿಯಾಡಿ ಯುಎಸ್ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. 8ನೇ ಶ್ರೇಯಾಂಕಿತ ಜೋಡಿ ಸೋಮವಾರ ರಾತ್ರಿ ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯ ಎಬ್ಡೆನ್-ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೇಜಿಕೋವಾ ವಿರುದ್ಧ 7-6(4), 2-6, 10-7ರಲ್ಲಿ ಗೆಲುವು ಸಾಧಿಸಿತು. 

ಅಂತಿಮ 4ರ ಘಟ್ಟದ ಪಂದ್ಯದಲ್ಲಿ ಬೋಪಣ್ಣ ಅಲ್ಲಿಲಾ ಜೋಡಿಗೆ ಅಮೆರಿಕದ ಡೊನಾಲ್ಡ್ ಯಂಗ್-ಟೇಲರ್ ಟೌನ್‌ಸೆಂಡ್ ಸವಾಲು ಎದುರಾಗಲಿದೆ.
 

Latest Videos
Follow Us:
Download App:
  • android
  • ios