Asianet Suvarna News Asianet Suvarna News

ರಾಷ್ಟ್ರಗೀತೆ ಕೇಳುವಾಗ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ; ಪಿವಿ ಸಿಂಧು

ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಪಿವಿ ಸಿಂಧು ಚಿನ್ನದ ಪದಕ ಗೆಲ್ಲೋ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯ ಗೆದ್ದ ಸಿಂಧು ಪದಕ ಪಡೆಯುವ ವೇಳೆ ಕಣ್ಣೀರು ತಡೆಯಲು ಸಾಧ್ಯವಾಗದೆ ಆನಂದಭಾಷ್ಪ ಹರಿಸಿದ್ದಾರೆ. ಪದಕ  ಪಡೆಯುವ ಸಂದರ್ಭ ಹಾಗೂ ಕಣ್ಣೀರಿನ ಕುರಿತು ಸಿಂಧು ವಿವರಿಸಿದ್ದಾರೆ. 

This is my answer to those who questioned me says Badminton Star PV Sindhu
Author
Basel, First Published Aug 27, 2019, 2:01 PM IST

ಬಾಸೆಲ್‌[ಆ.27]: ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಪಿವಿ ಸಿಂಧುಗೆ ಇಡಿ ವಿಶ್ವವೇ ಸಲಾಂ ಹೇಳುತ್ತಿದೆ. ಐತಿಹಾಸಿಕ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಗಣ್ಯರು ಕೊಂಡಾಡಿದ್ದಾರೆ. ತವರಿಗೆ ಮರಳಿಗೆ ಪಿವಿ ಸಿಂಧುಗೆ ಅದ್ಧೂರಿ ಸ್ವಾಗತ ಕೂಡ ಸಿಕ್ಕಿದೆ. ಇದೇ ವೇಳೆ ಸಿಂಧು ತಮ್ಮ ಫೈನಲ್ ಪಂದ್ಯದ ಜರ್ನಿ ಕುರಿತು ಭಾವುಕರಾಗಿದ್ದಾರೆ. ಅದರಲ್ಲೂ ರಾಷ್ಟ್ರಗೀತೆ ಕೇಳುವಾಗ ಕಣ್ಣೀರು ತಡೆಯಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ವಿಶ್ವಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಪಾನ್‌ನ ನೊಜೊಮಿ ಒಕುಹರಾ ಮಣಿಸಿದ ಸಿಂಧುಗೆ ಚಿನ್ನದ ಪದಕ ನೀಡಲಾಯಿತು. ಈ ವೇಳೆ ಭಾರತದ ರಾಷ್ಟ್ರ ಧ್ವಜದ ಜೊತೆಗೆ ರಾಷ್ಟ್ರ ಗೀತೆ ಕೇಳಿದಾಗ ಸಿಂಧು ಆನಂದ ಭಾಷ್ಪ ಹರಿಸಿದ್ದಾರೆ. ರಾಷ್ಟ್ರ ಧ್ವಜ ಹಾರಾಡುತ್ತಿರುವಾಗ, ರಾಷ್ಟ್ರ ಗೀತೆ ಮೊಳಗಿದರೆ ಎಲ್ಲರ ಮೈ ಜುಮ್ಮೆನ್ನುತ್ತೆ. ನಮ್ಮೊಳಗಿನ ದೇಶಭಕ್ತಿ ಜಾಗೃತವಾಗುತ್ತೆ. ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಎಂದು ಸಿಂಧು ಹೇಳಿದ್ದಾರೆ. 

ವಿಶ್ವ ಚಾಂಪಿಯನ್‌ಶಿಪ್‌ ಗೆದ್ದ ಸಿಂಧುಗೆ ಬಹುಮಾನ ಘೋಷಿಸಿದ ಯಡಿಯೂರಪ್ಪ

2017, 2018ರಲ್ಲಿ ಫೈನಲ್‌ ಪ್ರವೇ​ಶಿಸಿದ್ದರೂ ಚಿನ್ನ ಗೆಲ್ಲದ ಸಿಂಧು ತಾವು ಭಾವೋ​ದ್ವೇ​ಗಕ್ಕೆ ಒಳ​ಗಾ​ಗಿ​ದ್ದಾಗಿ ಹೇಳಿ​ಕೊಂಡಿ​ದ್ದಾರೆ.  ‘ನ​ನ್ನನ್ನು ಪದೇ ಪದೇ ಪ್ರಶ್ನಿ​ಸಿ​ದ​ವ​ರಿಗೆ ವಿಶ್ವ ಚಾಂಪಿ​ಯನ್‌ಶಿಪ್‌ ಗೆಲ್ಲುವ ಮೂಲಕ ಉತ್ತ​ರಿ​ಸಿ​ದ್ದೇನೆ. ನನ್ನ ರಾಕೆಟ್‌ನಿಂದಲೇ ಉತ್ತ​ರಿ​ಸ​ಬೇಕು ಎಂದುಕೊಂಡಿದ್ದೆ, ಅದು ಈಗ ಸಾಧ್ಯ​ವಾ​ಗಿದೆ. ಕಳೆದ 2 ವರ್ಷ ಚಿನ್ನ ಗೆಲ್ಲಲು ಸಾಧ್ಯ​ವಾ​ಗದೆ ಇದ್ದಾಗ, ಬಹಳ ಬೇಸರವಾಗಿ​ತ್ತು, ಸಿಟ್ಟು ತರಿ​ಸಿತ್ತು’ ಎಂದು ಸಿಂಧು ಹೇಳಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್: ಚಿನ್ನ ಗೆದ್ದು ಇತಿಹಾಸ ಬರೆದ PV ಸಿಂಧು

ಪಿ.ವಿ ಸಿಂಧು ಬ್ಯಾಡ್ಮಿಂಟನ್ ಚಾಂಪಿಯನ್’ಶಿಪ್’ನಲ್ಲಿ ಇದುವರೆಗೂ 2 ಕಂಚು, 2 ಬೆಳ್ಳಿ ಹಾಗೂ ಒಂದು ಚಿನ್ನದೊಂದಿಗೆ ಒಟ್ಟು 5 ಪದಕ ಬಾಚಿಕೊಂಡಿದ್ದಾರೆ. 24 ವರ್ಷದ ಸಿಂಧು 2019ರ ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್’ಶಿಪ್’ನ ಫೈನಲ್ ಪಂದ್ಯದಲ್ಲಿ ಜಪಾನಿನ ನಜೊಮಿ ಒಕುಹರ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.  
 

Follow Us:
Download App:
  • android
  • ios