ಮಹಿಳಾ ಟಿ20 ಲೀಗ್: ಕೇವಲ 60 ಎಸೆತದಲ್ಲಿ ಸ್ಮೃತಿ ಮಂದಾನ ಶತಕ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 10:57 PM IST
Smriti Mandhana smashes 60-ball T20 hundred in England
Highlights

ಕಿಯಾ ಮಹಿಳಾ ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ ಭಾರತದ ಸ್ಮೃತಿ ಮಂದಾನ ಪ್ರತಿ ಪಂದ್ಯದಲ್ಲಿ ಅಬ್ಬರಿಸುತ್ತಿದ್ದಾರೆ. ಇದೀಗ ಸ್ಫೋಟಕ ಇನ್ನಿಂಗ್ಸ್ ಮೂಲಕ  ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಮಂದಾನ ಇನ್ನಿಂಗ್ಸ್ ಹೈಲೈಟ್ಸ್ ಇಲ್ಲಿದೆ.

ಮ್ಯಾಂಚೆಸ್ಟರ್(ಆ.03): ಕಿಯಾ ಮಹಿಳಾ ಟಿ20 ಸೂಪರ್ ಲೀಗ್ ಟೂರ್ನಿಯಲ್ಲಿ ಭಾರತದ ಸ್ಮೃತಿ ಮಂದಾನ ಅಬ್ಬರ ಮುಂದುವರಿದಿದೆ. ಲ್ಯಾನ್ಸಾಶೈರ್ ಥಂಡರ್ ವಿರುದ್ಧದ ಪಂದ್ಯದಲ್ಲಿ ವೆಸ್ಟರ್ನ್ ಸ್ಟ್ರೋಮ್ ತಂಡದ ಸ್ಮೃತಿ ಕೇವಲ 60 ಎಸೆತದಲ್ಲಿ ಸೆಂಚುರಿ ಬಾರಿಸಿದ್ದಾರೆ.

ಲ್ಯಾನ್ಸಾಶೈರ್ ನೀಡಿದ 154 ರನ್ ಗುರಿ ಬೆನ್ನಟ್ಟಿದ ವೆಸ್ಟರ್ನ್ ಸ್ಟ್ರೋಮ್ ತಂಡಕ್ಕೆ ಸ್ಮೃತಿ ಮಂದಾನ ಸ್ಫೋಟಕ ಇನ್ನಿಂಗ್ಸ್  ಮೂಲಕ ಗೆಲುವು ತಂದುಕೊಟ್ಟರು. ಮಂದಾನ 61 ಎಸೆತದಲ್ಲಿ 12 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ನೆರವಿಂದ 102 ರನ್ ಸಿಡಿಸಿದರು. 

ಕಿಯಾ ಸೂಪರ್ ಲೀಗ್ ಮಹಿಳಾ ಟಿ20 ಟೂರ್ನಿಯಲ್ಲಿ ಮಂದಾನ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. 48, 37, 52*, 43*, ಹಾಗೂ 102 ರನ್ ಸಿಡಿಸೋ ಮೂಲಕ ಓಟ್ಟು 282 ರನ್ ದಾಖಲಿಸಿದ್ದಾರೆ. 

loader