ಪರ್ತ್[ಜ.03]: ಟೆನಿಸ್‌ ತಾರೆ ಅಮೆರಿಕದ ಸೆರೆನಾ ವಿಲಿಯಮ್ಸ್‌, ಉದ್ಯೋಗಸ್ಥ ಮಹಿಳೆಯರಿಗೆ ಸ್ಫೂರ್ತಿದಾಯಕ ಸಂದೇಶವನ್ನು ನೀಡಿದ್ದಾರೆ. 

ತಮ್ಮ ಪುತ್ರಿ ಅಲೆಕ್ಸಿಸ್‌ ಒಲಿಂಪಿಯಾರನ್ನು ಎತ್ತಿಕೊಂಡು ಮನಸ್ಸಿದ್ದರೆ ಎಲ್ಲವೂ ಸಾಧ್ಯ ಎನ್ನುವ ಸಂದೇಶದೊಂದಿಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನು ಹಾಕಿರುವ ಸೆರೆನಾ, ‘ತಂದೆ-ತಾಯಿಯಾಗಿ ನಾವೇನು ಮಾಡುತ್ತೇವೆ ಎಂಬುದು ಮುಖ್ಯ. ಮನಸ್ಸಿದ್ದರೆ ಎಲ್ಲವೂ ಸಾಧ್ಯ. ನಾನು ನನ್ನ ಪಂದ್ಯಕ್ಕೆ ಸಿದ್ಧವಾಗುವುದರ ಜತೆಗೆ ಮಗಳಿಗೂ ಸಮಯ ನೀಡುತ್ತಿದ್ದೇನೆ. ಈ ರೀತಿ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ತಾಯಂದಿರು, ತಮ್ಮ ಮಕ್ಕಳ ಏಳಿಗೆಗೆ ವಹಿಸುವ ಶ್ರಮ ನನಗೆ ಸ್ಫೂರ್ತಿ ನೀಡುತ್ತದೆ’ ಎಂದು ಬರೆದಿದ್ದಾರೆ.

23 ಗ್ರ್ಯಾಂಡ್’ಸ್ಲಾಂ ವಿಜೇತೆ ಸೆರೆನಾ, 15 ತಿಂಗಳ ಮಗಳೊಟ್ಟಿಗೆ ವ್ಯಾಯಾಮ ಮಾಡುತ್ತಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.