18ರ ಹರೆಯದಲ್ಲೇ ಪ್ರಪಂಚಕ್ಕೆ ಗುಡ್ ಬಾಯ್ ಹೇಳಿದ ಸಮರ ಕಲೆ ಪಟು ವಿಕ್ಟೋರಿಯಾ
ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (ಮಿಶ್ರ ಸಮರ ಕಲೆ) ಪಟು ವಿಕ್ಟೋರಿಯಾ ಲೀ ಅವರು ತಮ್ಮ 18ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಈ ವಿಚಾರವನ್ನು ಅವರ ಕುಟುಂಬದವರು ಖಚಿತಪಡಿಸಿದ್ದಾರೆ. ಆದರೆ ಅವರ ಸಾವು ಹೇಗೆ ಸಂಭವಿಸಿದೆ ಎಂಬುದನ್ನು ಕುಟುಂಬದವರು ನೀಡಿಲ್ಲ.

ನ್ಯೂಯಾರ್ಕ್: ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (ಮಿಶ್ರ ಸಮರ ಕಲೆ) ಪಟು ವಿಕ್ಟೋರಿಯಾ ಲೀ ಅವರು ತಮ್ಮ 18ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಈ ವಿಚಾರವನ್ನು ಅವರ ಕುಟುಂಬದವರು ಖಚಿತಪಡಿಸಿದ್ದಾರೆ. ಆದರೆ ಅವರ ಸಾವು ಹೇಗೆ ಸಂಭವಿಸಿದೆ ಎಂಬುದನ್ನು ಕುಟುಂಬದವರು ನೀಡಿಲ್ಲ. ವಿಕ್ಟೋರಿಯಾ ಲೀ ಅವರ ಹಿರಿಯ ಸಹೋದರಿ ಹಾಗೂ ಸಹ ಆಟಗಾರ್ತಿ ಅಂಜೆಲಾ ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಯುವ ಆಟಗಾರ್ತಿ ವಿಕ್ಟೋರಿಯಾ ಅವರಿಗೆ ದಿ ಪ್ರಾಜಿಡಿ ಎಂಬ ಅಡ್ಡ ಹೆಸರಿತ್ತು. ಮಿಶ್ರ ಸಮರ ಕಲೆಯ ಹಿನ್ನೆಲೆಯ ಕುಟುಂಬದಿಂದ ಬಂದ ವಿಕ್ಟೋರಿಯಾ ಲೀ ಕಳೆದ 12 ತಿಂಗಳ ಅವಧಿಯಲ್ಲಿ ವೇಗವಾಗಿ ಈ ಮಿಕ್ಸ್ಡ್ ಮಾರ್ಷಲ್ ಕಲೆಯಲ್ಲಿ ಕ್ಷಿಪ್ರ ಗತಿಯ ಸಾಧನೆ ತೋರಿದ್ದರು. ಲೀ ಸಹೋದರಿಯರಾದ ಏಂಜೆಲಾ (Angela) ಹಾಗೂ ಕ್ರೀಸ್ಟೋಫರ್ (Christopher) ಅವರಂತೆ ವಿಕ್ಟೋರಿಯಾ ಕೂಡ ಒನ್ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ್ದರು.
ನಿನ್ನೆ ವಿಕ್ಟೋರಿಯಾ, ಸಹೋದರಿ ಏಂಜೆಲಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ(Instagram) ತಂಗಿ ವಿಕ್ಟೋರಿಯಾ ಲೀ ಅವರ ಅಕಾಲಿಕ ನಿಧನದ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಆದರೆ ಇಷ್ಟು ಸಣ್ಣ ಪ್ರಾಯದಲ್ಲಿ ವಿಕ್ಟೋರಿಯಾ ಅವರು ಸಾವಿಗೀಡಾಗಲು ಕಾರಣವೇನು ಎಂಬುದನ್ನು ಅವರು ತಿಳಿಸಿಲ್ಲ. ಡಿಸೆಂಬರ್ 26 ರಂದು ನಮ್ಮ ಕುಟುಂಬವೂ ಎಂದೂ ಅನುಭವಿಸದ ನೋವನ್ನು ಅನುಭವಿಸಿದೆ. ಇದನ್ನು ಹೇಳುವುದಕ್ಕೆ , ನಂಬುವುದಕ್ಕೆ ಕಷ್ಟವಾಗುತ್ತಿದೆ. ನಮ್ಮ ವಿಕ್ಟೋರಿಯಾ ಹೊರಟು ಹೋದಳು ಎಂದು ಆಕೆ ಬರೆದುಕೊಂಡಿದ್ದಾರೆ.
ಕ್ಯಾನ್ಸರ್ಗೆ ಬಲಿಯಾದ ಯೂಟ್ಯೂಬರ್: 23ಕ್ಕೆ ಬದುಕು ಮುಗಿಸಿದ ಟೆಕ್ನೋಬ್ಲೇಡ್
ವಿಕ್ಟೋರಿಯಾ ನಿಧನದಿಂದ ತಮ್ಮ ಕುಟುಂಬವೂ ಎಂತಹಾ ಆಘಾತದಲ್ಲಿದೆ ಎಂಬುದನ್ನು ಏಂಜೆಲಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತುಂಬಾ ಬೇಗ ಆಕೆ ನಮ್ಮನ್ನು ಬಿಟ್ಟು ಹೋದಳು. ಅವಳು ಹೋದಾಗಿನಿಂದ ನಮ್ಮ ಕುಟುಂಬವೂ ಭಾರೀ ಆಘಾತದಲ್ಲಿದೆ. ಈ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ನಾವು ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವಳಿಲ್ಲದ ನಮ್ಮ ಕುಟುಂಬ ಎಂದಿಗೂ ಮೊದಲಿನಂತಾಗುವುದಿಲ್ಲ. ವಿಕ್ಟೋರಿಯಾ ಇದುವರೆಗೆ ಬದುಕಿದ್ದ ಒಂದು ಸುಂದರವಾದ ಆತ್ಮ. ಅವಳು ವಿಶ್ವದ ಅತ್ಯುತ್ತಮ ಕಿರಿಯ ಸಹೋದರಿಯಾಗಿದ್ದಳು. ಅವಳೊಬ್ಬಳು ಉತ್ತಮ ಮಗಳು, ಉತ್ತಮ ಮೊಮ್ಮಗಳು ಆಗಿದ್ದಳು. ಅಲ್ಲದೇ ಆಕೆ ಅವಾ ಹಾಗೂ ಅಲಿಯಾಗೆ ಅತ್ಯುತ್ತಮ ಚಿಕ್ಕಿ ಆಗಿದ್ದಳು. ನಿನ್ನನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಸಹೋದರಿ. ಅದು ಎಷ್ಟು ಎಂದು ನೀನು ಊಹಿಸಿಕೊಳ್ಳುವುದಕ್ಕೂ ಅಸಾಧ್ಯ. ನಮ್ಮ ಹೃದಯ ಒಡೆದು ಹೋಗಿದೆ. ಏಕೆಂದರೆ ನೀನು ಹೊರಟು ಹೋದಾಗ ನಮ್ಮ ದೇಹದ ಒಂದೊಂದು ಭಾಗವೇ ಹೊರಟು ಹೋದಂತಾಗಿದೆ ಅವು ಎಂದಿಗೂ ಮತ್ತೆ ಒಂದಾಗದು ಎಂದು ಅಂಜೆಲಾ ಬರೆದುಕೊಂಡಿದ್ದಾರೆ. ಈ ನೋವಿನ ಸಮಯದಲ್ಲಿ ಎಲ್ಲರೂ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಅವರು ಮಾಧ್ಯಮಗಳು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
2021ರಲ್ಲಿ ತಮ್ಮ ಕ್ರೀಡಾ ವೃತ್ತಿ ಜೀವನವನ್ನು ಆರಂಭಿಸಿದ ವಿಕ್ಟೋರಿಯಾ ಲೀ, ಒಂದಾದ ನಂತರ ಒಂದರಂತೆ ಮೂರು ಸರಣಿ ಗೆಲುವನ್ನು ದಾಖಲಿಸಿದ್ದರು. ಅಲ್ಲದೇ ದಿ ಪ್ರಾಡಿಜಿ ಎಂಬ ಖ್ಯಾತಿಯನ್ನು ಗಿಟ್ಟಿಸಿಕೊಂಡರು. ಅಮೆರಿಕಾದ ಹವಾಯಿನಲ್ಲಿ (Hawaii) ಜನಿಸಿದ ವಿಕ್ಟೋರಿಯಾ, ತನ್ನ ಸಹೋದರಿಯರು ಎಂಎಂಎನಲ್ಲಿ (MMA) ಪದವಿ ಪಡೆಯುವ ಮೊದಲೇ ಮಾಡರ್ನ್ ಪಾಂಕ್ರೇಶನ್ ( modern pankration) ನಲ್ಲಿ ಜ್ಯೂನಿಯರ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆದರು. ಒನ್ ಚಾಂಪಿಯನ್ ಶಿಪ್ನಲ್ಲಿ ಈಕೆಯ ಇಬ್ಬರು ಹಿರಿಯ ಸಹೋದರಿಯರು ತಮ್ಮ ತೂಕಕ್ಕೆ ತಕ್ಕನಾದ ವಿಭಾಗದಲ್ಲಿ ಈಗಾಗಲೇ ಚಾಂಪಿಯನ್ ಆಗಿದ್ದಾರೆ. ಒನ್ ಚಾಂಪಿಯನ್ ಕೂಡ ವಿಕ್ಟೋರಿಯ ಅಗಲಿಕೆಗೆ ಸಂತಾಪ (condolence) ಸಂದೇಶ ಕಳುಹಿಸಿ ಟ್ವಿಟ್ ಮಾಡಿದೆ.
ಜನಪ್ರಿಯ GIF ಗ್ರಿನ್ನಿಂಗ್ ಗರ್ಲ್ ಆತ್ಮಹತ್ಯೆ: 16ಕ್ಕೆ ಬದುಕಿಗೆ ಗುಡ್ಬೈ ಹೇಳಿದ ಪೋಸಿ