ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆದರೆ ನಾಯಕನಾಗಿ ಫೇಲ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Sep 2018, 7:58 PM IST
Sunil Gavaskar question Virat kohli captaincy in test cricket
Highlights

ವಿರಾಟ್ ಕೊಹ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮನ್. ಆದರೆ ನಾಯಕನಾಗಿ ಕೊಹ್ಲಿ ಯಶಸ್ಸು ಸಾಧಿಸಿಲ್ವಾ? ಸೌತ್ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆ ವಿದೇಶಿ ನೆಲದಲ್ಲಿ ಕೊಹ್ಲಿ ಎಡವುತ್ತಿರುವುದು ಯಾಕೆ? ಇಲ್ಲಿದೆ.

ಲಂಡನ್(ಸೆ.04): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್. ತಂಡವನ್ನ ಗೆಲ್ಲಿಸೋ ಜವಾಬ್ದಾರಿಯನ್ನ ಸಂಪೂರ್ಣವಾಗಿ ಹೆಗಲ ಮೇಲೆ ಹೊತ್ತು ಬ್ಯಾಟಿಂಗ್ ಪ್ರದರ್ಶನ ನೀಡಬಲ್ಲ ಬ್ಯಾಟ್ಸ್‌ಮನ್ ಕೊಹ್ಲಿ. ಆದರೆ ತಂಡವನ್ನ ಮುನ್ನಡೆಸುವಲ್ಲಿ ವಿರಾಟ್ ಕೊಹ್ಲಿ ಎಡವಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಆದರೆ ನಾಯಕನಾಗಿ ಫೇಲ್ ಆಗಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ. ತಂಡದ ಪ್ಲೇಯಿಂಗ್ 11 ಆಯ್ಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಕೊಹ್ಲಿ ಪದೇ ಪದೇ ತಪ್ಪು ಮಾಡುತ್ತಿದ್ದಾರೆ ಎಂದು ಗವಾಸ್ಕರ್ ಎಚ್ಚರಿಸಿದ್ದಾರೆ.

ಸೌತ್ಆಫ್ರಿಕಾ ಹಾಗೂ ಇದೀಗ ಇಂಗ್ಲೆಂಡ್ ಪ್ರವಾಸದಲ್ಲೂ ಕೊಹ್ಲಿ ತಪ್ಪುಗಳು ಮರುಕಳಿಸುತ್ತಿದೆ. ಇದು ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಕೊಹ್ಲಿ ಏಕಾಂಗಿ ಹೋರಾಟ ತಂಡವನ್ನ ಕಾಪಾಡುವುದಿಲ್ಲ ಎಂದು ಗವಾಸ್ಕರ್ ಸೂಚಿಸಿದ್ದಾರೆ.

loader