ಬೆಂಗಳೂರಿನ ಸಾಯ್ ಕೇಂದ್ರದ ಕೊಡುಗೆ ಮಹತ್ವದ್ದು: ಕ್ರೀಡಾ ಸಚಿವ ಅನುರಾಗ್ ಠಾಕೂರ್
* ಸಾಯ್‌ನಲ್ಲಿ 2 ಕ್ರೀಡಾ ಹಾಸ್ಟೆಲ್ಗಳು ಲೋಕಾರ್ಪಣೆಗೆ ಸಿದ್ದತೆ
* ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಶೀಘ್ರದಲ್ಲೇ 70 ಕೋಟಿ ರುಪಾಯಿ ವೆಚ್ಚದಲ್ಲಿ ಕ್ರೀಡಾ ಹಾಸ್ಟೆಲ್ ನಿರ್ಮಾಣ
* ಹಲವು ಕ್ರೀಡಾಪಟುಗಳ ಜತೆ ಕೇಂದ್ರ ಕ್ರೀಡಾ ಸಚಿವರು ಮಾತುಕತೆ
ಬೆಂಗಳೂರು(ಫೆ.23): ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಶೀಘ್ರದಲ್ಲೇ 70 ಕೋಟಿ ರು. ವೆಚ್ಚದಲ್ಲಿ 630 ಬೆಡ್ ವ್ಯವಸ್ಥೆ ಇರುವ 2 ಕ್ರೀಡಾ ಹಾಸ್ಟೆಲ್ಗಳು ಲೋಕಾರ್ಪಣೆಗೊಳ್ಳಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದರು.
ಬುಧವಾರ ನಗರದ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಹು ಉಪಯೋಗಿ ಒಳಾಂಗಣ ಹಾಲ್ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ‘ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಸದ್ಯ 750 ಬೆಡ್ ವ್ಯವಸ್ಥೆ ಇದೆ. ಇನ್ನೆರಡು ತಿಂಗಳಲ್ಲಿ ಬಾಲಕ, ಬಾಲಕಿಯರ ಹಾಸ್ಟೆಲ್‌ಗಳಿಗೆ ಒಟ್ಟು 630 ಹೆಚ್ಚುವರಿ ಬೆಡ್ ಸೌಲಭ್ಯ ಸಿಗಲಿದೆ. ಇಲ್ಲಿನ ಕೇಂದ್ರ ಹಲವು 50ಕ್ಕೂ ಹೆಚ್ಚು ಒಲಿಂಪಿಯನ್ಗಳು, 50ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪದಕ ವಿಜೇತರನ್ನು ದೇಶಕ್ಕೆ ನೀಡಿದೆæ’ ಎಂದು ಹೇಳಿದರು.
2014ರಲ್ಲಿ ಕ್ರೀಡೆಗೆ ಬಜೆಟ್ನಲ್ಲಿ 964 ಕೋಟಿ ರುಪಾಯಿ ಅನುದಾನ ನೀಡಲಾಗಿತ್ತು. ಈಗ ಅದು 3397 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ 450ಕ್ಕೂ ಹೆಚ್ಚು ಹೊಸ ಕೋಚ್ಗಳನ್ನು ನೇಮಿಸಿದ್ದೇವೆ. ಕ್ರೀಡಾ ಕ್ಷೇತ್ರದ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಪ್ರಧಾನಿ ಮೋದಿಗೆ ಧನ್ಯವಾದ’ ಎಂದರು.
ಇದೇ ವೇಳೆ ಅನುರಾಗ್ ಅವರು ಹಾಕಿ ಪಟುಗಳಾದ ಹರ್ಮನ್ಪ್ರೀತ್ ಸಿಂಗ್, ಮನ್ಪ್ರೀತ್ ಸಿಂಗ್, ಶ್ರೀಜೇಶ್ ಸೇರಿದಂತೆ ಹಲವು ಅಥ್ಲೀಟ್ಗಳು, ಕೋಚ್ಗಳ ಜೊತೆ ಸಮಾಲೋಚನೆ ನಡೆಸಿದರು. ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಸೇರಿ ಸಾಯ್ ಕೇಂದ್ರದ ಪ್ರಮುಖರು ಪಾಲ್ಗೊಂಡಿದ್ದರು.
ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಐಶ್ವರಿಗೆ ಚಿನ್ನ
ಕೈರೋ: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ 4ನೇ ಚಿನ್ನದ ಪದಕ ದೊರೆತಿದೆ. ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್ ವಿಭಾಗದಲ್ಲಿ ಐಶ್ವರಿ ಪ್ರತಾಪ್ ಚಿನ್ನ ಜಯಿಸಿದರು. ಫೈನಲ್‌ನಲ್ಲಿ ಆಸ್ಟ್ರಿಯಾದ ಅಲೆಕ್ಸಾಂಡರ್ ಶಿಮಿಲ್‌ರ್ ವಿರುದ್ಧ 16-6ರಲ್ಲಿ ಜಯಗಳಿಸಿದರು. ಟೂರ್ನಿಯಲ್ಲಿ ಈವರೆಗೂ ಭಾರತ ಒಟ್ಟು 6 ಪದಕ ಜಯಿಸಿದೆ.
ಹಾಕಿ: ಕ್ವಾರ್ಟರಲ್ಲಿ ರಾಜ್ಯಕ್ಕೆ ಇಂದು ಮಧ್ಯಪ್ರದೇಶ ಸವಾಲು
ಕಾಕಿನಾಡ(ಆಂಧ್ರಪ್ರದೇಶ): 13ನೇ ಆವೃತ್ತಿ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್ಶಿಪ್ನ ಕ್ವಾರ್ಟರ್ ಫೈನಲ್‌ನಲ್ಲಿ ಗುರುವಾರ ಕರ್ನಾಟಕ ತಂಡ ಮಧ್ಯಪ್ರದೇಶ ವಿರುದ್ಧ ಸೆಣಸಾಡಲಿದೆ. ‘ಬಿ’ ಗುಂಪಿನಲ್ಲಿದ್ದ ರಾಜ್ಯ ತಂಡ ಗೋವಾ ವಿರುದ್ಧ 10-0, ಚಂಡೀಗಢ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿ ಕ್ವಾರ್ಟರ್ಗೇರಿತ್ತು. ಮತ್ತೊಂದೆಡೆ ಮಧ್ಯಪ್ರದೇಶ ಆಡಿದ 3 ಪಂದ್ಯಗಳಲ್ಲೂ ಗೆದ್ದು ಕ್ವಾರ್ಟರ್‌ಗೇರಿದೆ. ಈ ಪೈಕಿ ತೆಲಂಗಾಣ ವಿರುದ್ಧ ಬರೋಬ್ಬರಿ 36-0 ಗೋಲುಗಳ ಗೆಲುವೂ ಸೇರಿದೆ.
Bengaluru Open: ತಡವಾಗಿ ಬಂದ ಸಿಎಂ ಬೊಮ್ಮಾಯಿ, ಸನ್ಮಾನವನ್ನೇ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬ್ಯೋನ್ ಬೋರ್ಗ್..!
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ಚೆಸ್: ವಿಶ್ವ ಚಾಂಪಿಯನ್ ಮ್ಯಾಗ್ನಸ್ ವಿರುದ್ಧ ಗೆದ್ದ ವಿದಿತ್
ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ, ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾಲ್‌ರ್‍ಸನ್ ವಿರುದ್ಧ ಪ್ರೊ ಚೆಸ್ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಭಾರತದ ಯುವ ಗ್ರ್ಯಾಂಡ್ ಮಾಸ್ಟರ್‌ಗೆ ಹಾಲಿ ವಿಶ್ವ ಚಾಂಪಿಯನ್ ವಿರುದ್ಧ ಇದು ಮೊದಲ ಜಯ. ಲೀಗ್‌ನಲ್ಲಿ ವಿದಿತ್ ಇಂಡಿಯನ್ ಯೋಗಿಸ್ ತಂಡದ ಪರ ಆಡುತ್ತಿದ್ದಾರೆ. ಕಾಲ್‌ರ್‍ಸನ್ ಕೆನಡಾ ಚೆಸ್‌ಬ್ರಾಹ್‌್ಸ ತಂಡವನ್ನು ಪತ್ರನಿಧಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ನಡೆಯುತ್ತಿರುವ ರಾರಯಪಿಡ್ ಚೆಸ್ ಟೂರ್ನಿಯಲ್ಲಿ ವಿಶ್ವದ ಬೇರೆ ಬೇರೆ ದೇಶಗಳ ಒಟ್ಟು 16 ತಂಡಗಳು ಪಾಲ್ಗೊಂಡಿವೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತ 1.24 ಕೋಟಿ ರು. ಆಗಿದೆ.