ಭಾರತ ಪರ ಆಡಲು ನಗಾಲ್ 42 ಲಕ್ಷ ರು. ಶುಲ್ಕ ಕೇಳಿದ್ದರು; ಭಾರತ ಟೆನಿಸ್ ಸಂಸ್ಥೆ ಆಕ್ರೋಶ
ಡೇವಿಸ್ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸುಮಿತ್ ನಗಾಲ್ ವಾರ್ಷಿಕ 50,000 ಅಮೆರಿಕನ್ ಡಾಲರ್ ಕೇಳಿದ್ದರು ಎಂದು ಎಐಟಿಎ ಆರೋಪಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಕಳೆದ ವಾರ ಸ್ವೀಡನ್ ವಿರುದ್ಧದ ಡೇವಿಸ್ ಕಪ್ ವಿಶ್ವ ಗುಂಪು-1ರ ಪಂದ್ಯದಲ್ಲಿ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಆಡದಿರುವುದಕ್ಕೆ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಮತ್ತೆ ಆಕ್ರೋಶ ವ್ಯಕ್ತಪಡಿಸಿದೆ. ದೇಶಕ್ಕಾಗಿ ಆಡಲು ನಗಾಲ್ 50000 ಅಮೆರಿಕನ್ ಡಾಲರ್(ಅಂದಾಜು ₹41.81 ಲಕ್ಷ) ವಾರ್ಷಿಕ ಶುಲ್ಕಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿರುವ ಎಐಟಿಎ ಪ್ರಧಾನ ಕಾರ್ಯದರ್ಶಿ ಅನಿಲ್ ಧೂಪರ್, ‘ಯಾವುದೇ ಆಟಗಾರ ಭಾರತ ಪರ ಆಡಲು ಯಾಕೆ ಹಣ ಕೇಳಬೇಕು?. ಸುಮಿತ್ 50000 ಅಮೆರಿಕನ್ ಡಾಲರ್ ವಾರ್ಷಿಕ ಶುಲ್ಕ ನೀಡಲು ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಆಡಲ್ಲ ಎಂದಿದ್ದರು. ಇದು ಸರಿಯೋ ತಪ್ಪೋ ಎಂಬುದನ್ನು ದೇಶವೇ ನಿರ್ಧರಿಸಲಿ. ಬೇರೆ ಯಾರೂ ಈ ರೀತಿ ಬೇಡಿಕೆಯಿಟ್ಟಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೆನ್ನೈ ಟೆಸ್ಟ್: ಅಶ್ವಿನ್ ಶತಕ, ಸವಾಲಿನ ಮೊತ್ತ ಕಲೆಹಾಕಿ ಭಾರತ ಆಲೌಟ್
ಇನ್ನು, ಧೂಪರ್ ಆರೋಪವನ್ನು ನಗಾಲ್ ಸಮರ್ಥಿಸಿಕೊಂಡಿದ್ದಾರೆ. ಶುಲ್ಕ ಕೇಳುವುದು ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಯಾವುದೇ ಆಟಗಾರನಿಗೂ ಅಭ್ಯಾಸಕ್ಕೆ ಆರ್ಥಿಕ ಬೆಂಬಲ ಅಗತ್ಯ’ ಎಂದಿದ್ದಾರೆ.
ಇತ್ತೀಚೆಗಷ್ಟೇ ‘ಡೇವಿಸ್ ಕಪ್‌ನಲ್ಲಿ ಆಡುವಂತೆ ಎಲ್ಲ ಅಗ್ರ ಆಟಗಾರರಿಗೂ ನಾಯಕ ಹಾಗೂ ಆಡಳಿತ ಮಂಡಳಿ ಪ್ರತ್ಯೇಕವಾಗಿ ಕರೆ ಮಾಡಿ ಕೇಳಲಾಗಿತ್ತು. ಆದರೆ ಎಲ್ಲರೂ ನಿರಾಕರಿಸಿದ್ದರು’ ಎಂದು ಧೂಪರ್ ಹೇಳಿದ್ದರು.
ವೇಟ್‌ಲಿಫ್ಟಿಂಗ್: ಭಾರತಕ್ಕೆ 2 ಚಿನ್ನ ಸೇರಿ ಆರು ಪದಕ
ಸುವಾ(ಫಿಜಿ): ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಭಾರತ 2 ಚಿನ್ನ ಸೇರಿ ಒಟ್ಟು 6 ಪದಕ ಗೆದ್ದಿದೆ. ಗುರುವಾರ 19 ವರ್ಷದ ವಲ್ಲೂರಿ ಅಜಯ ಬಾಬು ಕಿರಿಯರ 81 ಕೆ.ಜಿ. ವಿಭಾಗದಲ್ಲಿ 326 ಕೆ.ಜಿ. ಭಾರ ಎತ್ತಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಸಾಯಿರಾಜ್ ಪರ್ದೇಶಿ 81 ಕೆ.ಜಿ. ಯೂತ್ ವಿಭಾಗದಲ್ಲಿ ಚಿನ್ನ, ಜೂನಿಯರ್ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಲಾಲ್ರುವಾಟ್‌ಫೆಲಾ ಪುರುಷರ 89 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪಡೆದರು. ಹೃದಾನಂದ ದಾಸ್ 89 ಕೆ.ಜಿ.ಯ ಯೂತ್ ವಿಭಾಗದಲ್ಲಿ ಬೆಳ್ಳಿ, ಜೂನಿಯರ್ ವಿಭಾಗದಲ್ಲಿ ಕಂಚು ತಮ್ಮದಾಗಿಸಿಕೊಂಡರು.
ಸುಮಿತ್ ನಗಾಲ್ ಬೇಕಂತಲೇ ಡೇವಿಸ್ ಕಪ್ ಆಡಲಿಲ್ಲ ಅನಿಸುತ್ತೆ: ಎಐಟಿಎ!
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಂಚು ಗೆದ್ದ ಪಾಕ್ ಆಟಗಾರರಿಗೆ 100 ಡಾಲರ್ ಬಹುಮಾನ!
ಲಾಹೋರ್: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ 3ನೇ ಸ್ಥಾನ ಪಡೆದ ಪಾಕಿಸ್ತಾನ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ, ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್‌ಎಫ್) ತಲಾ 100 ಡಾಲರ್ (ಅಂದಾಜು 28000 ಪಾಕಿಸ್ತಾನಿ ರು./ ₹8371) ಬಹುಮಾನ ಘೋಷಿಸಿದೆ. ಪಿಎಚ್‌ಎಫ್ ಘೋಷಿಸಿರುವ ಮೊತ್ತವನ್ನು ಉಲ್ಲೇಖಿಸಿ ಸಾಮಾಜಿಕ ತಾಣಗಳಲ್ಲಿ ಅನೇಕರು ಟ್ರೋಲ್ ಮಾಡಿದ್ದಾರೆ. ಚಾಂಪಿಯನ್ ಪಟ್ಟಕ್ಕೇರಿದ ಭಾರತ ತಂಡಕ್ಕೆ ಹಾಕಿ ಇಂಡಿಯಾ ಪ್ರತಿ ಆಟಗಾರರಿಗೆ 3 ಲಕ್ಷ ರು., ಸಹಾಯಕ ಸಿಬ್ಬಂದಿಗೆ 1.5 ಲಕ್ಷ ರು. ಬಹುಮಾನ ಘೋಷಿಸಿದೆ.