ಟಾಪ್ ಯೋಜನೆಯಿಂದ ಶೂಟರ್ ಜಿತು ರೈ ಔಟ್..!

First Published 19, Jul 2018, 11:39 AM IST
Shooter Jitu Rai among seven dropped from TOP Scheme
Highlights

ಇಲ್ಲಿ ನಡೆದ ಮಿಷನ್ ಒಲಿಂಪಿಕ್ ಸೆಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಯಶಸ್ವಿನಿ ದೇಸ್ವಾಲ್, ಅಮನ್‌ಪ್ರೀತ್, ನೀರಜ್ ಕುಮಾರ್ ಯೋಜನೆಯಿಂದ ಹೊರಬಿದ್ದಿರುವ ಇನ್ನಿತರ ಶೂಟರ್ ಗಳಾಗಿದ್ದಾರೆ. ಅಥ್ಲೀಟ್‌ಗಳಾದ ಲಿಲಿ ದಾಸ್, ಓಂ ಪ್ರಶಾಕ್ ಹಾಗೂ ಮೋಹನ್ ಕುಮಾರ್‌ರನ್ನು ಸಹ ಯೋಜನೆಯಿಂದ ಕೈಬಿಡಲಾಗಿದೆ.

ನವದೆಹಲಿ(ಜು.19]: ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ತೋರಿರುವ ಅನುಭವಿ ಶೂಟರ್ ಜಿತು ರೈ ಸೇರಿ ಒಟ್ಟು 4 ಶೂಟರ್‌ಗಳು ಹಾಗೂ ಮೂವರು ಅಥ್ಲೀಟ್‌ಗಳನ್ನು ಕೇಂದ್ರ ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್ಸ್) ಯೋಜನೆಯಿಂದ ಕೈಬಿಡಲಾಗಿದೆ.

ಮಂಗಳವಾರ ಇಲ್ಲಿ ನಡೆದ ಮಿಷನ್ ಒಲಿಂಪಿಕ್ ಸೆಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಯಶಸ್ವಿನಿ ದೇಸ್ವಾಲ್, ಅಮನ್‌ಪ್ರೀತ್, ನೀರಜ್ ಕುಮಾರ್ ಯೋಜನೆಯಿಂದ ಹೊರಬಿದ್ದಿರುವ ಇನ್ನಿತರ ಶೂಟರ್ ಗಳಾಗಿದ್ದಾರೆ. ಅಥ್ಲೀಟ್‌ಗಳಾದ ಲಿಲಿ ದಾಸ್, ಓಂ ಪ್ರಶಾಕ್ ಹಾಗೂ ಮೋಹನ್ ಕುಮಾರ್‌ರನ್ನು ಸಹ ಯೋಜನೆಯಿಂದ ಕೈಬಿಡಲಾಗಿದೆ.

ಜಿತು ರೈ 2014ರ ಏಷ್ಯನ್ ಗೇಮ್ಸ್’ನಲ್ಲಿ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನಕ್ಕೆ ಗುರಿಯಿಡುವಲ್ಲಿ ಸಫಲವಾಗಿದ್ದರು. ಇನ್ನು ಗೋಲ್ಡ್’ಕೋಸ್ಟ್’ನಲ್ಲಿ ನಡೆದ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ 10 ಮೀಟರ್ ಪಿಸ್ತೂಲ್ ವಿಭಾಗದಲ್ಲೂ ಜಿತು ಚಿನ್ನ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

loader