ಹಾರ್ದಿಕ್ ಪಾಂಡ್ಯ ಸೆಲ್ಫಿ-ಟ್ವಿಟರ್‌ನಲ್ಲಿ ಫುಲ್ ಟ್ರೋಲ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Sep 2018, 5:57 PM IST
twitterati trolls team India player Hardik pandya selfi
Highlights

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ ಕ್ರಿಕೆಟಿಗರ ವಿರುದ್ದ ಆಕ್ರೋಶ ಇನ್ನು ಕಡಿಮೆಯಾಗಿಲ್ಲ. ಇದೀಗ ಹಾರ್ದಿಕ್ ಪಾಂಡ್ಯ ಮತ್ತೆ ಟ್ರೋಲ್ ಆಗಿದ್ದಾರೆ. ಈ ಬಾರಿ ಪಾಂಡ್ಯ ಸೆಲ್ಫಿ ಟ್ವಿಟರಿಗರಿಗೆ ಆಹಾರವಾಗಿದೆ.

ಸೂರತ್(ಸೆ.14): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿಸಿ ತವರಿಗೆ ವಾಪಾಸ್ಸಾದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಟ್ವಿಟರಿಗರಿಗೆ ಆಹಾರವಾಗಿದ್ದಾರೆ. ಆಲ್ರೌಂಡರ್ ಕೋಟಾದಲ್ಲಿ ತಂಡದಲ್ಲಿ ಸ್ಥಾನ ಪಡೆದ ಪಾಂಡ್ಯ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಸರಣಿ ವೇಳೆ ಟ್ವಿಟರಿಗರಿಂದ ಟ್ರೋಲ್ ಆಗಿದ್ದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ 1-4 ಅಂತರದಿಂದ ಟೀಂ ಇಂಡಿಯಾ ಸೋತಿತ್ತು. ಹಾರ್ದಿಕ್ ಪಾಂಡ್ಯ ಸೇರಿದಂತೆ ಟೀಂ ಇಂಡಿಯಾ ಕಳಪೆ ಪ್ರದರ್ಶನ ಟೀಕೆಗೆ ಗುರಿಯಾಗಿತ್ತು. ಇದೀಗ ಸರಣಿ ಮುಗಿಸಿ ತವರಿಗೆ ಆಗಮಿಸಿದ ಹಾರ್ದಿಕ್ ಸೆಲ್ಫಿ ಮತ್ತೆ ಟ್ರೋಲ್ ಆಗಿದೆ.

ತವರಿಗೆ ಮರಳಿದ್ದೇನೆ. ಫಲಿತಾಂಶ ಬೇಸರ ತಂದಿದೆ. ಆದರೆ ಹೋರಾಟ ಅತ್ಯುತ್ತಮವಾಗಿತ್ತು. ಕೆಲ ದಿನಗಳ ವಿಶ್ರಾಂತಿ ಬಳಿಕ ಮತ್ತೆ ಏಷ್ಯಾಕಪ್ ಟೂರ್ನಿಗಾಗಿ ದುಬೈಗೆ ತೆರಳಲಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ಸೆಲ್ಫಿ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಪಾಂಡ್ಯ ಪೋಸ್ಟ್‌ಗೆ ಹಲವರು ಟ್ರೋಲ್ ಮಾಡಿದ್ದಾರೆ. ಮಾಡೆಲಿಂಗ್ ಮಾಡೋದನ್ನ ಬಿಟ್ಟು ಕ್ರಿಕೆಟ್‌ನತ್ತ ಗಮನ ಕೇಂದ್ರೀಕರಿಸಲು ಸೂಚಿಸಿದ್ದಾರೆ. ಇಲ್ಲಿದೆ ಸೆಲ್ಫಿ ಟ್ರೋಲ್‌ಗಳು.

 

 

 

 

 

 

loader