Asianet Suvarna News Asianet Suvarna News

ಇಂಡೋ-ವಿಂಡೀಸ್ 3ನೇ ಟಿ20 ಪಂದ್ಯ ಆಯೋಜಿಸಲು ಚೆನ್ನೈ ಹಿಂದೇಟು!

ಉಚಿತ ಪಾಸ್ ಹಂಚಿಕೆ ವಿಚಾರದಲ್ಲಿ ಬಿಸಿಸಿ ನಿರ್ಧಾರ ಸಡಿಲಿಸಿದೆ. ಆದರೆ ಇದರಿಂದ ಪಂದ್ಯ ಆಯೋಜಿಸುವುದು ಕಷ್ಟ ಎಂದಿರುವ ತಮಿಳುನಾಡು ಕ್ರಿಕೆಟ್ ಸಂಸ್ಥೆ ತಕರಾರು ತೆಗೆದಿದೆ. ಇಷ್ಟೇ ಅಲ್ಲ 3ನೇ ಟಿ20 ಪಂದ್ಯದಿಂದ ಹಿಂದೆ ಸರಿಯೋ ಎಚ್ಚರಿಕೆ ನೀಡಿದೆ.

Tamilnadu feels that it will not be able to host the game under the BCCI new guidelines
Author
Bengaluru, First Published Oct 10, 2018, 11:45 AM IST
  • Facebook
  • Twitter
  • Whatsapp

ಚೆನ್ನೈ(ಅ.10): ಬಿಸಿಸಿಐ ನೂತನ ನಿಯಮ ಇದೀಗ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ. ಉಚಿತ ಟಿಕೆಟ್(ಕಾಂಪ್ಲಿಮೆಂಟರಿ ಪಾಸ್) ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ‌ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಇಂದೋರ್ ಪಂದ್ಯ ಸ್ಥಳಾಂತರವಾದ ಬೆನ್ನಲ್ಲೇ ಇದೀಗ ಚೆನ್ನೈನಲ್ಲಿ ಆಯೋಜಿಸಲಾಗಿರುವ ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 3ನೇ ಟಿ30 ಪಂದ್ಯದ ಮೇಲೆ ಕಾರ್ಮೋಡ ಕವಿದಿದೆ.

ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಐ, ಜೆ ಹಾಗೂ ಕೆ ಸ್ಟಾಂಡ್‌ಗಳು ಮುಚ್ಚಲಾಗಿದೆ. ಹೀಗಾಗಿ ಸದ್ಯ 24,000 ಆಸನ ವ್ಯವಸ್ಥೆ ಲಭ್ಯವಿದೆ. ಹೀಗಾಗಿ 2400 ಉಚಿತ ಪಾಸ್‌ಗಳಲ್ಲಿ ತಮಿಳುನಾಡು ಕ್ರಿಕೆಟ್ ಸಂಸ್ಥೆಗೆ 600 ಟಿಕೆಟ್ ಸಿಗಲಿದೆ.  ಇಷ್ಟೇ ಅಲ್ಲ ಸಹಭಾಗಿತ್ವದ ಸಂಸ್ಥೆಗಳಿಗೆ ರಿಯಾಯ್ತಿ ದರದಲ್ಲಿ ಟಿಕೆಟ್ ನೀಡಬೇಕಿದೆ. ಹೀಗಾಗಿ  ಪಂದ್ಯ ಆಯೋಜಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ.

ಬಿಸಿಸಿಐನ ನೂತನ ಸಂವಿಧಾನದ ಪ್ರಕಾರ ಕ್ರೀಡಾಂಗಣದ ಆಸನಗಳ ಸಾಮರ್ಥ್ಯದ ಶೇ.90ರಷ್ಟು ಆಸನಗಳ ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬೇಕು. ಇನ್ನುಳಿದ ಶೇ.10ರಷ್ಟು ಟಿಕೆಟ್'ನಲ್ಲಿ 5ರಷ್ಟನ್ನು ಬಿಸಿಸಿಐಗೆ ನೀಡಬೇಕಿದೆ.  ಈ ನಿರ್ಧಾರ ಸಡಿಲಿಸಿದ  ಬಿಸಿಸಿಐ ಇದೀಗ 600 ಹೆಚ್ಚುವರಿ ಉಚಿತ ಪಾಸ್ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೀಡಲು ನಿರ್ಧರಿಸಿದೆ. 

ಮಧ್ಯಪ್ರದೇಶ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅ.24ರಂದು ಇಂದೋರ್‌ನಲ್ಲಿ ನಡೆಯಬೇಕಿದ್ದ ಭಾರತ- ವಿಂಡೀಸ್ ನಡುವಿನ ಪಂದ್ಯ ವಿಶಾಖಪಟ್ಟಣಕ್ಕೆ ಸ್ಥಳಾಂತರಗೊಂಡಿತ್ತು.  ಇದೀಗ ಚೆನ್ನೈ ಪಂದ್ಯ ಕೂಡ ಸ್ಥಳಾಂತರವಾಗೋ ಸಾಧ್ಯತೆ ಇದೆ.

Follow Us:
Download App:
  • android
  • ios