ಮುಂಬೈ(ಆ.03): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನೀಡಿ ತಂಡವನ್ನ ಕಾಪಾಡಿದರು. ಇಂಗ್ಲೆಂಡ್ ದಾಳಿಗೆ ಸಮರ್ಥವಾಗಿ ಬ್ಯಾಟ್ ಬೀಸಿದ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದರು.

ಕೊಹ್ಲಿ ಸೆಂಚುರಿ ಸಿಡಿಸಿದ ಬಳಿಕೆ ಕೊರಳಲ್ಲಿದ್ದ ನಿಶ್ಚಿತಾರ್ಥದ ರಿಂಗ್‌ಗೆ ಮುತ್ತಿಕ್ಕಿದರು. ಇದೇ ವೇಳೆ ಗ್ಯಾಲರಿಯಲ್ಲಿದ್ದ ಪತ್ನಿ ಅನುಷ್ಕಾ ಶರ್ಮಾ ಕೊಹ್ಲಿ ಸಾಧನೆಗೆ ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ವಿರಾಟ್ ಕೊಹ್ಲಿ ಎಂಗೇಜ್‌ಮೆಂಟ್ ರಿಂಗ್‌ಗೆ ಮುತ್ತಿಕ್ಕೋ ಮೂಲಕ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿಯನ್ನ ನೆನಪಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ವೀಕ್ಷಿಸಿದ ವಿನೋದ್ ಕಾಂಬ್ಳಿ ತಮ್ಮ ಸೆಲೆಬ್ರೇಷನ್ ನೆನಪಿಸಿಕೊಂಡಿದ್ದಾರೆ.

 

 

1996ರ ಏಕದಿನ ಪಂದ್ಯದಲ್ಲಿ ವಿನೋದ್ ಕಾಂಬ್ಳಿ ಶತಕ ಸಿಡಿಸಿ ತಮ್ಮ ಎಂಗೇಜ್‌ಮೆಂಟ್ ರಿಂಗ್‌ಗೆ ಮುತ್ತಿಕ್ಕಿದ್ದರು. ಎರಡು ಫೋಟೋವನ್ನ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿರುವ ಕಾಂಬ್ಳಿ, ಸಂಭ್ರಮಾಚರಣೆಯಲ್ಲಿ ಹೋಲಿಕೆ. ಆದರೆ ಒಬ್ಬರ ಪತ್ನಿ ಮೈದಾನದಲ್ಲಿದ್ದರೆ, ಮತ್ತೊಬ್ಬರ ಪತ್ನಿ ಮನೆಯಲ್ಲಿದ್ದರು ಎಂದು ಕಾಂಬ್ಳಿ ಟ್ವೀಟ್ ಮಾಡಿದ್ದಾರೆ.