ಉತ್ತರ ಪ್ರದೇಶ(ಸೆ.04): ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ದದ ಅಂತಿಮ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇತ್ತ ಎಂ ಎಸ್ ಧೋನಿ ಆಪ್ತ , ಟೀಂ ಇಂಡಿಯಾ ಕ್ರಿಕೆಟಿಗರ ಆರ್ ಪಿ ಸಿಂಗ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಸೆಪ್ಟೆಂಬರ್ 4, 2005ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಆರ್ ಪಿ ಸಿಂಗ್ ಸರಿಯಾಗಿ 13 ವರ್ಷಗಳ ಬಳಿಕ ಕ್ರಿಕೆಟ್ ಕರಿಯರ್‌ಗೆ ಗುಡ್ ಬೈ ಹೇಳಿದ್ದಾರೆ.  ಇಂಜುರಿ ಹಾಗೂ ಕಳಪೆ ಫಾರ್ಮ್‌ನಿಂದ ಆರ್ ಪಿ ಸಿಂಗ್ ಕಳೆದ 7 ವರ್ಷಗಳಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದರು.

2011ರ ಬಳಿಕ ಆರ್ ಪಿ ಸಿಂಗ್ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ. ದೇಸಿ ಕ್ರಿಕೆಟ್ ಹಾಗೂ ಐಪಿಎಲ್‌ಗೆ ಸೀಮಿತವಾಗಿದ್ದರು. ಇದೀಗ ಆರ್ ಪಿ ಸಿಂಗ್ ವಿದಾಯದ ಕುರಿತು ಬಿಸಿಸಿಐಗೆ ಪತ್ರ ಬರೆದಿದ್ದಾರೆ. ಇಷ್ಟೇ ಅಲ್ಲ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

 

 

ಭಾರತದ ಪರ 14 ಟೆಸ್ಟ್ ಪಂದ್ಯಗಳಿಂದ 40 ವಿಕೆಟ್, 58 ಏಕದಿನ ಪಂದ್ಯದಿಂದ 69 ವಿಕೆಟ್ ಹಾಗೂ 10 ಟಿ20 ಪಂದ್ಯಗಳಿಂದ 15 ವಿಕೆಟ್ ಕಬಳಿಸಿದ್ದಾರೆ. 32 ವರ್ಷಗ ಆರ್ ಸಿಪಿ ಸಿಂಗ್ ಕೊನೆಯದಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದು, 2017ರ ದಿಯೋಧರ ಟ್ರೋಫಿಯಲ್ಲಿ ಗುಜರಾತ್ ತಂಡದ ಪರ ಕಣಕ್ಕಿಳಿದಿದ್ದರು.