16ರ ಪೋರ ಸೌರಭ್ ಇದೀಗ ಕಿರಿಯರ ವಿಶ್ವ ಚಾಂಪಿಯನ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Sep 2018, 10:10 AM IST
Sensational Saurabh smashes junior record for gold at world championships
Highlights

ಗುರುವಾರ ಇಲ್ಲಿ ನಡೆದ ಪುರುಷರ ವಿಭಾಗದ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ 16 ವರ್ಷದ ಸೌರಭ್, 245.5 ಅಂಕ ಗಳಿಸಿ ತಾವೇ ನಿರ್ಮಿಸಿದ್ದ 243.7 ಅಂಕಗಳ ದಾಖಲೆ ಮುರಿದರು.

ಚಂಗ್ವಾನ್(ದ.ಕೊರಿಯಾ): ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನ ಭಾರತದ ಶೂಟರ್ ಸೌರಭ್ ಚೌಧರಿ, ನೂತನ ವಿಶ್ವದಾಖಲೆ ನಿರ್ಮಿಸಿ ಕಿರಿಯರ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದರೆ, ಮತ್ತೆ ಹಿರಿಯ ಶೂಟರ್‌ಗಳು ನೀರಸ ಪ್ರದರ್ಶನ ತೋರಿದರು.

ಗುರುವಾರ ಇಲ್ಲಿ ನಡೆದ ಪುರುಷರ ವಿಭಾಗದ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ 16 ವರ್ಷದ ಸೌರಭ್, 245.5 ಅಂಕ ಗಳಿಸಿ ತಾವೇ ನಿರ್ಮಿಸಿದ್ದ 243.7 ಅಂಕಗಳ ದಾಖಲೆ ಮುರಿದರು. ಇದೇ ವಿಭಾಗದಲ್ಲಿ ಅರ್ಜುನ್ ಸಿಂಗ್ ಚೀಮಾ, 218 ಅಂಕ ಗಳಿಸಿ ಕಂಚು ಗೆದ್ದರು. ಸೌರಭ್ ಇತ್ತೀಚೆಗಷ್ಟೇ ನಡೆದ ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನ ಗೆದ್ದಿದ್ದರು.

ಇದನ್ನು ಓದಿ: ಏಷ್ಯನ್ ಗೇಮ್ಸ್: ಭಾರತಕ್ಕೆ ಡಬಲ್ ಧಮಾಕ; ಚಿನ್ನಕ್ಕೆ ಮುತ್ತಿಕ್ಕಿದ 16 ವರ್ಷದ ಪೋರ

ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಏಷ್ಯನ್ ಗೇಮ್ಸ್ ಕಂಚು ವಿಜೇತ ಭಾರತದ ಅಭಿಷೇಕ್ ವರ್ಮಾ, ಫೈನಲ್‌ಗೆ ಅರ್ಹತೆ ಗಿಟ್ಟಿಸಿದರಾದರೂ ಒಲಿಂಪಿಕ್ಸ್‌ಗೆ ಸ್ಥಾನ ಖಚಿತಪಡಿಸುವಲ್ಲಿ ವಿಫಲರಾದರು. ಕಿರಿಯರ 10 ಮೀ. ಏರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಸೌರಭ್ ಚೌಧರಿ, ಅರ್ಜುನ್ ಸಿಂಗ್ ಮತ್ತು ಅನ್ಮೋಲ್'ರನ್ನೊಳಗೊಂಡ ಭಾರತ ತಂಡ, 1730 ಅಂಕಗಳಿಸಿ ಬೆಳ್ಳಿ ಜಯಿಸಿತು.  ಕೊರಿಯಾ ತಂಡ ಕೇವಲ 2 ಹೆಚ್ಚುವರಿ ಅಂಕಗಳಿಂದ ಚಿನ್ನದ ಪದಕಕ್ಕೆ ಮುತ್ತಿಟ್ಟಿತು.

loader