ಬೆಂಗಳೂರು(ಆ.18): ಜಲ ಪ್ರಳಯಕ್ಕೆ ಸಿಲುಕಿ ಕರ್ನಾಟಕ ಕೊಡುಗು ಜಿಲ್ಲೆ ತ್ತತರಿಸಿದೆ. ಕೊಡಗಿನ  ಬಹುತೇಕ ಭಾಗಗಳು ಜವಾವೃತವಾಗಿದೆ. ಜನರ ರಕ್ಷಣಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಹಲವು ನೀರಿನಲ್ಲಿ ಕೊಚ್ಚಿ ಹೋಗಿದ್ದರೆ ಬದುಕುಳಿದವರ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಕೊಡಗಿನ ಪರಿಸ್ಥಿತಿ ಕೈಮೀರಿ ಹೋಗಿದೆ. ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ಸಮಸ್ಯೆಯನ್ನ ಬಗೆಹರಿಸಲು ಪ್ರಯತ್ನಿಸುತ್ತಿದೆ. ಇತ್ತ ಸುವರ್ಣ ನ್ಯೂಸ್ ಹಾಗೂ ಸುವರ್ಣ ನ್ಯೂಸ್.ಕಾಮ್  ಪ್ರವಾಹ ಸಂತಸ್ತರಿಗೆ ನೆರವಿಗೆ ಕರುನಾಡ ಜನತೆಯಲ್ಲಿ ಮನವಿ ಮಾಡಿತ್ತು. ನಿರೀಕ್ಷೆಗೂ ಮೀರಿ ಕರ್ನಾಟಕದ ಜನತೆ ಕೊಡಗಿನ ನೆರವಿಗೆ ಬಂದಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಕೊಡಗಿನ ಕುವರ ರಾಬಿನ್ ಉತ್ತಪ್ಪ ಕೂಡ ಪ್ರವಾಹ  ಸಂತ್ರಸ್ತರಿಗೆ ನೆರವು ನೀಡಿಲು ಮನವಿ ಮಾಡಿದ್ದಾರೆ.

 

 
 
 
 
 
 
 
 
 
 
 
 
 

What we do for others is what defines us. Let's help out our own in need. #coorgfloods #keralafloods #reachouthelpout

A post shared by Robin Uthappa (@robinaiyudauthappa) on Aug 18, 2018 at 2:06am PDT

 

ಪ್ರವಾಹದಿಂದ ತ್ತರಿಸಿರುವ ಜನರ ನೆರವಿಗೆ ಧಾವಿಸಲು ರಾಬಿನ್ ಉತ್ತಪ್ಪ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಕೊಡಗು ಹಾಗೂ ಕೇರಳ ಪ್ರವಾಹದಲ್ಲಿ ಸಿಲುಕಿರುವ ಹಾಗೂ ಸಂತ್ರಸ್ತರಿಗೆ ನರೆವಾಗಲು  ವೀಡಿಯೋ ಮೂಲಕ ಉತ್ತಪ್ಪ ಮನವಿ ಮಾಡಿದ್ದಾರೆ.

ಮತ್ತೊರ್ವ ಕೊಡಗಿನ ಕ್ರಿಕೆಟಿಗ, ಐಪಿಎಲ್ ಟೂರ್ನಿಯ ಯಶಸ್ವಿ ಸ್ಪಿನ್ನರ್ ಕೆಸಿ ಕಾರ್ಯಪ್ಪ ಕೂಡ ಕೊಡಗಿನ ನೋವಿಗೆ ಸ್ಪಂದಿಸಲು ಮನವಿ ಮಾಡಿದ್ದಾರೆ. ಈ ಮೂಲಕ ಕೊಡಗಿನ ಜನರ ರಕ್ಷಣೆಗೆ ಧಾವಿಸಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by KC Cariappa (@cariappa13) on Aug 17, 2018 at 8:56am PDT

 

ಸದ್ಯ ರಾಬಿನ್ ಉತ್ತಪ್ಪ ಹಾಗೂ ಕೆಸಿ ಕಾರ್ಯಪ್ಪ ಕರ್ನಾಟಕ ಪ್ರೀಮಿಯರ್  ಲೀಗ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಕ್ರಿಕೆಟಿಗರು ಮನವಿ ಮಾಡಿದ್ದಾರೆ.