Asianet Suvarna News Asianet Suvarna News

ಮಿಸ್ಸಾಗಿ ಫಿಸಿಯೋ ಮೇಲೆ ಗುಂಡು ಹಾರಿಸಿದ ಶೂಟರ್!

ರೈಫಲ್ ಅಥವಾ ಪಿಸ್ತೂಲ್ ಸ್ವಚ್ಛಗೊಳಿಸುವಾಗ ಪೆಲೆಟ್‌ಗಳನ್ನು ಹೊರತೆಗೆಯಬೇಕು. ಆದರೆ ಮಹಿಳಾ ಶೂಟರ್ ಪೆಲೆಟ್‌ಗಳನ್ನು ತೆಗೆಯದೆ ರೈಫಲ್ ಕ್ಲೀನ್ ಮಾಡುತ್ತಿದ್ದರು. ಫಿಸಿಯೋ ತಮ್ಮ ಕೊಠಡಿಯೊಳಕ್ಕೆ ಬರುತ್ತಿದ್ದಂತೆ ಗಾಬರಿಗೊಂಡ ಶೂಟರ್ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ್ದಾರೆ

Teen Bengal shooter accidentally fires at physio kvn
Author
First Published Mar 8, 2024, 1:30 PM IST

ನವದೆಹಲಿ: ಬಂಗಾಳದ ಯುವ ಶೂಟರ್ ಒಬ್ಬರು ತಮ್ಮ ರೈಫಲ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ ಪರಿಣಾಮ, ಫಿಸಿಯೋ ಒಬ್ಬರ ದವಡೆ ಮುರಿದ ಘಟನೆ ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದೆ. ದವಡೆಯೊಳಗೆ ಸಿಲುಕಿದ್ದ ಪೆಲೆಟ್ (ಸಣ್ಣ ಗಾತ್ರದ ಗುಂಡು) ಹೊರ ತೆಗೆಯಲು ಶಸ್ತ್ರಚಿಕಿತ್ಸೆಗೆ ಒಳಗಾದ ಫಿಸಿಯೋ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. 

ರೈಫಲ್ ಅಥವಾ ಪಿಸ್ತೂಲ್ ಸ್ವಚ್ಛಗೊಳಿಸುವಾಗ ಪೆಲೆಟ್‌ಗಳನ್ನು ಹೊರತೆಗೆಯಬೇಕು. ಆದರೆ ಮಹಿಳಾ ಶೂಟರ್ ಪೆಲೆಟ್‌ಗಳನ್ನು ತೆಗೆಯದೆ ರೈಫಲ್ ಕ್ಲೀನ್ ಮಾಡುತ್ತಿದ್ದರು. ಫಿಸಿಯೋ ತಮ್ಮ ಕೊಠಡಿಯೊಳಕ್ಕೆ ಬರುತ್ತಿದ್ದಂತೆ ಗಾಬರಿಗೊಂಡ ಶೂಟರ್ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ್ದಾರೆ

ಟ್ರಯಲ್ಸ್ ನಿಂದ ಹಿಂದೆ ಸರಿದ ಡಬ್ಲ್ಯುಎಫ್‌ಐ

ನವದೆಹಲಿ: ಏಷ್ಯನ್ ಚಾಂಪಿಯನ್‌ಶಿಪ್ ಹಾಗೂ ಏಷ್ಯನ್ ಒಲಿಂಪಿಕ್ ಗೇಮ್ಸ್ ಅರ್ಹತಾ ಟೂರ್ನಿಗೆ ಆಯ್ಕೆ ಟ್ರಯಲ್ಸ್ ಆಯೋಜಿಸುವುದಿಲ್ಲ ಎಂದು ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಗುರುವಾರ ಡೆಲ್ಲಿ ಹೈಕೋರ್ಟ್‌ಗೆ ತಿಳಿಸಿದೆ. 

Dharamsala Test: ಭರ್ಜರಿ ಶತಕ ಚಚ್ಚಿದ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್..! ಭಾರತದ ಹಿಡಿತದಲ್ಲಿ ಇಂಗ್ಲೆಂಡ್

ಡಬ್ಲ್ಯುಎಫ್‌ಐ ವಿರುದ್ಧ ಬಜರಂಗ್, ವಿನೇಶ್, ಸಾಕ್ಷಿ ಮಲಿಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಚಿನ್ ದತ್ತಾ ಈ ಬಗ್ಗೆ ಮಾಹಿತಿ ನೀಡಿದರು. ಈ ಮೊದಲು ಸ್ವತಂತ್ರ ಸಮಿತಿಯು ಮಾ.10, 11ಕ್ಕೆ ಆಯ್ಕೆ ಟ್ರಯಲ್ಸ್ ನಡೆಸುವುದಾಗಿ ತಿಳಿಸಿತ್ತು. ಆದರೆ ಇದಕ್ಕೆ ಸಡ್ಡು ಹೊಡೆದಿದ್ದ ಡಬ್ಲ್ಯುಎಫ್‌ಐ ತಾನೇ ಟ್ರಯಲ್ಸ್ ನಡೆಸುವುದಾಗಿ ಹೇಳಿತ್ತು

ಫ್ರೆಂಚ್ ಓಪನ್: ಸಿಂಧು ಕ್ವಾರ್ಟರ್ ಫೈನಲ್‌ಗೆ

ಪ್ಯಾರಿಸ್: ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 2 ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ಗುರುವಾರ ಮಹಿಳಾ ಸಿಂಗಲ್ಸ್ 2ನೇ ಸುತ್ತಿನಲ್ಲಿ ಅಮೆರಿಕದ ಬೀವೆನ್ ಝಾಂಗ್ ವಿರುದ್ಧ 13-21, 21-10, 21-14ರಲ್ಲಿ ಗೆಲುವು ಸಾಧಿಸಿ ಈ ಆವೃತ್ತಿಯ ಚೊಚ್ಚಲ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು. 

ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ ಚೀನಾದ ಗ್ವಾಂಗ್ ಝು ವಿರುದ್ಧ 21-19, 12-21, 20-22ರಲ್ಲಿ ವೀರೋಚಿತ ಸೋಲು ಕಂಡರು. ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ ಗೋಪಿಚಂದ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು

ಇಂಡಿಯಾನ ವೆಲ್ಸ್ ಟೆನಿಸ್: ನಡಾಲ್ ಬದಲು ನಗಾಲ್ ಪ್ರಧಾನ ಸುತ್ತಿಗೆ ಪ್ರವೇಶ!

ಕ್ಯಾಲಿಫೋರ್ನಿಯಾ: ಪ್ರತಿಷ್ಠಿತ ಇಂಡಿಯಾನ ವೆಲ್ಸ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಸೋತ ಹೊರತಾಗಿಯೂ ಭಾರತದ ಸುಮಿತ್ ನಗಾಲ್ ಮುಖ್ಯ ಸುತ್ತಿಗೆ ಎಂಟ್ರಿ ಪಡೆದಿದ್ದಾರೆ. ದಿಗ್ಗಜ ಟೆನಿಸಿಗ, ಸ್ಪೇನ್‌ನ ರಾಪೆಲ್ ನಡಾಲ್ ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ಹಿನ್ನೆಲೆ ನಗಾಲ್‌ಗೆ ಮುಖ್ಯ ಸುತ್ತಿನಲ್ಲಿ ಆಡುವ ಅದೃಷ್ಟ ಒಲಿದಿದೆ. ಅರ್ಹತಾ ಸುತ್ತಿನಲ್ಲಿ ಆಡಿದ ಆಟಗಾರರಲ್ಲಿ ನಗಾಲ್ ಅಗ್ರ ಶ್ರೇಯಾಂಕ ಹೊಂದಿದ್ದಾರೆ. ಹೀಗಾಗಿ ಮುಖ್ಯ ಸುತ್ತಿನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ. 

ಖೇಲೋ ಗೇಮ್ಸ್ ವಿಜೇತರಿಗೆ ಸರ್ಕಾರಿ ಹುದ್ದೆ: ಅಥ್ಲೀಟ್‌ ತೇಜಸ್ವಿನ್ ಶಂಕರ್ ಆಕ್ಷೇಪ

ಮಾತೃ ಕಪ್: ಮೌಂಟ್ಸ್ ಕ್ಲಬ್ ಫೈನಲ್ ಪ್ರವೇಶ

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಸಂಸ್ಥೆ ಆಯೋಜಿಸುತ್ತಿರುವ ಮಾತೃ ಕಪ್ ಬಾಸ್ಕೆಟ್‌ಬಾಲ್ ಲೀಗ್‌ನಲ್ಲಿ ಮೌಂಟ್ಸ್ ಕ್ಲಬ್ ಹಾಗೂ ಸೌತ್ ವೆಸ್ಟರ್ನ್ ರೈಲ್ವೇ ತಂಡಗಳು ಫೈನಲ್ ಪ್ರವೇಶಿಸಿವೆ. ಗುರುವಾರ ನಡೆದ ಸೆಮಿಫೈನಲ್ ಸೂಪರ್ ಲೀಗ್ ಪಂದ್ಯಗಳಲ್ಲಿ ಮೌಂಟ್ಸ್ ಕ್ಲಬ್ ಹಾಗೂ ಸೌತ್ ವೆಸ್ಟರ್ನ್ ರೈಲ್ವೇ ತಂಡಗಳು ಬೆಂಗಳೂರು ವ್ಯಾನ್‌ಗಾರ್ಡ್ಸ್, ಬೀಗಲ್ಸ್ ಬಿಸಿ ವಿರುದ್ಧ ಜಯಗಳಿಸಿದವು. ಶುಕ್ರವಾರ ಫೈನಲ್ ಪಂದ್ಯ ನಡೆಯಲಿದೆ.
 

Follow Us:
Download App:
  • android
  • ios