ಕೇರಳ ಸಂತ್ರಸ್ತರಿಗಾಗಿ ಮಿಡಿದ ಟೀಂ ಇಂಡಿಯಾ ಕ್ರಿಕೆಟರ್ಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 18, Aug 2018, 7:35 PM IST
TeamIndia helping in the best possible way to Kerala relief efforts
Highlights

ಮಹಾ ಮಳೆ, ಪ್ರವಾಹ, ಗುಡ್ಡ ಕುಸಿತ, ಮನೆ ಕುಸಿತ..ಕೇರಳದಲ್ಲಿ ಸಮಸ್ಯೆಗಳು ಒಂದಲ್ಲಾ ಎರಡಲ್ಲ. ಜಲಪ್ರಳಯಕ್ಕೆ ಸಿಲುಕಿರುವ ಕೇರಳ ನೆರವಿಗಾಗಿ ಕೈಚಾಚಿದೆ. ಕೇರಳ ನೋವಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಸ್ಪಂದಿಸಿದ್ದಾರೆ.  
 

ಬೆಂಗಳೂರು(ಆ.18): ಕೇರಳ ಮಹಾ ಮಳೆಗೆ ಜನರ ಜೀವನ ಅತಂತ್ರವಾಗಿದೆ. ಪ್ರವಾಹ, ಗುಡ್ಡೆ ಕುಸಿತ, ಮನೆ ಕುಸಿತಕ್ಕೆ ಸಾವೀಗೀಡಾದವರ ಸಂಖ್ಯೆ ಏರಿಕೆಯಾಗುತ್ತಿದೆ.  ಇಡೀ ದೇಶವೇ ಕೇರಳ ಜನರ ನೆರವಿಗೆ ಧಾವಿಸಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ಕೈಲಾದ ನೆರವನ್ನ ನೀಡುತ್ತಿದ್ದಾರೆ.

ಪ್ರವಾಹದಲ್ಲಿ ಸಿಲುಕಿರುವ ಜನರನ್ನ ರಕ್ಷಿಸಲು ಸೇನಾ ಪಡೆ ಅವಿರತ ಪ್ರಯತ್ನ ಮಾಡುತ್ತಿದೆ.  ಪ್ರಧಾನ ಮಂತ್ರಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದಿಂದ 500 ಕೋಟಿ ನೀಡುವುದಾಗಿ ಹೇಳಿದ್ದಾರೆ. ಇತ್ತ ಕೇರಳಾ ಕ್ರಿಕೆಟಿಗ ಸಂಜು ಸಾಮ್ಸನ್ 15 ಲಕ್ಷ ರೂಪಾಯಿ ಹಣವನ್ನ ಸಿಎಂ ನಿಧಿಗೆ ನೀಡಿದ್ದಾರೆ. 

ಹಲವು ಕ್ರೀಡಾಪಟುಗಳು ಕೇರಳ ನೋವಿಗೆ ಸ್ಪಂದಿಸಿದ್ದಾರೆ.  ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ಕೇರಳ ಜನತೆಯ ನೆರವಿಗೆ ಧಾವಿಸಲು ಮನವಿ ಮಾಡಿದ್ದಾರೆ.

 

 

 

 

 

 

 

 

 

 

 

 

loader