ನವದೆಹಲಿ[ಜು.19]: ವಿಶ್ವ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ಅಸ್ಸಾಂನ ಹಿಮಾ ದಾಸ್‌ಗೆ ಲೋಕಸಭೆ ಅಭಿನಂದನೆ ಸಲ್ಲಿಸಿತು.

ಮಹಿಳೆಯರ 400 ಮೀ. ಓಟವನ್ನು 51.46 ಸೆಕೆಂಡುಗಳಲ್ಲಿ ಕ್ರಮಿಸಿ, ಹಿಮಾ ಚಿನ್ನ ಗೆದ್ದಿದ್ದರು. ಲೋಕಸಭೆ ಅಧಕ್ಷೆ ಸುಮಿತ್ರಾ ಮಹಾಜನ್ ಮಾತನಾಡಿ, ‘ ಹಿಮಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ. ಅವರು ಭವಿಷ್ಯದಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂದು ಸಭೆ ಹಾರೈಸುತ್ತದೆ’ ಎಂದರು.

ಹಿಮಾ ದಾಸ್ ಸಾಧನೆಯನ್ನು ರಾಷ್ಟ್ರಪತಿ ರಾಮ್’ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವಾರು ಮಂದಿ ಶ್ಲಾಘಿಸಿದ್ದಾರೆ.