ಟಿಟಿ ವಿಶ್ವ ರ‍್ಯಾಂಕಿಂಗ್: ಸತ್ಯನ್‌ಗೆ 28ನೇ ಸ್ಥಾನ
ಟಿಟಿ ವಿಶ್ವ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಇದೇ ಮೊದಲ ಭಾರಿಗೆ 30ರೊಳಗೆ ಭಾರತೀಯ ಆಟಗಾರ ಕಾಣಿಸಿಕಂಡಿದ್ದಾರೆ. ಚೆನ್ನೈ ಮೂಲದ ದಿ ಸತ್ಯನ ಇದೀಗ 28ನೇ ಸ್ಥಾನ ಅಲಂಕರಿಸಿದ್ದಾರೆ.
ನವದೆಹಲಿ(ಜ.31): ನೂತನವಾಗಿ ಬಿಡುಗಡೆಗೊಂಡಿರುವ ವಿಶ್ವ ಟೇಬಲ್ ಟೆನಿಸ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಜಿ.ಸತ್ಯನ್ 28ನೇ ಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಪುರುಷರ ಸಿಂಗಲ್ಸ್‌ನ ಅಗ್ರ 30ರೊಳಗೆ ಸ್ಥಾನ ಪಡೆದ ಮೊದಲ ಭಾರತೀಯ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಮಹಿಳಾ ಹಾಕಿ ತಂಡಕ್ಕೆ ಮನೋವೈದ್ಯೆ ನೆರವು
ಚೆನ್ನೈ ಮೂಲದ ಆಟಗಾರ ಕಳೆದ ವರ್ಷದ ಅಂತ್ಯಕ್ಕೆ 31ನೇ ಸ್ಥಾನದಲ್ಲಿದ್ದರು. 3 ಸ್ಥಾನಗಳ ಏರಿಕೆ ಕಾಣುವ ಮೂಲಕ ಸತ್ಯನ್ ಅಗ್ರ 30ರೊಳಗೆ ಸ್ಥಾನ ಪಡೆದಿದ್ದು, ಈ ವರ್ಷದಂತ್ಯದೊಳಗೆ ಅಗ್ರ 20ರಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ಕಳೆದ ವರ್ಷದ ಆರಂಭದಲ್ಲಿ ಸತ್ಯನ್ 49ನೇ ಸ್ಥಾನದಲ್ಲಿದ್ದರು.
ಇದನ್ನೂ ಓದಿ: ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್ : ಕರ್ನಾಟಕಕ್ಕೆ ಆಘಾತ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಕರ್ಷಕ ಪ್ರದರ್ಶನ ತೋರಿದ ಅವರು, ಕತಾರ್ ಓಪನ್, ಆಸ್ಪ್ರೇಲಿಯನ್ ಓಪನ್ ಹಾಗೂ ಆಸ್ಟ್ರಿಯನ್ ಓಪನ್‌ನಲ್ಲಿ ಅಂತಿಮ 16ರ ಸುತ್ತು ಪ್ರವೇಶಿಸಿದ್ದರು. ಸತ್ಯನ್ ಮುಂದಿನ ತಿಂಗಳು ತರಬೇತಿಗಾಗಿ ದಕ್ಷಿಣ ಕೊರಿಯಾಕ್ಕೆ ತೆರಳಲಿದ್ದಾರೆ.