ಚೆನ್ನೈ[ಆ.27]: ಭಾರತ ತಂಡದಿಂದ ಹೊರ​ಬಿ​ದ್ದಿ​ರುವ ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌, ಇಂಗ್ಲೆಂಡ್‌ ಕೌಂಟಿ ಕ್ರಿಕೆಟ್‌ನಲ್ಲಿ ಸೋಮರ್‌ಸೆಟ್‌ ತಂಡದ ಪರ ಆಡ​ಲಿ​ದ್ದಾರೆ. 

ಮಯಾಂಕ್ ಅರ್ಧಶತಕ-ರಾಹುಲ್,ವಿಜಯ್‌ ಫುಲ್ ಟ್ರೋಲ್!

ಈ ಋುತು​ವಿ​ನಲ್ಲಿ ಇನ್ನು 3 ಪಂದ್ಯ ಬಾಕಿ ಇದ್ದು, ಅದ​ರಲ್ಲಿ ಮುರಳಿ ವಿಜಯ್‌ ಆಡುವು​ದಾಗಿ ತಿಳಿ​ಸಿ​ದ್ದಾರೆ. ಪಾಕಿ​ಸ್ತಾ​ನದ ಅಜರ್‌ ಅಲಿ ಬದ​ಲಿಗೆ ಅವ​ರಿಗೆ ತಂಡ​ದಲ್ಲಿ ಸ್ಥಾನ ನೀಡ​ಲಾ​ಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಪ್ರೇ​ಲಿಯಾ ವಿರುದ್ಧ ಪರ್ತ್’ನಲ್ಲಿ ವಿಜಯ್‌ ಭಾರತ ಪರ ಕೊನೆ ಬಾರಿ ಆಡಿ​ದ್ದರು.

ಟೀಂ ಇಂಡಿಯಾದಿಂದ ನಿರ್ಲಕ್ಷ್ಯ- ವಿದೇಶಿ ಕ್ರಿಕೆಟ್‌ನತ್ತ ಸ್ಟಾರ್ ಸ್ಪಿನ್ನರ್!

35 ವರ್ಷದ ವಿಜಯ್ ಭಾರತ ಪರ 61 ಟೆಸ್ಟ್ ಪಂದ್ಯಗಳನ್ನಾಡಿ 38.28ರ ಸರಾಸರಿಯಲ್ಲಿ 3,982 ರನ್ ಬಾರಿಸಿದ್ದಾರೆ. 131 ಪ್ರಥಮ ದರ್ಜೆಯ ಪಂದ್ಯಾಗಳನ್ನಾಡಿ 42.79ರ ಸರಾಸರಿಯಲ್ಲಿ 9,116 ರನ್ ಬಾರಿಸಿದ್ದಾರೆ. ಕಳೆದ ಋತುವಿನಲ್ಲಿ ಎಸೆಕ್ಸ್ ಪರ ಕಣಕ್ಕಿಳಿದಿದ್ದ ಮುರಳಿ ವಿಜಯ್ 64.60 ಸರಾಸರಿಯಲ್ಲಿ 3 ಅರ್ಧಶತಕ ಹಾಗೂ 1 ಶತಕ ಸಿಡಿಸಿ ಮಿಂಚಿದ್ದರು.