ಒಂದು ರಾಜ್ಯ, ಒಂದು ಮತಕ್ಕೆ ಸುಪ್ರೀಂ ಬ್ರೇಕ್..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 10:37 AM IST
Supreme Court Modifies One State, One Vote Policy Approves Draft Cricket Board Draft Constitution
Highlights

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎ.ಎಂ. ಖಾನ್‌ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನೊಳ ಗೊಂಡ ತ್ರಿಸದಸ್ಯ ಪೀಠ ತಮಿಳುನಾಡಿನ ರಿಜಿಸ್ಟ್ರಾರ್ ಜನರಲ್‌ಗೆ ಸಂವಿಧಾನವನ್ನು ದಾಖಲೆ ರೂಪದಲ್ಲಿ ತರಲು 4 ವಾರಗಳ ಕಾಲಾವಕಾಶ ನೀಡಿದೆ. ಒಂದೊಮ್ಮೆ ರಾಜ್ಯ ಕ್ರಿಕೆಟ್ ಸಂಸ್ಥೆಗಳು 30 ದಿನಗಳೊಳಗೆ ಸಂವಿಧಾನವನ್ನು ಅಳವಡಿಸಿಕೊಳ್ಳದಿದ್ದರೆ, ಅದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಸಿದೆ. 

ನವದೆಹಲಿ[ಆ.10] ನ್ಯಾ.ಲೋಧಾ ಸಮಿತಿ ಶಿಫಾರಸು ಮಾಡಿದ್ದ ಒಂದು ರಾಜ್ಯ, ಒಂದು ಮತ ನೀತಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿತು. ಇದರೊಂದಿಗೆ ಮಹಾರಾಷ್ಟ್ರ ಹಾಗೂ ಗುಜರಾತ್‌ನ ಎಲ್ಲಾ ಮೂರು ಕ್ರಿಕೆಟ್ ಸಂಸ್ಥೆಗಳಿಗೆ ಮತ ಚಲಾಯಿಸುವ ಹಕ್ಕು ನೀಡಿದೆ. ಜತೆಗೆ ಕೆಲ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಲೋಧಾ ಸಮಿತಿಯ ಕರಡು ಸಂವಿಧಾನಕ್ಕೆ ಅನುಮೋದನೆ ನೀಡಿದ್ದು, ರಾಜ್ಯ ಸಂಸ್ಥೆಗಳಿಗೆ ಅನುಮೋದಿತ ಬಿಸಿಸಿಐ ಸಂವಿಧಾನವನ್ನು ಅಳವಡಿಸಲು 30 ದಿನಗಳ ಗಡುವು ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎ.ಎಂ. ಖಾನ್‌ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನೊಳ ಗೊಂಡ ತ್ರಿಸದಸ್ಯ ಪೀಠ ತಮಿಳುನಾಡಿನ ರಿಜಿಸ್ಟ್ರಾರ್ ಜನರಲ್‌ಗೆ ಸಂವಿಧಾನವನ್ನು ದಾಖಲೆ ರೂಪದಲ್ಲಿ ತರಲು 4 ವಾರಗಳ ಕಾಲಾವಕಾಶ ನೀಡಿದೆ. ಒಂದೊಮ್ಮೆ ರಾಜ್ಯ ಕ್ರಿಕೆಟ್ ಸಂಸ್ಥೆಗಳು 30 ದಿನಗಳೊಳಗೆ ಸಂವಿಧಾನವನ್ನು ಅಳವಡಿಸಿಕೊಳ್ಳದಿದ್ದರೆ, ಅದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಜತೆಗೆ ರೈಲ್ವೇಸ್, ಸರ್ವೀಸಸ್ ಹಾಗೂ ವಿಶ್ವ ವಿದ್ಯಾಲಯಗಳು ಬಿಸಿಸಿಐ ಪೂರ್ಣಾವಧಿ ಸದಸ್ಯತ್ವವನ್ನು ಮರಳಿ ಪಡೆದಿವೆ.

ಒಂದು ರಾಜ್ಯ, ಒಂದು ಮತ ನೀತಿ ಶಿಫಾರಸು ಆಗಿದ್ದೇಕೆ?

ಭಾರತೀಯ ಕ್ರಿಕೆಟ್‌ನಲ್ಲಿ ಪ್ರಭಾವಿ ರಾಜ್ಯ ಸಂಸ್ಥೆಗಳ ಅಧಿಕಾರವನ್ನು ನಿಯಂತ್ರಿಸುವ ಸಲುವಾಗಿ ಈ ನೀತಿಯನ್ನು ನ್ಯಾ.ಲೋಧಾ ಸಮಿತಿ ಶಿಫಾರಸು ಮಾಡಿತ್ತು. ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ 3 ಕ್ರಿಕೆಟ್ ಸಂಸ್ಥೆಗಳಿದ್ದು, ಬಿಸಿಸಿಐ ಸಭೆಗಳಲ್ಲಿ ಈ ಸಂಸ್ಥೆಗಳ ಮತ ದೊಡ್ಡ ಮಟ್ಟದ ಪರಿಣಾಮ ಬೀರುತ್ತಿತ್ತು. ಅಲ್ಲದೇ ಈಶಾನ್ಯ ರಾಜ್ಯಗಳನ್ನು ಪ್ರತಿನಿಧಿಸುವವರೇ ಇಲ್ಲದಂತಾಗಿತ್ತು. ಹೀಗಾಗಿ ಒಂದು ರಾಜ್ಯ ಒಂದು ಮತ ನೀತಿ ಅಳವಡಿಸಿದರೆ ಬಿಸಿಸಿಐ ಸಭೆಗಳಲ್ಲಿ 28 ರಾಜ್ಯಗಳಿಂದ ತಲಾ ಒಬ್ಬರು ಪ್ರತಿನಿಧಿಗಳು ಪಾಲ್ಗೊಳ್ಳಬಹುದು ಎನ್ನುವ ಕಾರಣಕ್ಕೆ ಈ ಶಿಫಾರಸು ಮಾಡಲಾಗಿತ್ತು. 

loader