ಯುಎಸ್ ಓಪನ್: ಫೆಡರರ್’ಗೆ ಬಿಗ್ ಶಾಕ್ ಕೊಟ್ಟ ಆಸೀಸ್ ಟೆನಿಸಿಗ

29 ವರ್ಷದ ಆಸ್ಟ್ರೇಲಿಯಾದ ಜಾನ್ ಮಿಲ್’ಮ್ಯಾನ್ ಟೆನಿಸ್ ದಿಗ್ಗಜನಿಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಸೆಟ್’ನಲ್ಲಿ 3-6ರ ಹಿನ್ನಡೆ ಅನುಭವಿಸಿದರೂ, ಆ ಬಳಿಕ ತಿರುಗೇಟು ನೀಡಿದ ಮಿಲ್’ಮ್ಯಾನ್, 7-5, 7-6, 7-6 ಸೆಟ್’ಗಳಲ್ಲಿ ಗೆದ್ದು ಕ್ವಾರ್ಟರ್’ಫೈನಲ್’ಗೆ ಲಗ್ಗೆಯಿಟ್ಟಿದ್ದಾರೆ. ಇನ್ನು ಕ್ವಾರ್ಟರ್’ಫೈನಲ್’ನಲ್ಲಿ ಮತ್ತೋರ್ವ ಟೆನಿಸ್ ದಿಗ್ಗಜ ನೋವಾಕ್ ಜೋಕೋವಿಕ್ ವಿರುದ್ಧ ಕಾದಾಡಲಿದ್ದಾರೆ.

US Open 2018 Roger Federer suffers stunning upset at the hands of Australian John Millman

ನ್ಯೂಯಾರ್ಕ್[ಸೆ.04]: ಯುಎಸ್ ಓಪನ್ ಟೂರ್ನಿಯಲ್ಲಿ ಮತ್ತೊಂದು ಆಘಾತಕಾರಿ ಫಲಿತಾಂಶ ಹೊರಬಿದ್ದಿದ್ದು, 5 ಬಾರಿಯ ಯುಎಸ್ ಚಾಂಪಿಯನ್ ರೋಜರ್ ಫೆಡಡರ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

29 ವರ್ಷದ ಆಸ್ಟ್ರೇಲಿಯಾದ ಜಾನ್ ಮಿಲ್’ಮ್ಯಾನ್ ಟೆನಿಸ್ ದಿಗ್ಗಜನಿಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಸೆಟ್’ನಲ್ಲಿ 3-6ರ ಹಿನ್ನಡೆ ಅನುಭವಿಸಿದರೂ, ಆಬಳಿಕ ತಿರುಗೇಟು ನೀಡಿದ ಮಿಲ್’ಮ್ಯಾನ್, 7-5, 7-6, 7-6 ಸೆಟ್’ಗಳಲ್ಲಿ ಗೆದ್ದು ಕ್ವಾರ್ಟರ್’ಫೈನಲ್’ಗೆ ಲಗ್ಗೆಯಿಟ್ಟಿದ್ದಾರೆ. ಇನ್ನು ಕ್ವಾರ್ಟರ್’ಫೈನಲ್’ನಲ್ಲಿ ಮತ್ತೋರ್ವ ಟೆನಿಸ್ ದಿಗ್ಗಜ ನೋವಾಕ್ ಜೋಕೋವಿಕ್ ವಿರುದ್ಧ ಕಾದಾಡಲಿದ್ದಾರೆ.

ಫೆಡರರ್ ಈ ಮೊದಲು 2013ರಲ್ಲೂ ನಾಲ್ಕನೇ ಸುತ್ತಿನಲ್ಲಿ ಟಾಮಿ ರೊಬ್ರೆಡೋ ವಿರುದ್ಧ ಇದೇ ರೀತಿಯ ಆಘಾತ ಎದುರಿಸಿದ್ದರು.

ಪಂದ್ಯದ ಫಲಿತಾಂಶದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಿಲ್’ಮ್ಯಾನ್, ನನಗೆ ಈ ಫಲಿತಾಂಶ ನಂಬಲು ಸಾಧ್ಯವಾಗುತ್ತಿಲ್ಲ. ಫೆಡರರ್ ನನ್ನ ಪಾಲಿನ ಹೀರೋ. ಅವರ ಮೇಲೆ ನನಗೆ ಅಪಾರವಾದ ಗೌರವವಿದೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios